Breaking News

DC ಗೌಪ್ಯ ಭೇಟಿ.! ಅಧಿಕಾರಿಗಳ ಬುಡದಲ್ಲಿ ತಲ್ಲಣ.! ಅಲರ್ಟ್ ಆದ ಅಧಿಕಾರಿಗಳು.!?

DC ಗೌಪ್ಯ ಭೇಟಿ.!
ಅಧಿಕಾರಿಗಳ ಬುಡದಲ್ಲಿ ತಲ್ಲಣ.!
ಅಲರ್ಟ್ ಆದ ಅಧಿಕಾರಿಗಳು.!?


ತುಂಗಾವಾಣಿ.
ಗಂಗಾವತಿ: ಜ-12 ನಿನ್ನೆಯ ದಿನ ನಡೆದ ಗ್ರಾಮ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ಪ್ರಕಟ ಮಾಡಲು ಕನಕಗಿರಿ ಮತ್ತು ಕಾರಟಗಿ ಭಾಗಕ್ಕೆ ಬಂದ ಕೊಪ್ಪಳದ ಜಿಲ್ಲಾಧಿಕಾರಿ  ವಿಕಾಶ ಕಿಶೋರ್ ಸುರಳ್ಕರ್ ಮರಳು ನಿಕ್ಷೇಪಗಳ ಸ್ಥಳಕ್ಕೆ
ಗೌಪ್ಯ ಭೇಟಿ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ,!
ಯಾವುದೇ ಅಧಿಕಾರಿಗಳಿಗೆ ಮಾಹಿತಿ ಕೊಡದೆ ಗಂಗಾವತಿ-ಕಾರಟಗಿ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳಾದ ಡಣಾಪುರ ಹೆಬ್ಬಾಳ ಮುಸ್ಟೂರು ಗ್ರಾಮದಲ್ಲಿ ಸಂಚರಿಸಿ ಮರಳು ಅಡ್ಡೆಗಳಿಗೆ ಭೇಟಿ ಕೊಟ್ಟ DC ಯವರಿಗೆ ಉಪವಿಭಾಗದ ದಂಡಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಸಾಥ್ ಕೊಟ್ಟರು, ಜಂಟಿಯಾಗಿ ಮರಳು ನಿಕ್ಷೇಪಗಳನ್ನು ವೀಕ್ಷಿಸಿದ್ದಾರೆ ಎನ್ನುವ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ.!

ಸಾಂದರ್ಭಿಕ ಚಿತ್ರ: AC ನಾರಾಯಣರಡ್ಡಿ ಕನಕರಡ್ಡಿ

 

ಗಂಗಾವತಿ ತಹಶೀಲ್ದಾರ್ ಹಾಗು ಪೋಲಿಸ್ ಇಲಾಖೆ ಮತ್ತು ಗಣಿ ಇಲಾಖೆಯ ಅಧಿಕಾರಿಗಳನ್ನು ದೂರವಿಟ್ಟು ಕಾರ್ಯಚರಣೆ ಮಾಡಿದ್ದು ಅನುಮಾನಕ್ಕೆ ಎಡೆಮಾಡಿದೆ,!?

ಜಾಹೀರಾತು
ಜಾಹೀರಾತು

 

ಅಲರ್ಟ್ ಆದ ಅಧಿಕಾರಿಗಳು,
ಹೌದು ಗಂಗಾವತಿ ತಾಲ್ಲೂಕಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಮರಳು ದಂಧೆ, ಅಕ್ರಮ ಫಿಲ್ಟರ್ ‌ಮರಳು ‌‌ದಂಧೆ‌ಯ ಬಗ್ಗೆ ಗಂಭೀರವಾಗಿ ಪರಿಗಣಿಸಿದ DC ಯವರು ಯಾವುದೇ ಮುನ್ಸೂಚನೆ ನೀಡದೆ ಖುದ್ದು ಅಖಾಡಕ್ಕೆ ಇಳಿದಿದ್ದು ಅಧಿಕಾರಿಗಳು ಥಂಡಾ ಹೊಡೆದು ಅಲರ್ಟ್ ಆಗಿದ್ದಾರೆ ಎನ್ನುವ ಮಾಹಿತಿ ಅಧಿಕಾರಿಗಳ ವಲಯದಲ್ಲೇ ಕೇಳಿಬರುತ್ತಿದೆ.!?

ಇಂದು ತಾಲ್ಲೂಕು ಮಟ್ಟದ ಟಾಸ್ಕ್ ಫೋರ್ಸ್ ಮರಳು ಮ್ಯಾನಟೆರಿಂಗ್ ಸಮಿತಿಯ ಸಭೆ.!
ಗಂಗಾವತಿ ತಾಲ್ಲೂಕಿನಲ್ಲಿ ಮರಳಿನ ಅಭಾವ ಜಾಸ್ತಿ ಇದ್ದು, ಇದನ್ನೆ ಬಂಡವಾಳ ಮಾಡಿಕೊಂಡ ದಂಧೆಕೊರರು, ರಾಜಸ್ವ ತುಂಬದೆ ಅಕ್ರಮವಾಗಿ ನಡೆಯುತ್ತಿರುವ ಮರಳು ಮಾಫಿಯಾಕ್ಕೆ ಕಡಿವಾಣ ಹಾಕಲು ಮತ್ತು ಮರಳು ನಿಕ್ಷೇಪಗಳ ಬಗ್ಗೆ ಸಭೆ ಕರೆದಿದ್ದಾರೆ ಎನ್ನಲಾಗುತ್ತಿದೆ, ಟಾಸ್ಕ್ ಫೋರ್ಸ್ ಸಮಿತಿಯ ಎಲ್ಲಾ ಅಧಿಕಾರಿಗಳನ್ನು ಬೆಳಿಗ್ಗೆ 11-30ಕ್ಕೆ ಮಂಥನ ಸಭಾಂಗಣದಲ್ಲಿ ಸಭೆ ಕರೆಯಲಾಗಿದೆ,
ಡಿಸಿ ಯವರ ಕಾರ್ಯ ವೈಖರಿಗೆ ಸಾರ್ವಜನಿಕರ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ .!

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Check Also

ಗಂಗಾವತಿ ನಗರಕ್ಕೆ ಬೇಕಿದೆ ಸಿ ಸಿ ಕ್ಯಾಮರಾ ಭದ್ರತೆ.! ಶಾಸಕರು ಇತ್ತ ಗಮನ ಹರಿಸುವರೇ.!?

ಗಂಗಾವತಿ ನಗರಕ್ಕೆ ಬೇಕಿದೆ ಸಿ ಸಿ ಕ್ಯಾಮರಾ ಭದ್ರತೆ.! ಶಾಸಕರು ಇತ್ತ ಗಮನ ಹರಿಸುವರೇ.!? ತುಂಗಾವಾಣಿ ಗಂಗಾವತಿ ಸೆ 27 …