ಗಂಗಾವತಿ: ಹಣ ತ್ರಿಗುಣ ಮಾಡುವುದಾಗಿ ವಂಚನೆ.!
ಮೂವರ ವಂಚಕರ ಬಂಧನ.?
ತುಂಗಾವಾಣಿ
ಗಂಗಾವತಿ ಜ 05 ಹಣವನ್ನು ಕ್ಷಣದಲ್ಲೇ ಮೂರು ಪಟ್ಟು ಮಾಡಿ ಕೊಡುವುದಾಗಿ ನಂಬಿಸಿ ವಂಚಿಸುತ್ತಿದ್ದ ಮೂವರು ಖದೀಮರನ್ನು ನಗರದ ಪೋಲಿಸರು ಹಿಡಿದು ಜೈಲಿಗೆ ಅಟ್ಟಿದ್ದಾರೆ.
ಗಂಗಾವತಿ ನಗರದ ನಿವಾಸಿ ನಬಿಸಾಬ, ಕುಷ್ಟಗಿ ತಾಲೂಕಿನ ಪುರ ಗ್ರಾಮದ ಮಹಾದೇವ, ಹಾಗು ಯಲಬುರ್ಗಾ ತಾಲೂಕಿನ ತಾಳಿಕೇರಿ ಗ್ರಾಮದ ರಾಜಶೇಖರ, ಎನ್ನುವ ವಂಚಕರು ಗಂಗಾವತಿ ನಗರದ ವಿವಿದ ಕಡೆ ಸಾರ್ವಜನಿಕರಿಗೆ ತಮ್ಮ ಸವಿಮಾತಿನಿಂದ ನಂಬಿಸಿ ಹತ್ತುಸಾವಿರ ರೂಗಳು ಕೊಟ್ಟರೆ ಕ್ಷಣ ಮಾತ್ರದಲ್ಲೆ ಮೂರು ಪಟ್ಟು ಮಾಡಿ ಮೂವತ್ತು ಸಾವಿರ ಮಾಡಿ ಕೊಡುವದಾಗಿ ನಂಬಿಸಿ ಐದು ನೂರು ರೂಗಳ ನೋಟಿನ ಆಕಾರದ ಹಾಳೆಗಳಿಗೆ ಕಪ್ಪು ಬಣ್ಣ ಸವರಿ ಮನೆಗೆ ಹೋಗಿ ನೀರಿನಿಂದ ಈ ನೋಟಿನ ಕಂತೆ ತೊಳೆಯಿರಿ ಮೂರು ಪಟ್ಟು ಆಗಿರುತ್ತೆ ಅಂತ ನಂಬಿಸಿ ಅಲ್ಲೆ ಒಂದೆರಡು ನೋಟುಗಳನ್ನು ತೊಳೆದು ತೋರಿಸಿ ನಂತರ ಕಪ್ಪು ಬಣ್ಣದ ಬಳೆದಿರುವ ಪೇಪರ್ ಕಂತೆಗಳನ್ನು ಕೊಟ್ಟು ಮೋಸ ಮಾಡುತ್ತಿದ್ದರು ಎನ್ನಲಾಗಿದೆ.
ಮೋಸ ಮಾಡಿ ಹಣ ವಂಚಿಸುತ್ತಿದ್ದ ಮಾಹಿತಿ ಮೇರೆಗೆ ಗಂಗಾವತಿ ನಗರ ಠಾಣೆಯ ಪೋಲಿಸರು ಕಪ್ಪು ಬಣ್ಣ ಬಳಿದ ಮೂರು ಹಾಗು ಬಿಳಿಬಣ್ಣದ ಎರಡು ಐನೂರು ರೂಪಾಯಿಗಳಿಗೆ ಹೋಲುವ ಪೇಪರ್ ಕಟ್ಟುಗಳ ಜೊತೆ ವಂಚಕರನ್ನು ಸೆದೆಬಡೆದು ಜೈಲಿಗಟ್ಟಿದ್ದಾರೆ.
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.