ಒಂಬತ್ತು PSI ಗಳ ಕೋರಿಕೆ ಮೇರೆಗೆ ವರ್ಗಾವಣೆ.
ತುಂಗಾವಾಣಿ
ಕೊಪ್ಪಳ ನ-17 ಸ್ವತಃ ಕೋರಿಕೆ ಹಾಗು ಆಡಳಿತಾತ್ಮಕ ಕಾರಣಗಳಿಂದಾಗಿ ಬಳ್ಳಾರಿ ವಲಯದ 9 ಜನ ಪಿಎಸ್ಐ ಗಳನ್ನು ವರ್ಗಾವಣೆಗೊಳಿಸಿ ಬಳ್ಳಾರಿ ವಲಯ ಪೋಲಿಸ್ ಮಹಾ ನಿರೀಕ್ಷಕರಾದ ಎಂ ನಂಜುಡಸ್ವಾಮಿ ಆದೇಶಿಸಿದ್ದಾರೆ.
ಸಿಇಎನ್ ಪೋಲಿಸ್ ಠಾಣೆ ಬಳ್ಳಾರಿಯ ಪಿಎಸ್ಐ ಪಿ ಸರಳ ರನ್ನು ತಮ್ಮ ಕೋರಿಕೆಯ ಮೇರೆಗೆ ಹೆಚ್ ಬಿ ಹಳ್ಳಿ ಪೋಲಿಸ್ ಠಾಣೆಯ ಅಪರಾದ ವಿಭಾಗಕ್ಕೆ, ತೆಕ್ಕಳಕೋಟೆ ಠಾಣೆಯ ಪಿಎಸ್ಐ ತಿಮ್ಮಣ್ಣ ರನ್ನು ತಮ್ಮ ಕೋರಿಕೆ ಮೇರೆಗೆ ಕುಷ್ಟಗಿ ಪೋಲಿಸ್ ಠಾಣೆಗೆ, ಬೇವೂರು ಪೋಲಿಸ್ ಠಾಣೆಯ ಪಿಎಸ್ಐ ಶಂಕ್ರಪ್ಪ ಎಲ್ ರನ್ನು ಕೋರಿಕೆ ಮೇರೆಗೆ ಸಿಎಸ್ಎನ್ ಪೋಲಿಸ್ ಠಾಣೆ ಕೊಪ್ಪಳಕ್ಕೆ,
ಬೇವೂರು ಠಾಣೆ ಅಪರಾದ ವಿಭಾಗಕ್ಕೆ ವರ್ಗಾವಣೆಗೊಂಡಿದ್ದ ಟಿ ಜಿ ನಾಗರಾಜ ಪಿಎಸ್ಐ ರ ಕೋರಿಕೆ ಮೇರೆಗೆ ಚಿಟಿಗೇರಿ ಪೋಲಿಸ್ ಠಾಣೆಗೆ,
ಬೇವೂರು ಠಾಣೆಗೆ ರಾಯಚೂರಿನ ನೇತಾಜಿ ನಗರ ಠಾಣೆಯ ಶೀಲಾ ಮೂಗುನಗೌಡ್ರು ವರ್ಗಾ ಗೊಂಡಿದ್ದಾರೆ,
ಸಿಇಎನ್ ಪೋಲಿಸ್ ಠಾಣೆ ಕೊಪ್ಪಳ ಪಿಎಸ್ಐ ಡಿ ಸುರೇಶ ಅವರ ಕೋರಿಕೆ ಮೇರೆಗೆ ಕನಕಗಿರಿ ಠಾಣೆಗೆ ಮತ್ತು ಆಡಳಿತಾತ್ಮಕ ಕಾರಣದ ಮೇರೆಗೆ ಕನಕಗಿರಿ ಠಾಣೆಯ ಪಿಎಸ್ಐ ಹೆಚ್ ಎಸ್ ಪ್ರಶಾಂತ ರನ್ನು ಹಲವಾಗಲು ಪೋಲಿಸ್ ಠಾಣೆಗೆ ಹಾಗು ಕುಷ್ಟಗಿ ಠಾಣೆಯ ಪಿಎಸ್ಐ ಚಿತ್ತರಂಜನ್ ರನ್ನು ಸಿಇಎಸ್ ಪೋಲಿಸ್ ಠಾಣೆಗೆ ನಿಯುಕ್ತಿಗೊಳಿಸಿ ಆದೇಶಿಸಲಾಗಿದೆ. ಆದೇಶ ಪ್ರತಿಯಲ್ಲಿ ಆರು ಪಿಎಸ್ಐಗಳು ತಮ್ಮ ವರ್ಗಾವಣೆಗಾಗಿ ಮನವಿ ಸಲ್ಲಿಸಿರುವುದು ಉಲ್ಲೇಖಿಸಲಾಗಿದೆ.
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.