ಕನ್ಫ್ಯೂಜ್ ಮಾಡಿದ ಮತದಾರ..!
ಮತವನ್ನ ಸ್ಕೇಲ್ ನಿಂದ ಅಳೆದ ಚುನಾವಣಾಧಿಕಾರಿ
ತುಂಗಾವಾಣಿ.
ಕೊಪ್ಪಳ: ಡಿ-30 ಬಾರಿ ಜಿದ್ದಾ ಜಿದ್ದಿನಿಂದ ಕೂಡಿರುವ ಗ್ರಾಮ ಪಂಚಾಯತಿ ಚುನಾವಣೆ ಬಾರಿ ಕುತೂಹಲ ಕೆರಳಿಸುವ ಹಾದಿಯ ಮಧ್ಯ ಚುನಾವಣೆ ಅಧಿಕಾರಿಗಳಿಗೆ ಕನ್ಫ್ಯೂಜ್ ಮಾಡಿದ ಒಬ್ಬ ಮತದಾರ, ಅದೇನ್ ಅಂತಿರಾ ಈ ಸ್ಟೋರಿ ನೋಡಿ,
ಕೊಪ್ಪಳ ಗವಿಸಿದ್ದೇಶ್ವರ ಪ್ರೌಢ ಶಾಲಾ ಆವರಣದಲ್ಲಿ ನಡೆದ ಮತ ಎಣಿಕೆ ವೇಳೆ ಬ್ಯಾಲೇಟ್ ಪೇಪರ್ ನಲ್ಲಿ ಇಬ್ಬರು ಅಭ್ಯರ್ಥಿಗಳ ಮಧ್ಯೆ ಮತ ಚಲಾಯಿಸಿದ್ದನ್ನು ಚುನಾವಣಾ ಅಧಿಕಾರಿ ಮತವನ್ನ ಸ್ಕೇಲ್ ನಿಂದ ಅಳೆದು ಗಮನ ಸೆಳೆದರು.
ಗೊಂಡಬಾಳ ಗ್ರಾಪಂನ ಮುದ್ದಾಬಳ್ಳಿ ಒಂದನೇ ವಾರ್ಡಿನ ಮತ ಎಣಿಕೆಯ ವೇಳೆ ಟಿವಿ ಚಿನ್ಹೆಯ ಗಾಳೆಪ್ಪ ಪೂಜಾರ ಹಾಗೂ ಆಟೋ ಚಿನ್ಹೆಯ ಮಧ್ಯೆ ಮತದಾರನೋರ್ವ ಮತ ಚಲಾಯಿಸಿದ್ದನು. ಈ ಮತ ಎಣಿಕೆಯಿಂದ ಹೊರಗಿಟ್ಟು ಮತ ಎಣಿಕೆ ಮಾಡಲಾಗಿತ್ತು. ಕೊನೆ ಹಂತದಲ್ಲಿ ಇಬ್ಬರು ಅಭ್ಯರ್ಥಿಗಳ ಮಧ್ಯೆ ಚಲಾಯಿಸಲಾಗಿದ್ದ ಮತ ಎಣಿಕೆ ವೇಳೆ ಚುನಾವಣಾಧಿಕಾರಿ ಆ ಮತ ಸ್ಕೇಲ್ ನಿಂದ ಅಳತೆ ಮಾಡಿ ಟಿವಿ ಚಿನ್ಹೆಯ ಮತಕ್ಕೆ ಹೆಚ್ಚು ಪ್ರಾಶಸ್ತ್ಯ ಬಂದ ಹಿನ್ನೆಲೆಯಲ್ಲಿ ಟಿವಿ ಅಭ್ಯರ್ಥಿಗೆ ಮತ ಎಂದು ಘೋಷಣೆ ಮಾಡಿದರು.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.