ಗಂಗಾವತಿ: ಟೋಲ್ ಗೇಟ್ ಬಳಿ
ಗಲಾಟೆ ಇಬ್ಬರ ಮೇಲೆ FIR
ತುಂಗಾವಾಣಿ.
ಗಂಗಾವತಿ: ಗ್ರಾಮ ಪಂಚಾಯತಿ ಚುನಾವಣೆಯ ನಿಮಿತ್ತ ಗಂಗಾವತಿ ತಾಲ್ಲೂಕಿನ ಜಂಗಮರ ಕಲ್ಗುಡಿ ಮರಳಿ ಆಚಾರನರಸಾಪುರ ಪ್ರಗತಿನಗರ ಬಂದೊಬಸ್ತ್ ಗಾಗಿ ನೇಮಕವಾಗಿದ್ದ
ಕೊಪ್ಪಳ ನಗರ ಸಂಚಾರಿ PSI ಅಮರೇಶ ಹುಬ್ಬಳ್ಳಿ, ಗಂಗಾವತಿ ಯಿಂದ ಮರಳಿ ಗ್ರಾಮದ ಕಡೆಗೆ ಸಂಚರಿಸುತ್ತಿದ್ದಾಗ ಮರಳಿ ಟೋಲ್ ಗೇಟ್ ಬಳಿ ಹೊಸಕೇರ ಗ್ರಾಮದ ಮಂಗಳಮುಖಿ ಅನುಶ್ರೀ ಮತ್ತು ಮರಳಿ ಗ್ರಾಮದ ತಿಪ್ಪೇಸ್ವಾಮಿ ಕಮ್ಮಾರ ಕ್ಷುಲ್ಲಕ ಕಾರಣಕ್ಕಾಗಿ ಹಲ್ಲೇ ಮಾಡಿಕೊಂಡ ಇಬ್ಬರಿಗೂ ಗಾಯಗಳಾಗಿದ್ದು, ಎಷ್ಟು ತಿಳಿ ಹೇಳಿದರು ಕೇಳದಿದ್ದಾಗ ಇಬ್ಬರನ್ನೂ ಠಾಣೆಗೆ ಕರೆದುಕೊಂಡು ಬಂದ ಪೋಲಿಸರು ಇಬ್ಬರ ಮೇಲೆಯೂ ಸಾರ್ವಜನಿಕ ಸ್ಥಳಗಳಲ್ಲಿ ಶಾಂತಿ ಭಂಗ ತರುತ್ತಾರೆ ಎಂದು ಕಲಂ 160 ಐ,ಪಿ,ಸಿ, ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.