ತುಂಗಾವಾಣಿ ಸ್ಟ್ರಿಂಗ್ ಆಪರೇಷನ್.
ಗಂಗಾವತಿಯ ದೊಡ್ಡ ಅಧಿಕಾರಿಯ ಲಂಚಾವತಾರ.
ತುಂಗಾವಾಣಿ
ಗಂಗಾವತಿ ಡಿ 18 ಕೊಪ್ಪಳ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು, ಮರಳು ಗಣಿಗಾರಿಕೆಯಲ್ಲಿ ಸರ್ಕಾರಿ ಅಧಿಕಾರಿಗಳು ಶ್ಯಾಮಿಲಾಗಿರುವುದು ಅಗ್ಗಾಗ್ಗೆ ಕೇಳಿ ಬರುತ್ತಿತ್ತು ಅದಕ್ಕೆ ಪುಷ್ಠಿ ನೀಡುವಂತೆ ತುಂಗಾವಾಣಿ ನಡೆಸಿದ ಸ್ಟ್ರಿಂಗ್ ಆಪರೇಷನ್ ನಲ್ಲಿ ಅಧಿಕಾರಿಯ ಲಂಚಾವತಾರ ಹಾಗು ಅಕ್ರಮ ಚಟುವಟಿಕೆಗೆ ಗಂಗಾವತಿ ತಾಲೂಕಾ ತಹಶಿಲ್ದಾರ ರೇಣುಕಾ ಬೆಂಬಲ ಬಟಾಬಯಲಾಗಿದೆ.
ಅದಕ್ಕೂ ಮುಂಚೆ ಗಂಗಾವತಿ ತಾಲ್ಲೂಕಿನಾಧ್ಯಂತ ಅಕ್ರಮ ಮರಳು ಸಾಗಾಣಿಕೆ ಬಹಳ ಜೋರಾಗೆ ನಡೆದಿದೆ ಇದಕ್ಕೆಲ್ಲ ಯಾರು ಸಾಥ್ ಕೊಡ್ತಾರೆ ಎಂದು ಹುಡುಕ್ಕುತ್ತಾ ಹೋದರೆ ಅಲ್ಲಿ ಕಂಡಿದ್ದು ಮಾತ್ರ ಅಚ್ಚರಿ ಸಂಗತಿ…
ತಹಶಿಲ್ದಾರ ರೇಣುಕಾ ನೇರವಾಗೆ ಡೀಲ್ ಗೆ ಇಳಿತಾರೆ ಎಂದರೆ ಅಚ್ಚರಿ ಯಾಗಿರದು..!
ಗಂಗಾವತಿ ಸುಮಾರು 500ಕ್ಕೂ ಹೆಚ್ಚು ಟ್ರಾಕ್ಟರ್ ಗಳು ಮರಳು ಸಾಗಾಣಿಕೆ ಮಾಡುತ್ತಿವೆ ಅಕ್ರಮ ಮರಳು ಸಾಗಾಣಿಕೆಗೆ ಪ್ರತಿ ಟ್ರಾಕ್ಟರ್ ಗೆ ಮಾಸಿಕ 10 ಸಾವಿರ ರೂಗಳ ಮಾಮೂಲಿ ಪಿಕ್ಸ್ ಮಾಡಿ ಈ ಅಧಿಕಾರಣಿ ಅಕ್ರಮ ಮರಳು ಸಾಗಾಣಿಕೆಗೆ ಅವಕಾಶ ಕಲ್ಪಿಸುತ್ತಿದ್ದಾರೆ ಪ್ರತಿ ತಿಂಗಳು ಮುಂಗಡವಾಗಿ ದುಡ್ಡನ್ನು ಅವರಿಗೆ ಮುಟ್ಟಿಸಬೇಕು ಮಾಮೂಲಿ ಕೊಡದ ಟ್ರಾಕ್ಟರ್ ಗಳನ್ನು ಮಾತ್ರ ಗುರಿಯಾಗಿಸಿ ಟ್ರಾಕ್ಟರ್ ಟ್ರಾಲಿ ಸೀಜ್ ಮಾಡುವುದು ಆ ವೇಳೆ ಡೀಲ್ ಆಗದಿದ್ದರೆ ಮಾತ್ರ ಪ್ರಕರಣ ದಾಖಲಿಸುವುದು ನಡೆಯುತ್ತಿದೆ.
ಮಾಸಿಕ ಮಾಮೂಲು ಪಿಕ್ಸ್ ಆದ ಟ್ರಾಕ್ಟರ್ ನೊಂದಣಿ ಸಂಖ್ಯೆಯನ್ನು ತಮ್ಮ ಡೈರಿಯಲ್ಲಿ ಬರೆದುಕೊಳ್ಳುವ ತಹಶಿಲ್ದಾರ ಆ ಟ್ರಾಕ್ಟರ್ ಅನ್ನು ಕಂದಾಯ ಇಲಾಖೆಯ ಸಿಬ್ಬಂದಿ ಹಿಡಿದರೆ ತಕ್ಷಣ ಪೋನಾಯಿಸಿ ಬಿಡುಗಡೆ ಗೊಳಿಸುತ್ತಾರೆ.
ತುಂಗಾವಾಣಿ ಬಳಗದ ಗುಪ್ತ ಕ್ಯಾಮರಾ ದಲ್ಲಿ ಸೆರೆಯಾದ ದೃಷ್ಯಾವಳಿಯಲ್ಲಿ ತಹಶಿಲ್ದಾರ ರೇಣುಕಾ ಎರಡು ಟ್ರಾಕ್ಟರ್ ಗಳು ಕಾರ್ಯಾಚರಿಸಲು ಪ್ರತಿ ತಿಂಗಳು ಇಪ್ಪತ್ತು ಸಾವಿರ ರೂಗಳನ್ನು ಕೊಡಬೇಕು ಈಗ ಅಡ್ವಾನ್ಸ್ ಕೊಡಿ ಮತ್ತು ಪ್ರತಿ ತಿಂಗಳು ಸರಿಯಾಗಿ ತಂದು ಕೊಡಬೇಕು ಇಲ್ಲಾಂದರೆ FIR ಹಾಕತೇನೆ ಅಂತ ಹೇಳಿದ್ದು ನಂತರ ಐದು ಸಾವಿರ ರೂಗಳನ್ನು ನಗದು ಪಡೆದು ಟ್ರಾಕ್ಟರ್ ಗಳ ನೊಂದಣಿ ಸಂಖ್ಯೆಯನ್ನು ತಮ್ಮ ಬುಕ್ಕಿನಲ್ಲಿ ಬರೆದುಕೊಳ್ಳುತ್ತಿರುವುದು ರಹಸ್ಯ ಕ್ಯಾಮರ ಕಣ್ಣಿನಲ್ಲಿ ಸೆರೆಯಾಗಿದೆ.
ಅಕ್ರಮ ಮರಳು ಸಾಗಾಣಿಕೆಯಲ್ಲಿ ನೇರೆ ಭಾಗಿಯಾಗಿರುವ ತಹಶಿಲ್ದಾರ ರೇಣುಕಾ ವಿರುದ್ದು ಕೊಪ್ಪಳ ಜಿಲ್ಲಾಧಿಕಾರಿಗಳು ಮತ್ತು ರಾಜ್ಯ ಸರ್ಕಾರ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕಿದೆ.
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.