ಗಂಗಾವತಿ : ಬ್ಯಾಂಕಿನ ಸುಮಾರು ಅರ್ಧ ಕೋಟಿ ರೂಗಳ ಪಂಗನಾಮ.!
ಯಾವ ಬ್ಯಾಂಕ್ ಗೊತ್ತಾ.?
ತುಂಗಾವಾಣಿ
ಗಂಗಾವತಿ ಡಿ 15 ಸ್ವತಃ ಬ್ಯಾಂಕಿನ ಸಿಬ್ಬಂದಿಯೇ ತಾನು ಕೆಲಸ ಮಾಡುತ್ತಿರುವ ಬ್ಯಾಂಕಿನ ಸುಮಾರು 45 ಲಕ್ಷ ರೂಗಳಷ್ಟು ಹಣವನ್ನು ದುರುಪಯೋಗ ಪಡಿಸಿಕೊಂಡು ಬ್ಯಾಂಕಿಗೆ ಹಾಗು ಬ್ಯಾಂಕಿನ ಗ್ರಾಹಕರಿಗೆ ಪಂಗನಾಮ ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗಂಗಾವತಿ ನಗರದ ಮಾನ್ವಿ ಪಟ್ಟಣ ಸೌಹಾರ್ಧ ಸಹಕಾರಿ ಬ್ಯಾಂಕಿನ ಮೈಕ್ರೋ ಫೈನಾನ್ಸ್ ವಿಭಾಗದ ರಿಕವರಿ ಆಫಿಸರ್ ಆಗಿದ್ದ ಮಲ್ಲಿಕಾರ್ಜುನ ಕಿನ್ನಾಳ 2015 ರಿಂದ ಹಂತ ಹಂತವಾಗಿ 204 ಜನ ಬ್ಯಾಂಕಿನ ಗ್ರಾಹಕರ ರೂ 4533753 /- ಗಳನ್ನು ವಸೂಲಿ ಮಾಡಿಕೊಂಡು ಬ್ಯಾಂಕಿಗೆ ಜಮೆ ಮಾಡದೆ ಹಣ ದುರುಪಯೋಗ ಪಡಿಸಿಕೊಂಡು ಬ್ಯಾಂಕಿನ ಗ್ರಾಹಕರಿಗೆ ಹಾಗು ಬ್ಯಾಂಕಿಗೆ ವಂಚನೆ ಮಾಡಿದ್ದಾನೆ ಅಂತ ಬ್ಯಾಂಕಿನ ವ್ಯವಸ್ಥಾಪಕ ವಿಘ್ನೇಶ್ವರ ಜೆಎಮ್ಎಫ್‌ಸಿ ನ್ಯಾಯಾಲಯ ಮೂಲಕ ಆರೋಪಿತನ ಮೇಲೆ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ದಿ ಫೆ 20 ರಂದು ಗಂಗಾವತಿಯ ಜೆಎಮ್ಎಫ್‌ಸಿ ನ್ಯಾಯಾಲಯಕ್ಕೆ ಖಾಸಗಿ ದೂರನ್ನು ಸಲ್ಲಿಸಲಾಗಿತ್ತು ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿತನ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ಸೂಚಿಸಿದ್ದರಿಂದ ನ 20 ರಂದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.