ಕೊಪ್ಪಳ: ಮದುವೆ ಮುಗಿಸಿಕೊಂಡು ಬಂದವರಿಗೆ ಬಿಗ್ ಶಾಕ್..!?
ತುಂಗಾವಾಣಿ.
ಕೊಪ್ಪಳ: ಡಿ-21 ಕೊಪ್ಪಳ ನಗರದ ಕಿನ್ನಾಳ ರಸ್ತೆಯಲ್ಲಿ ಬರುವ ವಿಜಯನಗರ ಬಡಾವಣೆಯ ನಿವಾಸಿ ಚಂದ್ರಶೇಖರ್ ರವರು ಡಿ:17 ರಂದು ತಮ್ಮ ಚಿಕ್ಕಪ್ಪನ ಮಗಳ ಮದುವೆಗೆಂದು ಗದಗ ಪಟ್ಟಣಕ್ಕೆ ಹೋಗಿ ಮರು ದಿನ ಡಿ-18 ಬಂದು ಮನೆ ಬಾಗಿಲು ತಗೆಯಲು ಹೋದಾಗ ಬಿಗ್ ಶಾಕ್ ಕಾದಿತ್ತು ಅದು ಏನಂತಿರಾ..!?
ಖತರ್ನಾಕ್ ಕಳ್ಳರು ಚಂದ್ರಶೇಖರ್ ಕುಟುಂಬ ಗದಗ ಪ್ರಯಾಣ ಬೆಳೆಸಿದ್ದರಿಂದ ಮನೆ ಖಾಲಿ ಕಂಡ ಕಳ್ಳರು ಮನೆಗೆ ನುಗ್ಗಿ ಮನೆಯಲ್ಲಿರುವ ನಗದು ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ, ಖತರ್ನಾಕ್ ಕಳ್ಳರು ಕದ್ದದ್ದು, 86 ಗ್ರಾಂ ಬಂಗಾರದ ಆಭರಣ ಮತ್ತು 80 ತೊಲೆ ಬೆಳ್ಳಿ ₹20,000/ ಹಣ ಒಟ್ಟು ಬರೋಬ್ಬರಿ 3,96,000 ಕಳ್ಳತನ ವಾಗಿದೆ ಎಂದು ಕೊಪ್ಪಳ ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ, ಪ್ರಕರಣವನ್ನು ಕೈಗೆತ್ತಿಕೊಂಡ ಕೊಪ್ಪಳ ಪೋಲಿಸರು ತನಿಖೆ ಕೈಗೊಂಡಿದ್ದಾರೆ..!!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.