ಗಂಗಾವತಿ: ಸುಮಾರು ಎರಡುವರೆ ಕೋಟಿ ರೂ,ವಂಚನೆ.!?
ಒಂಬತ್ತು ಜನರ ಮೇಲೆ FIR.!
ತುಂಗಾವಾಣಿ.
ಗಂಗಾವತಿ:ಡಿ-24 ತಾಲ್ಲೂಕಿನ ದಾಸನಾಳ ಗ್ರಾಮದ ಬಳಿ ಖಾಸಗಿ ವ್ಯಕ್ತಿಯ ಉಗ್ರಾಣದಲ್ಲಿ ಸಂಗ್ರಹಿಸಲಾಗಿದ್ದ 25505 ಸಾವಿರ ಚೀಲಗಳು ತೋರಿಸಿ ಕೋಟ್ಯಾಂತರ ರೂಪಾಯಿ ಪಡೆದು ಮರು ಪಾವತಿಸದೆ ಇರುವುದರಿಂದ ಡಿ-18 ರಂದು ಗಂಗಾವತಿ JMFC ನ್ಯಾಯಾಲಯದ ಮುಖಾಂತರ ಗಂಗಾವತಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ,
ಘಟನೆ ವಿವರ:
2018 ಮೇ-19 ರಿಂದ 2018 ಜೂ-2 ರ ಅವಧಿಯಲ್ಲಿ ದಾಸನಾಳ ಗ್ರಾಮದ ರಮೇಶ ಎಂಬುವವರ ಮಾಲಿಕತ್ವದ ಗುದಾಮನ್ನು CNX ಕಾರ್ಪೊರೇಷನ್ ಲಿಮಿಟೆಡ್ ಸುಪರ್ದಿಯಲ್ಲಿರುವ ವಿಜಯಲಕ್ಷ್ಮಿ ಆಗ್ರೋ ದಲ್ಲಿ 25505 ಚೀಲ ಭತ್ತ ಇದ್ದು ಅದರ ಆಧಾರದ ಮೇಲೆ ₹2,47,00,000- ಪಡೆದು ಸಾಲ ಪಡೆದು ಮರು ಪಾವತಿ ಮಾಡಿರುವುದಿಲ್ಲ, ಮತ್ತು ಬ್ಯಾಂಕ್ ವ್ಯವಸ್ಥಾಪಕರು ಭತ್ತ ಸಂಗ್ರಹಣೆ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದಾಗ ಭತ್ತದ ಚೀಲಗಳು ಇಲ್ಲದಿರುವುದು ಕಂಡು ಬಂದ ಹಿನ್ನೆಲೆ, ಕರ್ನಾಟಕ ಬ್ಯಾಂಕ್ ನ ವ್ಯವಸ್ಥಾಪಕ, ಡಿ-18 ರಂದು ಗಂಗಾವತಿ JMFC ನ್ಯಾಯಾಲಯದ ಮುಖಾಂತರ ಒಂಬತ್ತು ಜನರ ವಿರುದ್ಧ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾರೆ,
ಯಾರು ಆ ಒಂಬತ್ತು ಜನ .!
MS ನಿರುಪಮ ಹಾಜಿ ಮ್ಯಾನೇಜಿಂಗ್ ಡೈರೆಕ್ಟರ್ CNX ಕಾರ್ಪೊರೇಷನ್ ಲಿಮಿಟೆಡ್ ಮುಂಬೈ,
GB ಮಹೇಶ್ CNX ಕಂಪನಿ,
ಲಿಂಗಪ್ಪ ಮುದುಕಪ್ಪ ಕಾರಟಗಿ,
ಮಂಜುನಾಥ ನಾಯಕ ಮೈಲಾಪುರ ಕಾರಟಗಿ,
ಬುಡ್ಡೆಪೀರ ಹುಸೇನಸಾಬ ಚಿಕ್ಕಜಂತಕಲ್
ಲೋಕೇಶ್ ರಾಚೋಟೆಪ್ಪ ಉಪ್ಪಾರ ಓಣಿ ಗಂಗಾವತಿ,
ಪ್ರಶಾಂತಕುಮಾರ ಪ್ಯಾಟಿಮಠ ಟೀಚರ್ಸ್ ಕಾಲೋನಿ ಗಂಗಾವತಿ,
R ಅನಿಲ್ ಕುಮಾರ್ ಶ್ರೀರಾಮನಗರ,
ರಾಜೇಶ್ ಬಾಬು ಈಳಿಗನೂರು,
ಎಂಬುವವರ ಮೇಲೆ ಐ,ಪಿ,ಸಿ 407 ಮತ್ತು 420 ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಪೋಲಿಸರು ತನಿಖೆ ಕೈಗೊಂಡಿದ್ದಾರೆ.!!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.