Breaking News

ಕೊಪ್ಪಳ ಜಿಲ್ಲೆಯಲ್ಲಿ ಹೇಗೆ ನಡೆಯುತ್ತಿದೆ ಗ್ರಾಮ ಪಂಚಾಯತಿ ಚುನಾವಣೆ ತಯಾರಿ.!?

ಕೊಪ್ಪಳ ಜಿಲ್ಲೆಯಲ್ಲಿ ಹೇಗೆ ನಡೆಯುತ್ತಿದೆ ಗ್ರಾಮ ಪಂಚಾಯತಿ ಚುನಾವಣೆ ತಯಾರಿ.!?

ತುಂಗಾವಾಣಿ.
ಗಂಗಾವತಿ: ಡಿ-10 ರಾಜ್ಯಾದ್ಯಂತ ಗ್ರಾಮ ಪಂಚಾಯತಿ ಚುನಾವಣೆ ಭರಾಟೆ ಬಹಳ ಜೋರಾಗೆ ನಡೆದಿದೆ, ಅದರಲ್ಲೂ ಕೊಪ್ಪಳ ಜಿಲ್ಲೆಯಲ್ಲಂತೂ ಪ್ರತಿ ಗ್ರಾಮದಲ್ಲಿ ಚುನಾವಣೆಗೆ ಸ್ಪರ್ಧಿಸವ ಅಭ್ಯರ್ಥಿಗಳಂತೂ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ,
ಐದು ವರ್ಷಕ್ಕೊಮ್ಮೆ ಬರುವ ಚುನಾವಣೆ ಅಣ್ಣತಂಮ್ಮಂದಿರ ಸಂಬಂಧಿಕರ ಮತ್ತು ಅತೀ ಹೆಚ್ಚು ಸ್ನೇಹಿತರ ಮದ್ಯಯೇ ಈಗಾಗಲೇ ವೈಮನಸ್ಸು ಚಾಲೂ ಆಗುವುದೆ ಈ ಚುನಾವಣೆಯ ಮುಖಾಂತರ,
ಮುಗ್ಧ ಜನರನ್ನು ಚುನಾವಣೆಯು ಆಕರ್ಷಿಸಿ ಸಂಘರ್ಷಕ್ಕೆ ಎಡೆಮಾಡಿಕೊಡುತ್ತಿದೆ,
ಈಗ ಗಂಗಾವತಿ ತಾಲ್ಲೂಕಿನಾಧ್ಯಂತ ಭರ್ಜರಿ ತಯಾರಿ ನಡೆಯುತ್ತಿದ್ದು,
ಅದರ ಸಣ್ಣದೊಂದು ಝಲಕ್ ಇಲ್ಲಿದೆ ನೋಡಿ.

 

ಕೊಪ್ಪಳ ಜಿಲ್ಲೆಯ ಒಟ್ಟು 149 ಗ್ರಾಮ ಪಂಚಾಯತಿಗಳಿದ್ದು
ಅದರಲ್ಲಿ ಮೊದಲ ಹಂತದಲ್ಲಿ 73 ಗ್ರಾಮ ಪಂಚಾಯತಿ ಕೊಪ್ಪಳ ತಾಲ್ಲೂಕಿನ 38 ಹಾಗು ಯಲಬುರ್ಗಾ ತಾಲ್ಲೂಕಿನ 20 ಮತ್ತು ಕುಕನೂರು ತಾಲ್ಲೂಕಿನ 15 ಸೇರಿದಂತೆ ಒಟ್ಟು 73 ಗ್ರಾಮ ಪಂಚಾಯತಿಗಳಿಗೆ ಮೊದಲನೆಯ ಹಂತದ ಚುನಾವಣೆ ನಡೆಯಲಿದೆ,
ಕೊಪ್ಪಳ ಯಲಬುರ್ಗಾ ಕುಕನೂರು ತಾಲ್ಲೂಕುಗಳಲ್ಲಿ ನಾಮಪತ್ರ ಸಲ್ಲಿಸಲು ಡಿಸೆಂಬರ್-11 ಕೊನೆಯ ದಿನವಾಗಲಿದೆ, 12 ರಂದು ನಾಮಪತ್ರ ಪರಿಶೀಲನೆ 14 ರಂದು ನಾಮ ಪತ್ರ ಹಿಂಪಡೆಯಲು ಕೊನೆಯ ದಿನವಾಗಲಿದೆ,
ಡಿಸೆಂಬರ್-22 ಕ್ಕೆ ಬೆಳಿಗ್ಗೆ 7 ರಿಂದ ಸಂಜೆ 5 ರ ವರೆಗೆ ಮತದಾನ ನಡೆಯಲಿದೆ,

ಎರಡನೇ ಹಂತವಾಗಿ ಗಂಗಾವತಿ ಕುಷ್ಟಗಿ ಕನಕಗಿರಿ ಕಾರಟಗಿ ತಾಲ್ಲೂಕಿನಲ್ಲಿ ಒಟ್ಟು 76 ಗ್ರಾ,ಪಂ, ಅದರಲ್ಲಿ ಗಂಗಾವತಿ-18 ಕುಷ್ಟಗಿ-36 ಕನಕಗಿರಿ-11 ಕಾರಟಗಿ-11 ಸೇರಿದಂತೆ ಒಟ್ಟು -76 ಗ್ರಾ,ಪಂ,ಗಳಿಗೆ ಎರಡನೆಯ ಹಂತದಲ್ಲಿ ಚುನಾವಣೆ ನಡೆಯಲಿದೆ, ಡಿಸೆಂಬರ್-16 ಕೊನೆಯ ದಿನವಾಗಿದ್ದು ಡಿ-17 ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂಪಡೆಯಲು ಡಿ-19 ಕೊನೆಯ ದಿನವಾಗಲಿದೆ, ಡಿಸೆಂಬರ್-27 ರಂದು ಮತದಾನ ನಡೆಯಲಿದೆ.

ಮೊದಲನೆಯ ಮತ್ತು ಎರಡನೇ ಹಂತದ ಮತದಾನ ಬಳಿಕ ಡಿಸೆಂಬರ್-30 ರಂದು ಆಯಾ ತಾಲ್ಲೂಕಿನ ಕೇಂದ್ರಗಳಲ್ಲಿ ಎಣಿಕೆ ನಡೆದು ಫಲಿತಾಂಶ ಹೊರ ಬಿಳಲಿದೆ.

ಕೊಪ್ಪಳ ಜಿಲ್ಲೆಯ ಒಟ್ಟು ಮತಗಟ್ಟೆಗಳು 1238 ಮತಗಟ್ಟೆಯಲ್ಲಿ ಚುನಾವಣೆ ನಡೆಯಲಿದ್ದು
ಅದರಲ್ಲಿ ಪುರುಷ ಮತದಾರರು. 4,14,746
ಮಹಿಳಾ ಮತದಾರರು 4,14,121
ಇತರೆ ಮತದಾರರು 235
ಒಟ್ಟು ಮತದಾರರು 8,28,890 ಮತದಾರರು ಮತ ಚಲಾವಣೆ ಮಾಡಲಿದ್ದಾರೆ,

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Check Also

ಸ್ಥಳೀಯ ಸಂಸ್ಥೆ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ರದ್ದತಿಗೆ ತಡೆಯಾಜ್ಞೆ.

ಸ್ಥಳೀಯ ಸಂಸ್ಥೆ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ರದ್ದತಿಗೆ ತಡೆಯಾಜ್ಞೆ. ತುಂಗಾವಾಣಿ ಕೊಪ್ಪಳ. ನ 25 ನಗರಸಭೆ ಪುರಸಭೆ ಹಾಗು ಪಟ್ಟಣ …