ಕೊಪ್ಪಳದಲ್ಲಿ ನಡೆಯುತ್ತಿದೆ ಲಂಚಾವತಾರ
ಸಚಿವರ ಕಛೇರಿಯ ಅಂತರಂಗ.!
ಸಂಸದರ ಪತ್ರದಿಂದ ಬಹಿರಂಗ.?
ತುಂಗಾವಾಣಿ
ಕೊಪ್ಪಳ ಡಿ 10 ಲಂಚ ಪಡೆಯುವಲ್ಲಿ ಭಾರತವು ಏಷ್ಯಾದಲ್ಲಿ ನಂಬರ್ ಒನ್ ಅಂತ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ವರದಿಯಾಗಿದ್ದು ಅದರಂತೆ ಕೊಪ್ಪಳ ಜಿಲ್ಲೆಯೂ ಲಂಚಾವತಾರದಲ್ಲಿ ಮುಂದಿದೆ ಅಂತ ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರ ಪತ್ರದಿಂದ ಬಹಿರಂಗ ಗೊಂಡಿದೆ.
ಕೊಪ್ಪಳ ಜಿಲ್ಲೆಯಲ್ಲಿ ಅಪಾರವಾದ ಖನಿಜ ಸಂಪತ್ತು, ಮರಳು, ಕಲ್ಲು ಮತ್ತು ಗ್ರಾನೈಟ್ ಗಳ ಬಂಡಾರವಿದ್ದು ಅವುಗಳನ್ನು ಕಾಪಾಡಿಕೊಂಡು ಉಳಿಸಿ ಬೆಳಿಸಬೇಗಾದ ಇಲಾಖೆ ಅಧಿಕಾರಿಗಳ ಲಂಚಗುಳಿತನದಿಂದ ಪ್ರತಿದಿನವೂ ಮರಳು, ಕಲ್ಲು ಹಾಗು ಖನಿಜಗಳ ಅಕ್ರಮ ಗಣಿಗಾರಿಕೆಗಳ ಅವ್ಯಾಹತವಾಗಿ ನಡೆಯುತ್ತಿರುವುದು ದಿನಾಲು ವರದಿಯಾಗುತ್ತಿವೆ.
ಅಕ್ರಮಗಳಿಗೆ ಸಾತ್ ನೀಡುತ್ತಿರುವ ಜಿಲ್ಲೆಯ ಅಧಿಕಾರಿಗಳನ್ನು ಮಟ್ಟ ಹಾಕಿ ಸಾರ್ವಜನಿಕರ ಕೆಲಸ ಕಾರ್ಯಗಳು ಆಗುವಂತೆ ನೋಡಿಕೊಳ್ಳ ಬೇಕಾದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲೆ ಹತ್ತಾರು ಅಕ್ರಮಗಳು ನಡೆಯುತ್ತಿರುವ ಬಗ್ಗೆ ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಕೊಪ್ಪಳ ಉಸ್ತುವಾರಿ ಸಚಿವ ಬಿ ಸಿ ಪಾಟೀಲ್ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ.
ತಮ್ಮ ಆಪ್ತ ಸಹಾಯಕ ರಮೇಶ ಜ್ಯೋತಿ ತಮ್ಮ ಕಛೇರಿಗೆ ಬರುವ ಸಾರ್ವಜನಿಕರಿಗೆ ಕೆಲಸವಾಗಬೇಕಾದರೆ ಶೇಕಡಾ ಇಂತಿಷ್ಟು ಕೊಟ್ಟರೆ ಕೆಲಸ ಮಾಡುವುದಾಗಿ ಮತ್ತು ಕೆಲಸದ ವೇಳೆ ಕಚೇರಿಯಲ್ಲಿರದೇ ವಸತಿಗೃಹದಲ್ಲೆ ಇದ್ದು ತಮ್ಮ ಮಕ್ಕಳನ್ನು ಕಚೇರಿಯನ್ನು ನೋಡಿಕೊಳ್ಳಲು ಸೂಚಿಸಿರುವುದು ಕೆಲಸ ಕಾರ್ಯಗಳಿಗೆ ಬರುವ ರೈತರು ಸಾರ್ವಜನಿಕರು ಕಾರ್ಯಕರ್ತರಿಗೆ ಸರಿಯಾಗಿ ಸ್ಪಂದಿಸದೇ ಇರುವುದನ್ನು ತಮ್ಮ ಪತ್ರದಲ್ಲಿ ಸಂಸದರು ಉಲ್ಲೇಖಿಸಿದ್ದಾರೆ.
ಸಂಸದರ ಪತ್ರದಿಂದಾಗಿ ಜಿಲ್ಲೆಯಲ್ಲಿ ನಡೆಯುತ್ತಿರುವ ಲಂಚಗುಳಿತನದ ಬಹಿರಂಗವಾಗಿದೆ.
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.