ಕೊಪ್ಪಳ ಜಿಲ್ಲೆಯ ಶುಕ್ರವಾರದ ಕರೊನಾ ಅಪ್ಡೇಟ್..!
ತುಂಗಾವಾಣಿ.
ಕೊಪ್ಪಳ: ಆ,13, ಜಿಲ್ಲೆಯಲ್ಲಿ, ಮತ್ತೆ ಸಾವಿನ ಸರಣಿ ಮುಂದೊರೆದಿದೆ,
ಇವತ್ತು ಸಹ ಮೂವರು ಕ್ರೂರಿ ಕೊರೋನಾಗೆ ಬಲಿಯಾಗಿದ್ದಾರೆ.
ಒಟ್ಟಾರೆ ಸಾವಿನ ಸಂಖ್ಯೆ: 76 ಕ್ಕೆ ಏರಿಕೆ ಯಾಗಿದೆ.
ಇಂದು 172 ಪಾಜಿಟಿವ್ ಪ್ರಕರಣಗಳು ಪತ್ತೆಯಾಗಿವೆ,
ಒಟ್ಟು ಜಿಲ್ಲೆಯಲ್ಲಿ 3298 ಸೊಂಕಿತರು ಪತ್ತೆಯಾಗಿದ್ದಾರೆ,
ತಾಲ್ಲೂಕು ವಾರು ವಿವರ,
ಅತೀ ಹೆಚ್ಚು ಗಂಗಾವತಿ ತಾಲ್ಲೂಕಿನಲ್ಲಿ ಇಂದು 75 ಪಾಜಿಟಿವ್ ಪ್ರಕರಣಗಳು ಪತ್ತೆಯಾಗಿವೆ,
ಕೊಪ್ಪಳ ತಾಲೂಕಿನಲ್ಲಿ 59 ಪಾಜಿಟಿವ್ ವರದಿ ಬಂದಿವೆ,
ಯಲಬುರ್ಗಾ ತಾಲ್ಲೂಕಿನಲ್ಲಿ 19 ಹಾಗೂ ಕುಷ್ಟಗಿ ತಾಲ್ಲೂಕಿನಲ್ಲಿ 28 ಪ್ರಕರಣಗಳು ಪತ್ತೆಯಾಗಿವೆ,
ಇಂದು ಕರೊನಾ ದಿಂದ ಗುಣಮುಖರಾಗಿ 140 ಜನರು ಬಿಡುಗಡೆಯಾಗಿದ್ದಾರೆ,
ಒಟ್ಟಾರೆ ಜಿಲ್ಲೆಯಲ್ಲಿ ಕರೋನಾದಿಂದ ಗುಣಮುಖರಾದವರ ಸಂಖ್ಯೆ 2047,
ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ 218 ಜನ ಚಿಕಿತ್ಸೆ ಪಡೆಯುತ್ತಿದ್ದರೆ ಇನ್ನೂ 168 ಜನರನ್ನು ವಿವಿದ ಕೊವಿಡ್ ಆಸ್ಪತ್ರೆಗಳಿಗೆ ಅಥವಾ ಹೋಂ ಐಶುಲೇಷನ್ ಮಾಡುವ ಕಾರ್ಯ ಪ್ರಗತಿಯಲ್ಲಿದೆ,
ವಿವಿಧ ಖಾಸಗಿ ಆಸ್ಪತ್ರೆಯಲ್ಲಿ 40 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ,
ಜಿಲ್ಲೆಯಲ್ಲಿ ಒಟ್ಟು 749 ಸೊಂಕಿತರು ತಮ್ಮ ತಮ್ಮ ಮನೆಗಳಲ್ಲೆ ವೈದ್ಯರಿಂದ ಸಲಹೆ ಮತ್ತು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೂ 2671 ಜನರ ಟೆಸ್ಟ್ ವರದಿ ಬರುವುದು ಬಾಕಿ ಇದೆ,
ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ,
ಆತ್ಮೀಯ ಓದುಗರರೇ. ತುಂಗಾವಾಣಿ ನ್ಯೂಸ್
ಕರೊನಾ ಸಂಬಂಧಿಸಿದ ಸೊಂಕಿತರ, ಗುಣಮುಖರಾಗಿದ್ದವರ, ಮೃತಪಟ್ಟವರ ಮಾಹಿತಿಯನ್ನು ಕಾಲ ಕಾಲಕ್ಕೆ ತಮ್ಮ ಮುಂದೆ ಸುದ್ದಿ ಬಿತ್ತರಿಸುತ್ತಾ ಬಂದಿದೆ, ನಾವು ನೀಡುವ ಮಾಹಿತಿ ಓದಿ ಯಾರು ಆತಂಕ ಗೊಳ್ಳ ಬೇಡಿ,
ಕರೊನಾ ಸಂದರ್ಭವನ್ನು ಎದುರಿಸುವುದು ಹೇಗೆ, ಸೊಂಕು ಬಂದಾಗ ಏನು ಮಾಡಬೇಕು..? ಇನ್ನೂ ಹಲವು ಮಾಹಿತಿಗಳನ್ನು ನುರಿತ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ, ಹಲವು ವೈದ್ಯರು ಬರೆದಿರುವ ಲೇಖನಗಳನ್ನು ಓದಿ, ಯಾವುದೇ ಕಾರಣಕ್ಕೂ ಆತಂಕಕ್ಕೆ, ಉದ್ವೇಗಕ್ಕೆ ಒಳಗಾಗದಿರಿ, ಗಾಬರಿಗೊಳ್ಳಬೇಡಿ, ಧೈರ್ಯದಿಂದ ಎದುರಿಸಿ, ಕಾಲ ಕಾಲಕ್ಕೆ ಸ್ಯಾನಿಟೈಸರ್ ನಿಂದ ಕೈ ತೊಳೆದುಕೊಳ್ಳುತ್ತಾ, ಮಾಸ್ಕ್ ಧರಿಸಿ ಹೊರಗಡೆ ಬನ್ನಿ, ಸುರಕ್ಷಿತ ಅಂತರ ಕಾಪಾಡಿಕೊಳ್ಳಿ,
ಧೈರ್ಯದಿಂದಲೇ ಕರೊನಾವನ್ನು ಎದುರಿಸೋಣ ಇದು ತುಂಗಾವಾಣಿ ಬಳಗದ ಕಳಕಳಿ..!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.