ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಗೆ ಕರೊನಾ ಸೊಂಕು ದೃಡ, ಕೊಪ್ಪಳ ಜಿಲ್ಲೆಯಲ್ಲಿಂದು 84 ಸೊಂಕಿತರು ಪತ್ತೆ..!
ತುಂಗಾವಾಣಿ.
ಕೊಪ್ಪಳ: ಆ1, ಜಿಲ್ಲೆಯಲ್ಲಿ ಇಂದು 84 ಪಾಜಿಟಿವ್ ಪ್ರಕರಣಗಳು ಪತ್ತೆಯಾಗಿವೆ, ಇದರೊಂದಿಗೆ ಕೊಪ್ಪಳ ಜಿಲ್ಲೆಯಲ್ಲಿ 1278 ಸೊಂಕಿತರ ಸಂಖ್ಯೆ,
ಜಿಲ್ಲೆಯಲ್ಲಿ ಇಂದು 84 ಕೇಸ್ ಗಳಲ್ಲಿ ಗಂಗಾವತಿ ತಾಲ್ಲೂಕಿನಲ್ಲಿ 36, ಪಾಜಿಟಿವ್ ಪ್ರಕರಣಗಳು ಪತ್ತೆಯಾಗಿವೆ, ಹಾಗೇಯೆ
ಕುಷ್ಟಗಿ ತಾಲೂಕಿನಲ್ಲಿ 12,
ಕೊಪ್ಪಳ ತಾಲೂಕಿನಲ್ಲಿ 26 ಯಲಬುರ್ಗಾ ತಾಲ್ಲೂಕಿನಲ್ಲಿ 10 ಪ್ರಕರಣಗಳು ಪತ್ತೆಯಾಗಿವೆ,
ಇಂದು ಗುಣಮುಖರಾಗಿ ಬಿಡುಗಡೆ ಯಾದವರು 36 ಜನ,
ಒಟ್ಟಾರೆ ಜಿಲ್ಲೆಯಲ್ಲಿ ಬಿಡುಗಡೆ ಯಾದವರ ಸಂಖ್ಯೆ 793 ,
189 ಜನರು ವಿವಿಧ ನಿಗದಿತ ಕೊವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ,
ಹೋಮ್ ಐಸೋಲೆಷನ್ ನಲ್ಲಿ 211,ಜನ ಚಿಕಿತ್ಸೆ ಪಡೆಯುತ್ತಿದ್ದಾರೆ,
59 ಜನರನ್ನು ವಿವಿಧ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತಿದೆ,
ಒಟ್ಟು ಇದುವರೆಗೆ 26 ಜನ ಸಾವನ್ನಪ್ಪಿದ್ದಾರೆ..!
ಕೊಪ್ಪಳ ಜಿಲ್ಲೆಯ ಯಲಬುರ್ಗಾ ಶಾಸಕ ಹಾಲಪ್ಪ ಆಚಾರಗೆ ಸೊಂಕು ದೃಢ,
ಶಾಸಕ ಆಚಾರ ತಮ್ಮ ವಯಕ್ತಿಕ ಪೇಸ್ ಬುಕ್ ನಲ್ಲಿ ಕರೊನಾ ದೃೃಢಪಟ್ಟಿದೆ ಎಂದು ಹಾಕಿಕೊಂಡಿದ್ದಾರೆ, ಸ್ವಯಂ ಕೊವಿಡ್ ತಪಾಸಣೆಯನ್ನು ಮಾಡಿಸಿಕೊಂಡಿದ್ದು ವೈದ್ಯಕೀಯ ವರದಿಯ ಪ್ರಕಾರ ನನಗೆ ಕರೊನಾ ಸೊಂಕು ದೃಢಪಟ್ಟಿದೆ, ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯುತ್ತಿದ್ದೆನೆ, ತಮ್ಮೇಲ್ಲರ ಹಾರೈಕೆಯಿಂದ ಆರೋಗ್ಯವಾಗಿದ್ದೆನೆ,
ಕಳೆದ ಕೆಲ ದಿನಗಳಿಂದ ನನ್ನ ಸಂಪರ್ಕದಲ್ಲಿರುವವರು ಯಾರಿಗಾದರೂ ಸೊಂಕಿನ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಿ, ಎಂದು ಸಲಹೆ ನೀಡಿದ್ದಾರೆ,
ಸಾರ್ವಜನಿಕರು ಖುದ್ದಾಗಿ ಭೇಟಿಯಾಗಲು ಸ್ಥಗಿತಗೊಳಿಸಿರುವೆ, ಇಂತಹ ಸಮಯದಲ್ಲಿ ದೂರವಾಣಿಯ ಮೂಲಕ ಸಂಪರ್ಕಿಸಿ ಸಿಗುತ್ತೆನೆ, ನನ್ನ ಕಛೇರಿ ಸಿಬ್ಬಂದಿಗಳು ಸದಾ ತಮ್ಮೇಲ್ಲರ ಸೇವೆಗೆ ಇರುತ್ತಾರೆ,
ನಾವೇಲ್ಲರು ಸೇರಿ ಮುಂಜಾಗ್ರತೆ ಸಮಾಜಿಕ ಅಂತರ ಕಾಪಾಡಿಕೊಂಡು ಕರೊನಾವನ್ನು ಎದುರಿಸೋಣ ಎಂದು ತಮ್ಮ ವಯಕ್ತಿಕ ಫೇಸ್ ಬುಕ್ ನಲ್ಲಿ ಹಾಕಿಕೊಂಡಿದ್ದಾರೆ,
ಆತ್ಮೀಯ ಓದುಗರರೇ. ತುಂಗಾವಾಣಿ ನ್ಯೂಸ್
ಕರೊನಾ ಸಂಬಂಧಿಸಿದ ಸೊಂಕಿತರ, ಗುಣಮುಖರಾಗಿದ್ದವರ, ಮೃತಪಟ್ಟವರ ಮಾಹಿತಿಯನ್ನು ಕಾಲ ಕಾಲಕ್ಕೆ ತಮ್ಮ ಮುಂದೆ ಸುದ್ದಿ ಬಿತ್ತರಿಸುತ್ತಾ ಬಂದಿದೆ, ನಾವು ನೀಡುವ ಮಾಹಿತಿ ಓದಿ ಯಾರು ಆತಂಕ ಗೊಳ್ಳ ಬೇಡಿ,
ಕರೊನಾ ಸಂದರ್ಭವನ್ನು ಎದುರಿಸುವುದು ಹೇಗೆ, ಸೊಂಕು ಬಂದಾಗ ಏನು ಮಾಡಬೇಕು..? ಇನ್ನೂ ಹಲವು ಮಾಹಿತಿಗಳನ್ನು ನುರಿತ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ, ಹಲವು ವೈದ್ಯರು ಬರೆದಿರುವ ಲೇಖನಗಳನ್ನು ಓದಿ, ಯಾವುದೇ ಕಾರಣಕ್ಕೂ ಆತಂಕಕ್ಕೆ, ಉದ್ವೇಗಕ್ಕೆ ಒಳಗಾಗದಿರಿ, ಗಾಬರಿಗೊಳ್ಳಬೇಡಿ, ಧೈರ್ಯದಿಂದ ಎದುರಿಸಿ, ಕಾಲ ಕಾಲಕ್ಕೆ ಸ್ಯಾನಿಟೈಸರ್ ನಿಂದ ಕೈ ತೊಳೆದುಕೊಳ್ಳುತ್ತಾ, ಮಾಸ್ಕ್ ಧರಿಸಿ ಹೊರಗಡೆ ಬನ್ನಿ, ಸುರಕ್ಷಿತ ಅಂತರ ಕಾಪಾಡಿಕೊಳ್ಳಿ,
ಧೈರ್ಯದಿಂದಲೇ ಕರೊನಾವನ್ನು ಎದುರಿಸೋಣ ಇದು ತುಂಗಾವಾಣಿ ಬಳಗದ ಕಳಕಳಿ..!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.