Breaking News

ಸಾವಿನಲ್ಲಿ ಕೊನೆಗೊಂಡ ಜಿಪಂ ಹೆಸರು ಬದಲಾವಣೆ ಖಂಡನೆ ಸಭೆ.!

ಸಾವಿನಲ್ಲಿ ಕೊನೆಗೊಂಡ ಜಿಪಂ ಹೆಸರು ಬದಲಾವಣೆ ಖಂಡನೆ ಸಭೆ.!

ತುಂಗಾವಾಣಿ.
ಗಂಗಾವತಿ: ಎ-1 ತಾಲೂಕಿನ ಆನೆಗೊಂದಿ ಗ್ರಾಮದ ಶ್ರೀ ರಂಗನಾಥ ದೇವಸ್ಥಾನದ ಅವರಣದಲ್ಲಿ ಜಿಲ್ಲಾ ಪಂಚಾಯತಿ ಕ್ಷೇತ್ರ ಮರುವಿಂಗಡಣೆಯಲ್ಲಿ ಆನೆಗುಂದಿ ಜಿಲ್ಲಾ ಪಂಚಾಯತಿ ಕ್ಷೇತ್ರ ಎನ್ನುವುದನ್ನು ಕೈಬಿಟ್ಟು 28-ಚಿಕ್ಕಜಂತಕಲ್ ಕ್ಷೇತ್ರ (ಆನೆಗೊಂದಿ)ಎಂದು ಮರುನಾಮಕರಣ ಮಾಡಿದ್ದು ಇದು ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ ಆನೆಗೊಂದಿ ಇತಿಹಾಸಕ್ಕೆ ಹಾಗೂ ಈ ಭಾಗದ ಜನತೆಗೆ ಮಾಡಿದ ಅವಮಾನ.

ಈ ಸಂಬಂಧ ಜಿಲ್ಲಾಡಳಿತ ಮತ್ತು ಸ್ಥಳೀಯ ಶಾಸಕರ ನಡೆಯನ್ನು ಖಂಡಿಸಿ ಹೋರಾಟದ ರೂಪುರೇಷೆಗಳನ್ನು ಸಿದ್ದಪಡಿಸುವನಿಟ್ಟಿನಲ್ಲಿ ಇಂದು ಸಂಜೆ ಸುಮಾರು 4 ಗಂಟೆಗೆ ಆನೆಗುಂದಿ, ಮಲ್ಲಾಪುರ, ಸಣಾಪುರ ಮತ್ತು ಸಂಗಾಪುರ ಪಂಚಾಯಿತಿಗಳ ಅಧ್ಯಕ್ಷರು,ಉಪಾಧ್ಯಕ್ಷರು,ಸರ್ವ ಸದಸ್ಯರು ಹಾಗೂ ಗ್ರಾಮಗಳ ಹಿರಿಯರು ಮತ್ತು ಯುವಕರ ಸಭೆ ಕರೆಯಲಾಗಿತ್ತು ಎಲ್ಲರೂ ಸಭೆಗೆ ಆಗಮಿಸಿ ಸರಕಾರ ಮತ್ತು ಸ್ಥಳೀಯ ಶಾಸಕರ ನಿರ್ಲಕ್ಷ್ಯತನದ ನಡೆಯ ವಿರುದ್ಧ ಪಕ್ಷತೀತವಾಗಿ ಶಾಸಕರ ಮತ್ತು ಜಿಲ್ಲಾಡಳಿತದ ನಡೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದರು ಮತ್ತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದರು ಈ ಸಂದರ್ಭದಲ್ಲಿ ಕಾರ್ಯಕ್ರಮದ ಆಯೋಜಕರು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಪ್ರವೀಣ ಕುಮಾರ್ ಮಾಜಿ ತಾಲೂಕಾ ಪಂಚಾಯತ್ ಸದಸ್ಯರು ಸಭೆಯ ನಡುವೆ ಪ್ರಜ್ಞೆ ತಪ್ಪಿದರು ಅವರನ್ನು ಆಸ್ಪತ್ರೆಗೆ ಸಾಗಿಸುತಿದ್ದ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದರು. ಮೃತರಿಗೆ ಪತ್ನಿ ಹಾಗು ಇಬ್ಬರು ಪುತ್ರಿಯರು ಇದ್ದಾರೆ ಇವರ ಅಂತ್ಯಕ್ರಿಯೆ ಶುಕ್ರವಾರ ಮಧ್ಯಾಹ್ನ 2ಕ್ಕೆ ಗ್ರಾಮದ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Get Your Own News Portal Website 
Call or WhatsApp - +91 84482 65129

Check Also

ಗಂಗಾವತಿ: ಅರಣ್ಯ ಇಲಾಖೆಯ ಕಛೇರಿಯಲ್ಲೇ ಸಿಬ್ಬಂದಿ ಆತ್ಮಹತ್ಯೆ.!

ಅರಣ್ಯ ಇಲಾಖೆಯ ಕಛೇರಿಯಲ್ಲೇ ಸಿಬ್ಬಂದಿ ಆತ್ಮಹತ್ಯೆ.! ತುಂಗಾವಾಣಿ. ಗಂಗಾವತಿ.ಜ-18 ನಗರದ ಗಂಗಾವತಿ ಅರಣ್ಯ ವಲಯ ಇಲಾಖೆ ಕಚೇರಿಯಲ್ಲೇ ಅರಣ್ಯ ಇಲಾಖೆ …