ಕೊಪ್ಪಳ: ಯುವತಿಯ ವಿಡಿಯೋ ಮಾಡಿ 9 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದ ವ್ಯಕ್ತಿಯ ಮೇಲೆ ಕೇಸ್ ದಾಖಲು.!
ತುಂಗಾವಾಣಿ.
ಕೊಪ್ಪಳ: ಎ-16 ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರ ಪಟ್ಟಣದ ಯುವತಿಗೆ ಪ್ರೀತಿಸು ಅಂತ ಒಂದು ವರ್ಷದಿಂದ ಪಿಡಿಸುತ್ತಿದ್ದ ವ್ಯಕ್ತಿಯ ಮೇಲೆ ಅಪಹರಣ.ಹಠಸಂಭೋಗ. ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡಿ ಬೆದರಿಕೆ ಹಾಕಿದವನ ಮೇಲೆ ತಾವರಗೇರ ಪಟ್ಟಣದ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾವರಗೇರ ಪಟ್ಟಣದ ಯುವತಿಯೊಬ್ಬಳನ್ನು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಬಾದೋಡಿ ಗ್ರಾಮದ ಮಹಮ್ಮದ್ ಚಾಂದಪಾಷ ತಂ. ರಜಾಕ ಪಟೇಲ್ ಎನ್ನುವ ವ್ಯಕ್ತಿ ಒಂದು ವರ್ಷದ ಹಿಂದೆ ಪೋನ್ ಮುಖಾಂತರ ಪರಿಚಯವಾಗಿರುತ್ತಾನೆ, ನಿನ್ನನ್ನೆ ಪ್ರೀತಿ ಮಾಡುತ್ತೆನೆ, ನಿಮ್ಮ ಮನೆಯವರನ್ನು ಒಪ್ಪಿಸುತ್ತೆನೆ ಎಂದು ಆಗಾಗ ಒತ್ತಾಯಿಸುತ್ತಿದ್ನಂತೆ,
ಪೆ-27 ರಂದು ಯುವತಿ ಸಿಂಧನೂರಿನ ಕಾಲೇಜಿಗೆ ಹೋಗಿ ವಾಪಸ್ ತಾವರಗೇರಾಕ್ಕೆ ಬರಲು ಸಿಂಧನೂರು ಬಸ್ ನಿಲ್ದಾಣದಲ್ಲಿ ನಿಂತಾಗ, ಚಾಂದಪಾಷ ಬಂದು ನನ್ನ ಜೊತೆಗೆ ಬರಬೇಕು ಎಂದು ಯುವತಿಗೆ ಒತ್ತಾಯಿಸುತ್ತಾನೆ, ಯುವತಿ ಒಪ್ಪದಿದ್ದಾಗ ತನ್ನ ಕರವಸ್ತ್ರದಿಂದ ಯುವತಿಯ ಬಾಯಿಗೆ ಇಟ್ಟು ಆಕೆ ಮೂರ್ಛೆ ಹೋಗಿದ್ದು ಪ್ರಜ್ಞಾಹೀನ ವಾದಾಗ ಯುವತಿಯನ್ನು ಮಂತ್ರಾಲಯದ ಕಡೆಗೆ ಬಲವಂತವಾಗಿ ಕರೆದುಕೊಂಡು ಹೋಗ್ತಾನೆ, ಮತ್ತೆ ಅಲ್ಲಿಂದ ಬೆಂಗಳೂರಿಗೆ ಹೋಗಿ ನಂತರ ಗೋವಾದ ಪಣಜಿಗೆ ಖಾಸಗಿ ಬಸ್‌ನಲ್ಲಿ ಕರೆದುಕೊಂಡು ಹೋದ ಚಾಂದಪಾಷ, ಮಾ-1 ರಂದು ನಕಲಿ ತಾಳಿ ಹಾಕಿಸಿ, ಬೇರೆ ಬೇರೆ ಬಟ್ಟೆಗಳನ್ನು ಹಾಕಿ ಪೋಟೊ ತಗೆದು ಮರುದಿನ ರಾತ್ರಿ ಒತ್ತಾಯಪೂರ್ವಕವಾಗಿ ಸಿಗರೇಟ್ ಮತ್ತು ಮದ್ಯಪಾನ ಮಾಡಿಸಿ ಹಠಸಂಭೋಗ ಮಾಡಿ, ಸಂಭೋಗ ಮಾಡಿದ ವಿಡಿಯೋ ನನ್ನ ಬಳಿ ಇದೆ ನೀನು ಸಹಕರಿಸಬೇಕು,
ಪೋಲಿಸ್ ಕೇಸ್ ಏನಾದರೂ ಮಾಡಿದರೆ ನಿನ್ನ ಎಲ್ಲಾ ಪೋಟೊ ವಿಡಿಯೋ ಹರಿ ಬಿಡುವೆ, ಎಂದು ಬೆದರಿಕೆ ಒಡ್ಡುವುದಲ್ಲದೆ, ಒಂಬತ್ತು ಲಕ್ಷ ದುಡ್ಡು ಕೊಡಬೇಕು, ನಾನು ಯಾವಾಗ ಕರೆಯುತ್ತೆನೆ ಆಗ ಬರಬೇಕು ಎಂದು ಬೆದರಿಕೆ ಹಾಕಿದ್ದಾನೆ ಎಂದು ತಾವರಗೇರ ಪೋಲಿಸ್ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಾಳೆ,
ಪ್ರಕರಣ ಕೈಗೆತ್ತಿಕೊಂಡ ತಾವರಗೇರ ಪಿ,ಎಸ್,ಐ, ಗೀತಾಂಜಲಿ ಸಿಂಧೆ ತನಿಖೆ ಕೈಗೊಂಡಿದ್ದಾರೆ.!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.