ಜೋಗದ ನಾರಾಯಣಪ್ಪ. ಕೆಲೋಜಿ ಸೇರಿದಂತೆ ಹಲವರ ಹೆಸರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವೆ.
ಎಂದಿದ್ದ ಪೂಜಾರಿ ಮೇಲೆ ಕೇಸ್ ದಾಖಲು.!
ತುಂಗಾವಾಣಿ.
ಕೊಪ್ಪಳ: ಎ-10 ಜಿಲ್ಲೆಯ ಗಂಗಾವತಿ ನಗರದ ಹುಸೇನಪ್ಪ ಪಾಮಪ್ಪ ಪೂಜಾರಿ, ಕೊಪ್ಪಳ ಜಿಲ್ಲಾಡಳಿತ ಭವನದ ಮುಂದೆ ಕಳೆದ ನಾಲ್ಕೈದು ದಿನಗಳಿಂದ ಅನಿರ್ಧಿಷ್ಟಾವದಿ ಸತ್ಯಾಗ್ರಹ ಧರಣಿಯನ್ನು ನಡೆಸುತ್ತಿದ್ದ ಹುಸೇನಪ್ಪ ಪೂಜಾರಿ ಮೇಲೆ ಕೇಸ್ ದಾಖಲಾಗಿದೆ.
ದಿನಾಂಕ : 06-04-2021 ರಂದು ಕೆಲ ಪತ್ರಿಕೆಗಳಿಗೆ ಹೇಳಿಕೆ ಕೊಟ್ಟಿದ್ದ ಪೂಜಾರಿ, ಗಂಗಾವತಿಯ 18 ಸಮಾಜಕ್ಕೆ ಸೇರಿದ್ದ ರುದ್ರಭೂಮಿ ಜಾಗದಲ್ಲಿ ಅಕ್ರಮವಾಗಿ ವಾಣಿಜ್ಯ ಮಳಿಗೆಗಳು ತೆರವುಗೊಳಿಸಿ ಎಂದು ಪೂಜಾರಿ ಹೋರಾಟ ಮಾಡುತ್ತಿದ್ದರು.
ಜಿಲ್ಲಾಡಳಿತ ಕಛೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಪೂಜಾರಿ, ಜಿಲ್ಲಾಧಿಕಾರಿಗಳು ನನ್ನ ಹೋರಾಟಕ್ಕೆ ಸ್ಪಂದಿಸದೇ ಇದ್ದರೆ, ಜೋಗದ ನಾರಾಯಣಪ್ಪ ನಾಯಕ ಮತ್ತು ಕೆಲೋಜಿ ಸೇರಿದಂತೆ 18 ಸಮಾಜದ ಮುಖಂಡರು ಹಾಗು ಸಂಬಂಧಿಸಿದ ಅಧಿಕಾರಿ ಹೆಸರು ಜನ ಪ್ರತಿನಿಧಿ ಹೆಸರುಗಳನ್ನು ಬರೆದು ಆತ್ಮಹತ್ಯೆ ಮಾಡಿಕೊಳ್ಳುವದಾಗಿ ಪತ್ರಿಕಾ ಗೋಷ್ಠಿಯಲ್ಲಿ ಮೂಲಕ ಹೇಳಿಕೆಯನ್ನು ನೀಡಿರುವುದು ಕಂಡುಬಂದಿರುತ್ತದೆ. ಎಂದು ಕೊಪ್ಪಳ ತಹಶಿಲ್ದಾರ್ ಅಂಬರೀಶ್ ಬಿರಾದಾರ ಕೊಪ್ಪಳ ನಗರ ಪೋಲಿಸ್ ಠಾಣೆಯಲ್ಲಿ ಕಲಂ 309, 506 ಐ,ಪಿ,ಸಿ, ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ,
ಪೂಜಾರಿ ಹೇಳಿಕೆಯು ಕಾನೂನು ಸುವ್ಯವಸ್ಥೆ ಶಾಂತಿ ಭಂಗ ಉಂಟು ಮಾಡುವ ಸಂಭವವಿರುವ ಹಿನ್ನೆಲೆಯನ್ನರಿತ ಜಿಲ್ಲಾಡಳಿತ, ಕೊಪ್ಪಳ ತಹಶಿಲ್ದಾರರ ಮುಖಾಂತರ ಹುಸೇನಪ್ಪ ಪಾಮಪ್ಪ ಪೂಜಾರಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ..!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.