ಗಂಗಾವತಿ: ಫೈನಾನ್ಸ್ ಕಿರುಕುಳ
ವ್ಯಕ್ತಿ ಆತ್ಮಹತ್ಯೆ.
ತುಂಗಾವಾಣಿ.
ಗಂಗಾವತಿ: ಎ-17 ನಗರ ಕುವೆಂಪು ಬಡಾವಣೆಯ ನಿವಾಸಿ ಮಹಾಂತೇಶ ಗೌಡ ಮಾಲಿಪಾಟೀಲ್ (39) ಸಾಲ ಬಾಧೆ ತಾಳಲಾರದೆ ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ನಡೆದಿದೆ.
ಮೂಲತಃ ಜೀರಾಳ ಕಲ್ಗುಡಿ ಯವರಾದ ಮಹಾಂತೇಶ ಗೌಡ ಶ್ರೀರಾಮ ಫೈನಾನ್ಸ್ ನಲ್ಲಿ ಕಾರುಗಳ ಮೇಲೆ ಸಾಲ ಪಡೆದಿದ್ದರು, ಲಾಕ್ ಡೌನ್ ಹಿನ್ನೆಲೆ ಮರು ಪಾವತಿ ಮಾಡದೆ ಇರುವುದರಿಂದ ಫೈನಾನ್ಸ್ ಸಿಬ್ಬಂದಿ ಮರಿಗೌಡ ಎಂಬುವವರು ಅವಾಚ್ಯ ಶಬ್ದಗಳನ್ನು ನಿಂದಿಸಿದಲ್ಲದೆ ನಿಮ್ಮ ಮನೆಯ ಮುಂದೆ ಕುಳಿತು ಸಾಲ ಮರು ಪಾವತಿ ಮಾಡುವವರೆಗೆ ಕುಳಿತುಕೊಳ್ಳುವೆ ಎಂದು ಮಾನಸಿಕ ಹಿಂಸೆ ನೀಡಿದ್ದಲ್ಲದೆ ಜೀವದ ಬೆದರಿಕೆ ಹಾಕಿದ್ದರು ಎಂದು ಪತ್ನಿ ಸವಿತಾ ಗಂಡ ಮಹಾಂತೇಶ ಗೌಡ ಮಾಲಿಪಾಟೀಲ್ ರವರು ನಗರ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಪ್ರಕರಣ ಕೈಗೆತ್ತಿಕೊಂಡು ಪೋಲಿಸರು ತನಿಖೆ ಕೈಗೊಂಡಿದ್ದಾರೆ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.