ಗಂಗಾವತಿ: ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು.!
ತಂದೆ ಮತ್ತು ಮಗನ ಮೇಲೆ ಕೇಸ್ ದಾಖಲು.!
ತುಂಗಾವಾಣಿ.
ಗಂಗಾವತಿ: ಎ-12 ತಾಲೂಕಿನ ಕೆಸರಹಟ್ಟಿ ನಿವಾಸಿಯಾಗಿರುವ ವೆಂಕಣ್ಣ ತಂದೆ ಬುಡ್ಡಪ್ಪ ಜಂಗಟಿ (35) ಮೃತ ದುರ್ದೈವಿ ಯಾಗಿದ್ದು,
ನಿನ್ನೆ ಸಂಜೆ (ಎ-11) ಸ್ನೇಹಿತ ಕರಡೆಪ್ಪ ಗೊಲ್ಲರ ಜೊತೆಗೆ ಮಾತನಾಡುತ್ತಾ ನಿಂತಾಗ, ಅದೇ ಗ್ರಾಮದ ವೀರಭದ್ರಪ್ಪ ತಂದೆ ಪಂಪಣ್ಣ ಗುಡೂರು ಹಾಗು ಆತನ ಮಗ ಮಂಜುನಾಥ ಗೂಡುರು, ಮನೆ ಹತ್ತಿರ ಬಾ ನಮ್ಮ ಗಿಡದ ತೆಂಗಿನಕಾಯಿ ಇಳಿಸುವುದಿದೆ ಎಂದು ಕರೆ ಮಾಡಿ ತಿಳಿಸಿದಾಗ, ಅಲ್ಲಿಗೆ ಹೋದ ವೆಂಕಣ್ಣ ಯಾವುದೇ ಸುರಕ್ಷತಾ ಸಲಕರಣೆಗಳು ಕೊಡದೆ ಗಿಡವನ್ನೆರಿಸಿದ್ದಾರೆ, ಗಿಡದ ಮೇಲೆ ಹೋದ ವೆಂಕಣ್ಣ ಆಯಾ ತಪ್ಪಿ ಕೆಳಗೆ ಟ್ರಾಕ್ಟರ್ ಪಡ್ಲರ್ ಮೇಲೆ ಬಿದ್ದು ಸ್ಥಳದಲ್ಲೇ ಮೃತ ಪಟ್ಟಿರುತ್ತಾರೆ, ಸುರಕ್ಷತಾ ಸಲಕರಣೆಗಳು ನೀಡದೆ ನನ್ನ ಪತಿಯನ್ನು ಗಿಡವನ್ನೇರಿಸಿದ ವೀರಭದ್ರಪ್ಪ ಮತ್ತು ಆತನ ಮಗ ಮಂಜುನಾಥನ ಮೇಲೆ ಕ್ರಮ ಕೈಗೊಳ್ಳಲು ಪತ್ನಿ ರೇಣುಕಮ್ಮ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.! ಮೃತನಿಗೆ ಒಂದು ಹೆಣ್ಣು ಮಗು ಮತ್ತು ಎರಡು ಗಂಡು ಮಕ್ಕಳು ಇದ್ದಾರೆ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.