ಗಂಗಾವತಿ: PSI ಧರ್ಪ ಸಾರ್ವಜನಿಕ ಸ್ಥಳದಲ್ಲೇ ಹಲ್ಲೇ.!
ಹಲ್ಲೇ ಮಾಡಿದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ.!
ತುಂಗಾವಾಣಿ.
ಗಂಗಾವತಿ: ಎ-11 ನಗರದ ಟ್ರಾಫಿಕ್ ಪಿ,ಎಸ್,ಐ, ಪುಂಡಲೀಕಪ್ಪ ಜಾಧವ ಹಾಗು ಕಾನ್ಸ್‌ಟೇಬಲ್ (PC) ಸಾರ್ವಜನಿಕ ಸ್ಥಳದಲ್ಲೇ ಒಬ್ಬ ವ್ಯಕ್ತಿಗೆ ಹಲ್ಲೇ ನಡೆಸಿದ ಘಟನೆ ಸಿ,ಸಿ,ಟಿವಿಯಲ್ಲಿ ಸೆರೆಯಾಗಿದೆ,
ದಿನಾಂಕ 8 ರಂದು ನಗರದ ಸಿಬಿಎಸ್ ವೃತ್ತದಲ್ಲಿ ಬೈಕ್ ಸವಾರನ ಮೇಲೆ ಹಲ್ಲೆ ಮಾಡಿ ದರ್ಪ ತೋರಲಾಗಿದೆ.
ಅದಲ್ಲದೇ ಒಬ್ಬ (ಕಾನ್ಸ್‌ಟೇಬಲ್) PC ಯೂ ಕೂಡ ಆ ಯುವಕನಿಗೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡುತ್ತಿರುವುದೂ ಕಂಡು ಬಂದಿದೆ.
ಪೊಲೀಸ್ ಇಲಾಖೆ ಎಂದರೆ ‘ಭಯವಲ್ಲ, ಭರವಸೆ’ ಎಂಬ ಮಾತಿಗೆ ಅನ್ವರ್ಥವಾಗಿ ನಡೆದುಕೊಂಡ ದಕ್ಷ ಅಧಿಕಾರಿಗಳು ನಮ್ಮಲ್ಲಿ ಇದ್ದರು. ಈಗಲೂ ಇದ್ದಾರೆ. ಇಂತಹವರ ಹೆಸರು ಕೇಳಿದರೆ ಪೊಲೀಸ್ ಇಲಾಖೆಯ ಮೇಲೆ ಗೌರವ ಹೆಚ್ಚಾಗುತ್ತದೆ. ಪೋಲಿಸರು ಮಾನವ ಸಮಾಜದ ಅವಿಭಾಜ್ಯ ಅಂಗ, ನೊಂದು ಬಂದ ಜನರ ಸಮಸ್ಯೆಗಳನ್ನು ತಾಳ್ಮೆ ಕಾಯಕನಿಷ್ಠೆ ಯಿಂದ ಆಡಳಿತ ನಡೆಸಿದ ಅನೇಕ ಅಧಿಕಾರಿಗಳು ನಮ್ಮ ನಡುವೆ ಇದ್ದಾರೆ,
ಎಲ್ಲಾ ಅಂಶಗಳನ್ನು ನೋಡುತ್ತಾ ಹೋದರೆ ಇದಕ್ಕೆ ತದ್ವಿರುದ್ಧವಾಗಿ ಇದ್ದಾರೆ ಗಂಗಾವತಿ ಟ್ರಾಫಿಕ್ ಪಿ,ಎಸ್,ಐ, ಪುಂಡಲೀಕಪ್ಪ. ಹಾಗು ಕಾನ್ಸ್‌ಟೇಬಲ್.!
ಸಾರ್ವಜನಿಕ ಸ್ಥಳಗಳಲ್ಲಿ ಅತೀ ಹೀನಾಯವಾಗಿ ಹಲ್ಲೇ ಮಾಡುವ ದೃಶ್ಯ ನೋಡಿದರೆ, ಇವರಲ್ಲಿ ತಾಳ್ಮೆ ಇಲ್ಲ ಎನ್ನುವುದು ಸ್ಪಷ್ಟ ವಾಗುತ್ತೆ, ಸಾರ್ವಜನಿಕರು ತಪ್ಪು ಮಾಡಿದರೆ ಅದಕ್ಕೆ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಲು ಅವಕಾಶ ಇದೆ ಆದರೆ ಸಾರ್ವಜನಿಕ ಸ್ಥಳದಲ್ಲೇ ಹಲ್ಲೇ ಮಾಡುವ ಅಧಿಕಾರ ಇವರಿಗೆ ಕೊಟ್ಟವರು ಯಾರು.? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.!
ಕೊಪ್ಪಳ ಜಿಲ್ಲೆಯಲ್ಲಿ ಅತ್ಯಂತ ದಕ್ಷ ಆಡಳಿತ ನೀಡುತ್ತಿರುವ ಜಿಲ್ಲಾ ವರಿಷ್ಠಾಧಿಕಾರಿ ಶ್ರೀಧರ್ ರವರು ಹಾಗು ಡಿವೈಎಸ್ಪಿ ಉಜ್ಜಿನಕೊಪ್ಪ ರವರ ನಡುವೆ,
ಇಂತಹ ಅಧಿಕಾರಿಗಳಿಂದ ಪೋಲಿಸ್ ಇಲಾಖೆಗೆ ಕೆಟ್ಟ ಹೆಸರು ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿ ಬರ್ತಿವೆ.!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.