ಕೊಪ್ಪಳ: ಗ್ರಾ.ಪಂ.ಹಣ ದುರುಪಯೋಗ.
PDO ಸೇರಿ ಇತರರ ಮೇಲೆ ಕ್ರಿಮಿನಲ್ ಕೇಸ್ ದಾಖಲು.
ತುಂಗಾವಾಣಿ.
ಕೊಪ್ಪಳ: ಮಾ-30 ತಾಲ್ಲೂಕಿನ ಅಗಳಕೇರಾ ಗ್ರಾಮ ಪಂಚಾಯತಿ ಯಲ್ಲಿ 14 ಮತ್ತು 15 ನೇ ಹಣಕಾಸು ಯೋಜನೆಯಡಿಯಲ್ಲಿ ಸರ್ಕಾರದ ಹಣ ದುರುಪಯೋಗ ಮಾಡಿಕೊಂಡ PDO ಹಾಗು ಇತರರ ಮೇಲೆ ಮಾ-29 ರಂದು ಕ್ರಿಮಿನಲ್ ಕೇಸ್ ದಾಖಲಾಗಿದೆ,
ಹೌದು ಇದು ಕೊಪ್ಪಳ ತಾಲ್ಲೂಕಿನಲ್ಲಿ ಬರುವ ಅಗಳಕೇರಾ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಗೌಸಸಾಬ ಮುಲ್ಲಾ ಮತ್ತು ಕಂಪ್ಯೂಟರ್ ಆಪರೇಟರ್ ಸುಮನ್ ಹಾಗು ಇತರರು ಸೇರಿ ಒಟ್ಟು 29,42500-/ ರೂ ಗಳನ್ನು ದುರುಪಯೋಗ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ,
ದಿನಾಂಕ 27-06-2020 ರಿಂದ ಗ್ರಾಮ ಪಂಚಾಯತಿಗಳ ಸಾರ್ವತ್ರಿಕ ಚುನಾವಣೆಗಳು- 2020 ರ ನಂತರ ಗ್ರಾಮ ಪಂಚಾಯತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಮುಕ್ತಾಯವಾದ ನಂತರ ಹೊಸದಾಗಿ ಆಯ್ಕೆಯಾದ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರವಾಗುವವರೆಗೆ ಕೊಪ್ಪಳದ ಜಿಲ್ಲಾಧಿಕಾರಿಗಳು ಅಗಳಕೇರಾ ಗ್ರಾಮ ಪಂಚಾಯತಿಗೆ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಕೊಪ್ಪಳ, ರವರಿಗೆ ನೇಮಿಸಿ ಆದೇಶಿಸಿರುತ್ತಾರೆ.
2014-15ನೇ ಹಣಕಾಸು ಯೋಜನೆಯಡಿ ಒಟ್ಟು ರೂ . 29,42,500 / – ಗಳನ್ನು ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಸುಮನ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗೌಸಸಾಬ್ ಮುಲ್ಲಾ ಹಾಗೂ ಆಡಳಿತಾಧಿಕಾರಿಗಳಾದ ಶ್ರೀಮತಿ ರೋಹಿಣಿ ಕೊಟಗಾರ ಶಿಶು ಅಭಿವೃದ್ಧಿ ಅಧಿಕಾರಿಗಳು ಕೊಪ್ಪಳ, ರವರು ಸೇರಿಕೊಂಡು ಸರಕಾರದ ಹಣ ದುರುಪಯೋಗ ಮಾಡಿರುತ್ತಾರೆ ಅಂತಾ ಕೊಪ್ಪಳ ತಾಲ್ಲೂಕು ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ, ಕೊಪ್ಪಳ ಜಿಲ್ಲಾ ಪಂಚಾಯತ ಸಿ.ಇ.ಒ. ರವರಿಗೆ ಪತ್ರ ಬರೆದು ಮಾಹಿತಿ ತಿಳಿಸಿರುತ್ತಾರೆ,
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ ರವರು, ಸದರಿ 3 ಜನರಿಗೆ ಕಾರಣ ಕೇಳುವ ನೋಟಿಸನ್ನು ಹೊರಡಿಸಿದ್ದು , ನೋಟಿಸಗೆ ಶ್ರೀಮತಿ ರೋಹಿಣಿ ಕೊಟಗಾರ ಶಿಶು ಅಭಿವೃದ್ಧಿ ಅಧಿಕಾರಿಗಳು ಇವರು ಮಾತ್ರ ಲಿಖಿತ ಸಮಜಾಯಿಸಿ ಉತ್ತರವನ್ನು ಕೊಪ್ಪಳ ಜಿಲ್ಲಾ ಪಂಚಾಯತ CEO ರವರಿಗೆ ಸಲ್ಲಿಸಿರುತ್ತಾರೆ , ಉಳಿದ ಇಬ್ಬರು ಉತ್ತರ ಸಲ್ಲಿಸಿರುವುದಿಲ್ಲ . ನಂತರ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕೊಪ್ಪಳ, ರವರು ಸದರಿ ತಪ್ಪಿತಸ್ಥರ ವಿರುದ್ಧ ಸಂಭಂದ ಪಟ್ಟ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ಸಲ್ಲಿಸುವಂತೆ ಸೂಚಿಸಿದ ಮೇರೆಗೆ ಕೊಪ್ಪಳ ತಾಲೂಕಿನ ಅಗಳಕೇರಾ ಗ್ರಾಮ ಪಂಚಾಯತಿ ಯಲ್ಲಿ 14 ನೇ ಮತ್ತು 15 ನೇ ಹಣಕಾಸು ಯೋಜನೆಯಡಿಯಲ್ಲಿ ಸರಕಾರದ ಹಣ ರೂ . 29,42,500 / – ಗಳನ್ನು ದುರುಪಯೋಗವಾಗಲು ಕಾರಣೀಭೂತರಾದ ಗೌಸಸಾಬ್ ಹಾಗೂ ಇತರರ ವಿರುದ್ದ ಕೊಪ್ಪಳ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ, ಕೊಪ್ಪಳದ ಸೈಬರ್ ಆರ್ಥಿಕ ಮತ್ತು ಮಾದಕದ್ರವ್ಯ ಅಪರಾಧ ಪೋಲಿಸ್ ಠಾಣೆಯಲ್ಲಿ ಕಲಂ 409 ಮತ್ತು 420 ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದ್ದಾರೆ, ಪಿ,ಐ ಚಂದ್ರಶೇಖರ ಹರಿಹರ ರವರು ಪ್ರಕರಣ ಜಾಡು ಹಿಡಿದು ತನಿಖೆ ಕೈಗೊಂಡಿದ್ದಾರೆ..!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.