ಗ್ರಾಮ ಪಂಚಾಯತಿ ಹಣ ದುರುಪಯೋಗ ಪ್ರಕರಣ. ಆರೋಪಿತರ ಜಾಮೀನು ಅರ್ಜಿ ತಿರಸ್ಕರಿಸಿ ನ್ಯಾಯಾಲಯ.!
ತುಂಗಾವಾಣಿ. ಕೊಪ್ಪಳ, ಏ.-09 ಕೊಪ್ಪಳ ತಾಲೂಕು ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಅಗಳಕೇರಾ ಗ್ರಾಮ ಪಂಚಾಯಿತಿಯಲ್ಲಿ 14-15 ನೇ ಹಣಕಾಸು ಯೋಜನೆಯಡಿ, ಪಿಡಿಓ ಗೌಸುಸಾಬ್ ಮುಲ್ಲಾ ಹಾಗು ಕಂಪ್ಯೂಟರ್ ಆಪರೇಟರ್ ಸುಮನ್ ಸಿಂಧೋಗಿ ಇವರು ವಿವಿಧ ಕಾಮಗಾರಿಗಳಿಗೆ ಮಂಜೂರಾದ ಸರ್ಕಾರದ ಹಣವನ್ನು ದುರ್ಬಳಕೆ ಮಾಡಿಕೊಂಡ ಆರೋಪದಡಿಯಲ್ಲಿನ ಆರೋಪಿತರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಪ್ರಧಾನ ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ಮನು ಶರ್ಮಾ ಅವರು ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ.
ಅಗಳಕೇರಾ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಕಂಪ್ಯೂಟರ್ ಆಪರೇಟರ್ ಆಗಿದ್ದ ಸುಮನ್ ಸಿಂಧೋಗಿ ಹಾಗೂ ಪಿಡಿಓ ಗೌಸುಸಾಬ್ ಮುಲ್ಲಾ ಇವರು 2014-15 ನೇ ಹಣಕಾಸು ಯೋಜನೆ ಅಡಿಯಲ್ಲಿ ವಿವಿಧ ಕಾಮಗಾರಿಗಳಿಗೆ ಮಂಜೂರಾದ ಸರ್ಕಾರದ ಹಣ ರೂ. 29,42,500/- ಗಳನ್ನು ದುರುಪಯೋಗ ಪಡಿಸಿಕೊಂಡಿರುವುದಾಗಿ
ಕೊಪ್ಪಳ: ಗ್ರಾ.ಪಂ.ಹಣ ದುರುಪಯೋಗ. PDO ಸೇರಿ ಇತರರ ಮೇಲೆ ಕ್ರಿಮಿನಲ್ ಕೇಸ್ ದಾಖಲು.
ಕೊಪ್ಪಳ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ರವರು, ನೀಡಿದ ದೂರಿನ ಮೇರೆಗೆ ಕೊಪ್ಪಳ ಸೈಬರ್ ಪೋಲಿಸರು ಠಾಣೆಯಲ್ಲಿ ಕಲಂ. 409, 420 ಐಪಿಸಿ ಅಡಿಯಲ್ಲಿ ದೂರು ದಾಖಲಿಸಿದ್ದರು. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ವೆಂಕಟೇಶ ವಿ.ಎ. ಅವರು ವಾದ ಮಂಡಿಸಿದ್ದರು ಎಂದು ಪ್ರಕಟಣೆ ತಿಳಿಸಿದ್ದಾರೆ.!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.