ಗಂಗಾವತಿ: ಹೋಳಿ ಹಬ್ಬ ಆಚರಿಸಿ. ಈಜಲು ಹೋದ ಯುವಕ ಶವವಾಗಿ ಪತ್ತೆ.!
ದೇವಘಾಟದ ಬಳಿ ನಡೆದ ಘಟನೆ.
ತುಂಗಾವಾಣಿ.
ಗಂಗಾವತಿ: ಮಾ-29 ಹೋಳಿ ಹಬ್ಬದ ಓಕುಳಿಯಾಟದ ನಂತರ ಸ್ನೇಹಿತರೊಂದಿಗೆ ಸ್ನಾನ ಮಾಡಲು ತಾಲ್ಲೂಕಿನ ದೇವಘಾಟ ಬಳಿಯ ತುಂಗಭದ್ರಾ ನದಿಗೆ ತೆರಳಿದ್ದು ಸತೀಶ್ (18) ಯುವಕ ನೀರಲ್ಲಿ ಈಜಲು ಹೋಗಿ ಶವವಾಗಿ ಪತ್ತೆಯಾಗಿದ್ದಾರೆ ಘಟನೆ ನಡೆದಿದೆ.
ಗಂಗಾವತಿ ನಗರದ ಚಲುವಾದಿ ಓಣೆಯ ಸತೀಶ್ ಮತ್ತು ರಾಕೇಶ ನದಿಗೆ ಸ್ನಾನ ಮಾಡುಲು ನದಿ ಯೊಳಗೆ ಇಳಿದಾಗ ನೀರಿನ ಸೆಳೆತಕ್ಕೆ ಇಬ್ಬರೂ ನೀರಲ್ಲಿ ಮುಳುಗಿದ್ದಾರೆ, ಅವರ ಸನಿಹದಲ್ಲಿದ್ದ ಕೆಲವರು ರಾಕೇಶನನ್ನು ರಕ್ಷಿಸಿದ್ದಾರೆ,
ಸ್ಥಳಕ್ಕೆ DSP ಆರ್,ಎಸ್,ಉಜ್ಜಿನಕೊಪ್ಪ ಆಗಮಿಸಿದ್ದು ಅವರ ನೇತೃತ್ವದಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು, ಸಾಣಾಪುರ ಮತ್ತು ಆನೆಗೊಂದಿ ಭಾಗದ ತೆಪ್ಪ ತರೆಸಲಾಗಿ ಆದರೆ ಕತ್ತಲು ಆವರಿಸಿದ್ದರಿಂದ ಇಂದು ಬೆಳಿಗ್ಗೆಯಿಂದ ಶೋಧ ಕಾರ್ಯ ಮುಂದೊರೆಸಿದ ತಂಡ ಕೆಲ ಘಂಟೆಯಲ್ಲಿ ಸತೀಶ್ ಮೃತ ದೇಹ ಹೊರ ತಗೆಯಲಾಗಿದೆ, ಮೃತ ಸಂಭಂದಿಕರ ಆಕ್ರಂದನ ಮುಗಿಲು ಮುಟ್ಟಿತ್ತು..!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.