ಗಂಗಾವತಿ: ಭೀಕರ ರಸ್ತೆ ಅಪಘಾತ
ಸ್ಥಳದಲ್ಲೇ ಮೂವರ ಸಾವು.!
ತುಂಗಾವಾಣಿ.
ಗಂಗಾವತಿ: ಮಾ-29 ತಾಲ್ಲೂಕಿನ ಮುಕ್ಕುಂಪಿ ಗ್ರಾಮದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಾ-28 ರಾತ್ರಿ 10 ರ ಸುಮಾರಿಗೆ ನಡೆದಿದೆ.
ತಮ್ಮ ಹೊಲದಲ್ಲಿ ಬೆಳೆದ ಶೇಂಗಾ ಮಾರಾಟ ಮಾಡಲು ಗಂಗಾವತಿ ನಗರಕ್ಕೆ ಅಶೋಕ ಲೇಲ್ಯಾಂಡ್ KA37 B 1836 ವಾಹನದಲ್ಲಿ ನಾಲ್ಕು ಜನರು ಬಂದು ವ್ಯಾಪಾರ ಮಾಡಿ ವಾಪಸ್ಸು ತಮ್ಮ ಬೂದಗುಂಪ ಗ್ರಾಮಕ್ಕೆ ಪ್ರಯಾಣಿಸುತ್ತಿದ್ದರು, ಮುಕ್ಕುಂಪಿ ಗ್ರಾಮದ ಬಳಿ ಕೊಪ್ಪಳದ ಕಡೆಯಿಂದ ಅತೀ ವೇಗವಾಗಿ ರಾಂಗ್ ರೂಟ್ ನಲ್ಲಿ ಬಂದ ಆಂದ್ರಪ್ರದೇಶ ನೊಂದಾಯಿತ ಲಾರಿ ನಂ: AP 39-TE 8128 ಮುಖಾಮುಖಿ ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ, ಒಬ್ಬರು ಗಂಭೀರ ಗಾಯವಾಗಿದೆ,
ಸಾವನ್ನಪ್ಪಿದ ದುರ್ಧೈವಿಗಳು,
ಬೂದಗುಂಪ ಗ್ರಾಮದ ಚಾಲಕ ರಾಮಣ್ಣ ಡೊಳ್ಳಿನ, ಫಕೀರಪ್ಪ ಹೊಳೆಯಾಚೆ, ಭೀಮಣ್ಣ ಹ್ಯಾಟಿ, ಎಂದು ಗುರುತಿಸಲಾಗಿದೆ, ಗಾಯಾಳು ಮಂಜುನಾಥ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ, ಅಪಘಾತಕ್ಕೆ ಕಾರಣವಾದ ಲಾರಿ ಚಾಲಕ ಪರಾರಿಯಾಗಿದ್ದು ಚಾಲಕನ ವಿರುದ್ಧ
ಕಲಂ 279,338 304 [ ಎ ] ಐಪಿಸಿ & 187 ಐಎಂವಿ ಕಾಯ್ದೆ ಅಡಿಯಲ್ಲಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.