ಕಾರ್ ಪಲ್ಟಿ
ಸ್ಥಳದಲ್ಲೇ ಶಿಕ್ಷಕನ ದುರ್ಮರಣ.
ತುಂಗಾವಾಣಿ.
ಗಂಗಾವತಿ: ಮಾ-20 ತಾಲ್ಲೂಕಿನ ಇಂದರಗಿ ಗ್ರಾಮದ ಹತ್ತಿರ ಭೀಕರ ರಸ್ತೆ ಅಪಘಾತ ಸಂಭವಿಸಿದೆ, ಸ್ಥಳದಲ್ಲೇ ಒಬ್ಬ ವ್ಯಕ್ತಿ ಸಾವನ್ನಪ್ಪಿದ ಘಟನೆ ನಡೆದಿದೆ,
ಗಂಗಾವತಿ ತಾಲ್ಲೂಕಿನ ಕೋಟಯ್ಯ ಕ್ಯಾಂಪ್ ಗ್ರಾಮದ ಶಿಕ್ಷಕ ನವೀನ ಸೇರಿ ಮೂವರು ಪೋಲ್ಡ್ ಕಾರ್ ನಲ್ಲಿ ಗಂಗಾವತಿ ಯಿಂದ ದಾವಣಗೆರೆ ಜಿಲ್ಲೆಗೆ ಪ್ರಯಾಣಿಸುತ್ತಿದ್ದರು,
ದೊಡ್ಲಾ ಡೈರಿ ದಾಟಿದ ನಂತರ ಕೆಲವು ತಿರುವುಗಳು ಬರ್ತಾವೆ ಆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರ್ ಪಲ್ಟಿ ಯಾಗಿದೆ,
ಶಿಕ್ಷಕ ನವೀನ ಚಾಲಕನ ಪಕ್ಕದಲ್ಲೇ ಕುಳಿತಿದ್ದು ಎಡಬದಿ ಕಾರ್ ಪಲ್ಟಿ ಯಾಗಿದ್ದು ತಲೆಗೆ ತೀವ್ರ ಸ್ವರೂಪದ ಗಾಯವಾಗಿದ್ದು ಸ್ಥಳದಲ್ಲೇ ಶಿಕ್ಷಕ ದುರ್ಮರಣ ಹೊಂದಿದ್ದು ಇನ್ನಿಬ್ಬರನ್ನು ಕೊಪ್ಪಳದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತುಂಗಾವಾಣಿಗೆ ಮುನಿರಾಬಾದ್ ಪಿ,ಎಸ್,ಐ, ಸುಪ್ರೀತ್ ಗೌಡ ತಿಳಿಸಿದ್ದಾರೆ,
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.