ಭೀಕರ ರಸ್ತೆ ಅಪಘಾತ
ತಂದೆ ಮಗ ಸ್ಥಳದಲ್ಲೇ ದುರ್ಮರಣ.!
ಮಾನವೀಯತೆ ಮೆರೆದ ಶಾಸಕ.
ತುಂಗಾವಾಣಿ.
ಗಂಗಾವತಿ: ಜ-18 ತಾಲ್ಲೂಕಿನ ಜಂಗಮರ ಕಲ್ಗುಡಿ ಹತ್ತಿರ ಭೀಕರ ರಸ್ತೆ ಅಪಘಾತ ಸಂಭವಿಸಿದೆ,
ಗಂಗಾವತಿ ಮಾರ್ಗ ವಾಗಿ ಬರುತ್ತಿದ್ದ ENKSRTC ಸರ್ಕಾರಿ ಬಸ್ ಕಾರಟಗಿ ಮಾರ್ಗದಿಂದ ಗಂಗಾವತಿ ಕಡೆಗೆ ಸಂಚರಿಸುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದ ರಭಸಕ್ಕೆ ತಂದೆ ಮಗ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ,
ಗಂಗಾವತಿ ನಗರದ ಜಯನಗರ ನಿವಾಸಿಗಳಾದ ಹನುಮೇಶ ನಾಯಕ (30) ಮಗ ಪವನ್ (8) ಎಂದು ತಿಳಿದು ಬಂದಿದೆ,
ಅದೇ ಮಾರ್ಗವಾಗಿ ಕನಕಗಿರಿ ಶಾಸಕ ಬಸವರಾಜ ದಡೆಸೂಗುರು ಪ್ರಯಾಣಿಸುತ್ತಿದ್ದರು ಅಪಘಾತ ಸ್ಥಳದಲ್ಲಿ ತಮ್ಮ ಕಾರು ನಿಲ್ಲಿಸಿ ಅಪಘಾತದ ಮಾಹಿತಿ ಗ್ರಾಮೀಣ ಪೋಲಿಸರಿಗೆ ತಿಳಿಸಿ, ಅಂಬುಲೇನ್ಸ್ ವ್ಯವಸ್ಥೆ ಮಾಡಿ, ಕುಟುಂಬಸ್ಥರು ಸ್ಥಳಕ್ಕೆ ದಾವಿಸಿದಾಗ ಸಾಂತ್ವಾನ ಹೇಳಿ ಮಾನವಿಯತೆ ಮೆರೆದರು..!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.