Breaking News

ಕೊಪ್ಪಳ: ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದ.? ಇಬ್ಬರನ್ನು ಗಡಿಪಾರು.

ಕೊಪ್ಪಳ: ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದ.?
ಇಬ್ಬರನ್ನು ಗಡಿಪಾರು.


ತುಂಗಾವಾಣಿ.
ಕೊಪ್ಪಳ: ಜ-16 ಜಿಲ್ಲೆಯಲ್ಲಿ ಪದೇ ಪದೇ ಮಟ್ಕಾ ವ್ಯವಹಾರದಲ್ಲಿ ತೊಡಗಿಕೊಂಡು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದ, ಇಬ್ಬರನ್ನು ಉಪವಿಭಾಗದ ದಂಡಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ರವರು ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ,

ತುಂಗಾವಾಣಿ ಯೊಂದಿಗೆ ಮಾತನಾಡಿದ AC ಯವರು ಈರ್ವರ ವಿರುದ್ಧ ಸಾಕಷ್ಟು ಪ್ರಕರಣಗಳು ದಾಖಲಾಗಿವೆ, ನಿರಂತರವಾಗಿ ಮಟ್ಗಾ ಜೂಜಾಟದಲ್ಲಿ ತೊಡಗಿದ್ದ ಕಾನೂನು ಬಾಹಿರ ನಿಯಾಮಗಳಂತೆ ಈರ್ವರೂ ಗಡಿಪಾರಿಗೆ ಯೋಗ್ಯ ಎಂದು ಗಮನಿಸಿ ಯಮನೂರು ತಂ. ಮೇಘರಾಜ ಸಿಂಧನೂರು,ಸಾ: ಕುಷ್ಟಗಿ ಮತ್ತು ನರಸಪ್ಪ ತಂ. ಶಿವಪ್ಪ ನೇಕಾರ ಸಾ: ಕುಷ್ಟಗಿ ಇಬ್ಬರನ್ನೂ ಗಡಿಪಾರಿಗೆ ಆದೇಶ ಮಾಡಲಾಗಿದೆ,

ಯಮನೂರು ಮೇಘರಾಜನಿಗೆ ಚಾಮರಾಜನಗರ ಜಿಲ್ಲೆಗೆ ಹಾಗು ನರಸಪ್ಪ ಶಿವಪ್ಪ ನೇಕಾರ ಇವರಿಗೆ ಕೋಲಾರ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ ಎಂದು ತಿಳಿಸಿದರು.

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Check Also

ಗಂಗಾವತಿ: ಟೋಲ್ ಗೇಟ್ ಬಳಿ ಗಲಾಟೆ ಇಬ್ಬರ ಮೇಲೆ FIR

ಗಂಗಾವತಿ: ಟೋಲ್ ಗೇಟ್ ಬಳಿ ಗಲಾಟೆ ಇಬ್ಬರ ಮೇಲೆ FIR ತುಂಗಾವಾಣಿ. ಗಂಗಾವತಿ: ಗ್ರಾಮ ಪಂಚಾಯತಿ ಚುನಾವಣೆಯ ನಿಮಿತ್ತ ಗಂಗಾವತಿ …