ಲಂಚದ ಬೇಡಿಕೆ ಇಟ್ಟ,
ಕಂದಾಯ ನಿರೀಕ್ಷಕ ಅಮಾನತ್ತು.
ತುಂಗಾವಾಣಿ.
ಕೊಪ್ಪಳ: ಜ-17 ಜಿಲ್ಲೆಯ ಗಂಗಾವತಿ ನಗರಸಭೆಯ ಕಂದಾಯ ನಿರೀಕ್ಷಕ ಪ್ರಕಾಶ ಗಡಾದ ಕರ್ತವ್ಯ ಲೋಪ ಮತ್ತು ಲಂಚಾವತಾರದ ಆಡಿಯೋ ದೂರು ಹಿನ್ನೆಲೆ, ಕೊಪ್ಪಳ ಜಿಲ್ಲಾಧಿಕಾರಿ Vk ಸುರಳ್ಕರ್ ರವರು, ಕಂದಾಯ ನಿರೀಕ್ಷಕ ಪ್ರಕಾಶ ಗಡಾದ ರವರನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ,
ಆರ್,ಐ, ಪ್ರಕಾಶ ಗಡಾದ ಮೂಲತಃ ಕುಷ್ಟಗಿ ಪುರಸಭೆಯ ಕಂದಾಯ ನಿರೀಕ್ಷಕ ಅಧಿಕಾರಿ, ಸಧ್ಯ ಪ್ರಭಾರಿಯಾಗಿ ಗಂಗಾವತಿ ನಗರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಘಟನೆಯ ವಿವರ:
ಇದೆ ತಿಂಗಳ 13 ರಂದು ಜಿಲ್ಲಾಧಿಕಾರಿಗಳಿಗೆ, ಇಮ್ತಿಯಾಜ್ ವ್ಯಾಟ್ಸಪ್ ಮೂಲಕ ಸಂದೇಶ ಕಳುಹಿಸಿ, ಕಂದಾಯ ನಿರೀಕ್ಷಕ ಪ್ರಕಾಶ ಗಡಾದ ಮತ್ತು ಸಜ್ಜಾದ್ ವಕೀಲ ಮಾತನಾಡಿರುವ ಆಡಿಯೋ ಸಂಭಾಷಣೆಯ ತುಣುಕನ್ನು, ವಕೀಲ ಇಮ್ತಿಯಾಜ್ ನೇರವಾಗಿ ಜಿಲ್ಲಾಧಿಕಾರಿಗಳ ನಂಬರ್ ಗೆ ಕಳುಹಿಸಿ ದೂರು ಸಹ ಸಲ್ಲಿಸಿರುತ್ತಾರೆ,
ಯಾವುದೇ ಹಂಗಿಲ್ಲದೆ ನೇರಾ ನೇರವಾಗಿ ಲಂಚ ಕೇಳುತ್ತಿರುವ ಆಡಿಯೋ ವೈರಲ್ ಆಗಿದೆ, ಗಂಗಾವತಿ ನಗರಸಭೆಯಲ್ಲಿ ದುಡ್ಡು ಕೊಟ್ಟರೆ ಮಾತ್ರ ಪೈಲ್ ಮುಂದಕ್ಕೆ ಇಲ್ಲವೆಂದರೆ ಯಾವುದೇ ಪೈಲ್ ಮುಂದಕ್ಕೆ ಹೋಗಲ್ಲ ಎನ್ನುವುದು ಸ್ಪಷ್ಟ ವಾಗುತ್ತಿದೆ, ಗಂಗಾವತಿ ನಗರಸಭೆಯಲ್ಲಿ ಇನ್ನೂ ಕೆಲ ಅಧಿಕಾರಿಗಳು ಸುಮಾರು ವರ್ಷಗಳಿಂದ ಇಲ್ಲೇ ಠಿಕಾಣಿ ಹೂಡಿದ್ದಾರೆ, ಠಿಕಾಣಿ ಹೂಡಿದ ಅಧಿಕಾರಿಗಳು ಬೇರಡೆ ವರ್ಗಾ ವಾದಾಗ ಮಾತ್ರ ನಗರಸಭೆ ಭ್ರಷ್ಟಾಚಾರದಿಂದ ಹೊರ ಬರಬಹುದು ಎನ್ನುತ್ತಾರೆ ಪ್ರಜ್ಞಾವಂತ ನಾಗರಿಕರು.!
ವಕೀಲ ಇಮ್ತಿಯಾಜ್ ದೂರು ಮತ್ತು
ಗಂಗಾವತಿ ನಗರಸಭೆಯ ಪೌರಾಯುಕ್ತ ಅರವಿಂದ ಜಮಖಂಡಿರವರ ವರದಿ ಆಧಾರದ ಮೇಲೆ ಕರ್ತವ್ಯ ಲೋಪ ಮತ್ತು ಕಡತ ವಿಲೇವಾರಿಗೆ ಲಂಚದ ಆರೋಪದಡಿಯಲ್ಲಿ ಅಮಾನತ್ತು ಮಾಡಲಾಗಿದೆ.!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.