ಮಿಂಚಿನ ಕಾರ್ಯಾಚರಣೆ:
ಪಂದ್ಯದ ಹುಂಜಗಳ ಸಮೇತ ಒಂಬತ್ತು ಜನರ ಬಂಧನ .
ತುಂಗಾವಾಣಿ.
ಗಂಗಾವತಿ: ಜ-15 ಸಂಕ್ರಮಣದ ಪ್ರಯುಕ್ತ ತಾಲ್ಲೂಕಿನ ಹೆಬ್ಬಾಳ ಕ್ಯಾಂಪ್, ಆಚಾರನರಸಾಪುರ, ಮರಳಿ, ಗಂಗಾವತಿ, ಕಾರಟಗಿ, ಶ್ರೀರಾಮನಗರ,ದ ಜನರು ನಿಷೇಧಿತ ಕೋಳಿ ಪಂದ್ಯಾವಳಿ ಭಾರಿ ಪ್ರಮಾಣದಲ್ಲಿ ನಡೆದಿದ್ದು ಬೆಳಕಿಗೆ ಬಂದಿದೆ. ಹೆಬ್ಬಾಳ ಕ್ಯಾಂಪ್ ಸೀಮೆಯ ಬಳಿ ಖಚಿತ ಮಾಹಿತಿ ಮೇರೆಗೆ ಗ್ರಾಮೀಣ ಠಾಣೆಯ CPI ಉದಯರವಿ ಮತ್ತು ತಂಡ ದಾಳಿ ಮಾಡಿ ಹೊಲದ ಮಾಲೀಕ ಸೇರಿ ಒಂಬತ್ತು ಜನರನ್ನು ಬಂಧಿಸಿ, ಏಳು ಬೈಕ್ ಪಂಧ್ಯ ಆಡುವ ಹುಂಜದ ಜೂಜಾಟದ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ,
ನಿದ್ರೆಗನ್ಯೆಯರ ಗಿಡ ಎಂದೆ ಪ್ರಖ್ಯಾತಿ ಪಡೆದಿರುವ ಈ ಜಾಗದಲ್ಲಿ ಜೂಜೂಕೋರರು ಕೋಳಿ ಪಂದ್ಯವನ್ನು ರಾಜಾರೋಷವಾಗಿ ನಡೆಸಿದ್ದು ಹುಂಜಗಳಿಗೆ ಸಾಕಷ್ಟು ತಯಾರಿ ಮಾಡಿ ಬಲಿಷ್ಠಗೊಳಿಸಿ, ಹುಂಜಗಳ ಕಾಲಿಗೆ ಸಣ್ಣ ರೇಜರ್ ಬ್ಲೇಡ್ ಕಟ್ಟಿ ಪಂದ್ಯ ನಡೆಸಲಾಗುತ್ತದೆ, ಇದಕ್ಕೆ ಸಾವಿರಾರು ರೂಪಾಯಿ ಜೂಜು ಕಟ್ಟಿ ಪಂದ್ಯ ನಡೆಸಲಾಗುತ್ತಿತ್ತು ಪಂಧ್ಯದ ಹುಂಜಕ್ಕೆ ಭಾರಿ ಬೇಡಿಕೆ ಇದ್ದು ಬಲಿಷ್ಠ ಹಾಗು ಅನುಭವಿ ಹುಂಜಕ್ಕೆ ಲಕ್ಷ ಲಕ್ಷ ಬೆಲೆ ಕಟ್ಟಲಾಗುತ್ತದೆ,
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.