ಬಳ್ಳಾರಿ ಜಿಲ್ಲೆಯ ಯುವಕ ಮೊಗ್ಗಿನ ಮನಸ್ಸು ಖ್ಯಾತಿಯ ನಾಯಕ ನಟ ಆಕಾಶ್ ನ ಸಿನಿಮಾ ರಂಗದ ರೋಚಕ ಜರ್ನಿ Bಗ… ಚಿತ್ರದ ಮೂಲಕ ಮತ್ತೆ ಬೆಳ್ಳಿತೆರೆಗೆ ಕಮ್ ಬ್ಯಾಕ್ ಮಾಡಿದ ಆಕಾಶ್.
ಸಿನಿಮಾ ರಂಗ ಎನ್ನುವುದು ಬಲು ರೋಚಕ ಎಷ್ಟೋ ಕಲಾವಿದರು ತಮ್ಮನ್ನು ತಾವು ತೊಡಗಿಸಿಕೊಳ್ಳಲು ನಾನಾ ಕಸರತ್ತು ಮಾಡ್ತಾರೆ ಆದರೆ ಯಾವುದೇ ಹಿನ್ನಲೆ ಇಲ್ಲದೆ ತನ್ನ ಪ್ರತಿಭೆಯೊಂದಿಗೆ ಸಿನಿಮಾರಂಗದಲ್ಲಿ ತೊಡಗಿಸಿಕೊಂಡು ತನ್ನ ನಟನೆಯಿಂದ ಹೊಸ ಛಾಪು ಮೂಡಿಸುತ್ತಿರುವ ನಟ ಆಕಾಶ್.
ಮೂಲತಃ ಬಳ್ಳಾರಿ ಜಿಲ್ಲೆಯವರು.
ಜೆ,ಡಿ ಆಕಾಶ್ ಅವರ ಸಿನಿಮಾ ಪ್ರಯಾಣ ಅಷ್ಟು ಸುಲುಭವಾಗಿರಲಿಲ್ಲ ಎ,ಎಸ್ ಮೂರ್ತಿ ಮಾಲೀಕತ್ವದ ಅಭಿನಯ ತರಂಗ ಎಂಬ ಶಾಲೆಯಲ್ಲಿ ಸೇರಿ ಹಲವಾರು ನಾಟಕಗಳಲ್ಲಿ ಅವರದೇ ಆದ ವಿಶೇಷ ಪಾತ್ರಗಳಿಂದ ಅಲ್ಲಿ ಬರುತ್ತಿದ್ದ ನಿರ್ದೇಶಕರ ಮನಗೆದ್ದರು, ಅದಾದ ನಂತರ ಮೊಗ್ಗಿನ ಮನಸ್ಸು ಚಿತ್ರದಲ್ಲಿ ನಟ ಯಶ್ ನ ಸರಿಸಮನಾಗಿ ನಾಯಕ ನಟನಾಗಿ ಅಭಿನಯಿಸಲು ಅವಕಾಶ ಬಂದಿತು, ಅ ಚಿತ್ರವು 2007ರಲ್ಲಿ ಬಿಡುಗಡೆಯಾಯಿತು.ಈ ಚಿತ್ರವು ಗಾಂಧಿನಗರದಲ್ಲಿ ಹೊಸ ಸಂಚಲನವನ್ನು ಮೂಡಿಸಿತು. ಅದಾದ ನಂತರ “ಕ್ರಿಷ್ಣನ್ ಲವ್ ಸ್ಟೋರಿ” ಹಾಗೂ “ಹುಡುಗ ಹುಡುಗಿ ” “ಕಮರೊಟ್ಟು ಚೆಕ್ ಪೋಸ್ಟ್” ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಆಕಾಶ್ ಅದಾದ ನಂತರ “ಒಂದೇ ಒಂದು ಸಾರಿ” ಹಾಗೂ “ನೆರಳು” ಚಿತ್ರದ ಮೂಲಕ ನಟ ಜೆ,ಡಿ, ಆಕಾಶ್ ನಾಯಕ ನಟನಾಗಿ ಅಭಿನಯಿಸಿದರು. ನಂತರ ಸರಿ ಸುಮಾರು ಒಂದು ವರ್ಷಗಳು ಯಾವುದೇ ಸಿನಿಮಾ ಮಾಡದೇ ಹೆಚ್.ಎಂ ಶ್ರೀ ನಂದನ್ ನಿರ್ದೇಶಿಸುತ್ತಿರುವ “ಬೀಗ ” ಎಂಬ ಚಿತ್ರಕ್ಕಾಗಿ ತಮ್ಮ ಹಾವ ಭಾವ ಬದಲಿಸಿಕೊಂಡು , ದೇಹವನ್ನು ದಂಡಿಸಿ ಹೊಸ ಲುಕ್ ನಲ್ಲಿ “ಬೀಗ” ಎಂಬ ಚಿತ್ರದಲ್ಲಿ ನಾಯಕ ನಟನಾಗಿ ಮೊದಲೆಲ್ಲಾ ಸಿನಿಮಾಗಳಿಗಿಂತ ವಿಭಿನ್ನವಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. “ಬೀಗ” ಚಿತ್ರವು ಇನ್ನೇನೂ ಕೆಲವೇ ದಿನಗಳಲ್ಲಿ ಪ್ರೇಕ್ಷಕರ ಎದುರು ಬರಲು ಸಿದ್ದವಾಗಿದೆ.
ಹಾಗೂ ಜಗನ್ ಅಲೋಶಿಯಸ್ ನಿರ್ದೇಶನದ “ಕಟ್ಟ ಕಡೆಯ ನಿಮಿಷ ” ಎಂಬ ಚಿತ್ರದಲ್ಲಿ ನಾಯಕ ನಟನಾಗಿ ನಟಿಸುತ್ತಿದ್ದಾರೆ.ಈ ಚಿತ್ರವು 90 ಭಾಗ ಚಿತ್ರೀಕರಣ ಮುಗಿದಿದ್ದು ಇನ್ನೂ ಕೆಲವೇ ದಿನಗಳಲ್ಲಿ ಚಿತ್ರೀಕರಣ ಮುಗಿಸಲು ಚಿತ್ರತಂಡ ಸಿಧ್ದವಾಗಿದೆ. ಮತ್ತೆ ಹಿರಿಯ ನಿರ್ದೇಶಕರಾದ ವೆಂಕಟಸ್ವಾಮಿ ನಿರ್ಮಾಣ ಮಾಡುತ್ತಿರುವ ” ಬಿರುಮಳೆ” ಚಿತ್ರದಲ್ಲೂ ಸಹ ನಾಯಕನಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಮುಗಿದಿದ್ದು ಬಿಡುಗಡೆಗೆ ಸಿದ್ದವಾಗಿದೆ. ಒಂದು ವರ್ಷದ ನಂತರ ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿರುವ ನಟ ಜೆ.ಡಿ ಆಕಾಶ್ ರ ಈ ಮೂರು ಚಿತ್ರಗಳು ಯಶಸ್ವಿಯಾಗಿ ಮುನ್ನುಗ್ಗಲಿ ಎಂದು ಬಳ್ಳಾರಿ ಜಿಲ್ಲೆಯ ಜನತೆಯ ಆಶಯ.
ನಮ್ಮ ತುಂಗಾವಾಣಿ ಬಳಗದಿಂದ ಆಲ್ ದ ಬೆಸ್ಟ್ ಆಕಾಶ್…