ಕೊಪ್ಪಳ: ಬರ್ಬರವಾಗಿ ವ್ಯಕ್ತಿಯನ್ನು ಕೊಚ್ಚಿ ಕೊಲೆಗೈದ ಹಂತಕರು.!
ತುಂಗಾವಾಣಿ.
ಕೊಪ್ಪಳ: ಎ-3 ಜಿಲ್ಲೆಯ ಕಾರಟಗಿ ಪಟ್ಟಣದ ನವಲಿ ರಸ್ತೆಯ ಬಳಿ ಬರುವ ಹೊಸ ಬಸ್ ನಿಲ್ದಾಣದ ಸಮೀಪದಲ್ಲಿ ವ್ಯಕ್ತಿ ಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಪಟ್ಟಣದ ಅಬ್ದುಲ್ ಕಾಲೋನಿಯ ನಿವಾಸಿ ವಿರೇಶ ಕೊರವರು (ಭಜಂತ್ರಿ) ಎಂದು ಗುರಿತಿಸಲಾಗಿದೆ.
ಯುವಕರ ತಂಡವೊಂದು ನೇರವಾಗಿ ವ್ಯಕ್ತಿಯ ಮೇಲೆ ಸಿಕ್ಕ ಸಿಕ್ಕಲ್ಲಿ ಕೊಚ್ಚಿ ಕೊಂದಿದ್ದು ದೃಶ್ಯ ಭೀಕರವಾಗಿದ್ದು. ಕೊಲೆ ಮಾಡಿದ ತಂಡ ಗಂಗಾವತಿ ಹಾಗು ಹುಲಗಿ ಕಡೆಯಿಂದ ಬಂದವರು ಎನ್ನುವ ಮಾಹಿತಿ ಇದೆ ಎನ್ನಲಾಗುತ್ತಿದೆ. ಯಾವ ಕಾರಣಕ್ಕಾಗಿ ಕೊಲೆ ಮಾಡಲಾಗಿದೆ ಎಂದು ಇನ್ನೂ ಸ್ಪಷ್ಟವಾಗಿಲ್ಲ. ಸ್ಥಳಕ್ಕೆ ಧಾವಿಸಿದ ಕಾರಟಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.