ಜಿಲ್ಲಾ ಪಂಚಾಯತನಲ್ಲಿ ಬಾರಿ ಸರ್ಜರಿ. ಇಓ ಗಳು ಸೇರಿದಂತೆ 80 ಕ್ಕೂ ಹೆಚ್ಚು ಅಧಿಕಾರಿಗಳ ವರ್ಗಾವಣೆ.
ಇಬ್ಬರ ವರ್ಗಾವಣೆಗೆ ಹಿಂದೇಟು.!
ತುಂಗಾವಾಣಿ.
ಕೊಪ್ಪಳ: ಎ-2 ಜಿಲ್ಲೆಯ ಜಿಲ್ಲಾ ಪಂಚಾಯತ ನಲ್ಲಿ ಬಾರಿ ಸರ್ಜರಿ ಮಾಡಲಾಗಿದೆ 79 ಅಧಿಕಾರಿಗಳು ಸೇರಿದಂತೆ ಒಬ್ಬ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಇಬ್ಬರು ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗು ಜಿಲ್ಲೆಯ ಸಹಾಯಕ ಕಾರ್ಯದರ್ಶಿ ವರ್ಗಾವಣೆ ಮಾಡಲಾಗಿದೆ.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನೇಮಕವಾದ ತಾಂತ್ರಿಕ ಸಂಯೋಜಕರು/ ಸಹಾಯಕರು, ತಾಲ್ಲೂಕ ಐಇಸಿ | ಎಂಐಎಸ್ ಸಂಯೋಜಕರ ವಿರುದ್ಧ ಹಲವಾರು ದೂರುಗಳನ್ನು ಆಧರಿಸಿ ಆಡಳಿತಾತ್ಮಕ ಹಿತದೃಷ್ಟಿಯಿಂದ ಸ್ಥಳ ಬದಲಾವಣೆ ಮಾಡಲಾಗಿದೆ.
ಇವರು ಹೊರಗುತ್ತಿಗೆ ಸಂಸ್ಥೆಗಳ ಆಧಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಗಂಗಾವತಿ ಹಾಗು ಕುಷ್ಟಗಿ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿಗಳಾಗಿದ್ದ ಪಶು ಇಲಾಖೆಯ ಡಾಕ್ಟರ್ ಮೋಹನ್ ಮತ್ತು ಕುಷ್ಟಗಿಯ ಜಯರಾಮ್ ಚೌಹಾಣ್ ಇವರನ್ನು ಮೂಲ ಮಾತೃ ಇಲಾಖೆಯಾದ ಪಶುಸಂಗೋಪನಾ ಇಲಾಖೆಗೆ ಸಚಿವ ಪ್ರಭು ಚೌಹಾಣ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು ಅದರಂತೆ ಪಶುವೈದ್ಯರನ್ನು ಮಾತೃ ಇಲಾಖೆಗೆ ವರ್ಗಾಯಿಸಲಾಗಿದೆ.
ಇತ್ತ ಕುಕನೂರು ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ ಇವರನ್ನು ರಾಯಚೂರಿಗೆ ಮತ್ತು ಸಹಾಯಕ ಕಾರ್ಯದರ್ಶಿ ಚಂದ್ರಶೇಖರ ಇವರನ್ನು ಧಾರವಾಡಕ್ಕೆ ಸರ್ಕಾರ ಮಾ-3 ರಂದೆ ವರ್ಗಾವಣೆ ಮಾಡಿದ್ದರೂ ಇಲ್ಲಿನ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಫೌಜಿಯಾ ಮೇಡಂ ರವರು ವರ್ಗಾವಣೆ ಮಾಡಲು ಹಿಂದೇಟು ಹಾಕಿದ್ದು ಯಾಕೆ.? ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಅಷ್ಟಕ್ಕೂ ಜಿಲ್ಲಾ ಪಂಚಾಯತ ಕಾರ್ಯದರ್ಶಿ ಶರಣಬಸವರ ಪಕ್ಕಾ ಶಿಷ್ಯರು ಎನ್ನುವ ಕಾರಣಕ್ಕೆ ಹಿಂದೇಟು ಹಾಕಿದ್ರಾ.?
ಸುಮಾರು 80 ಕ್ಕೂ ಹೆಚ್ಚು ಅಧಿಕಾರಿಗಳನ್ನು ವರ್ಗಾವಣೆ ಮಾಡಿ ನರೇಗಾ ಎನ್ನುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಬಲಾವಣೆ ತರಲು ಪ್ರಯ್ನಿಸುತ್ತಿರುವ CO ಫೌಜಿಯಾ ಮೇಡಂಗೆ. DS ಶರಣಬಸಪ್ಪ ರವರು ದಾರಿ ತಪ್ಪಿಸುವ ಪ್ರಯತ್ನ ನಡೆಸುತ್ತಿದ್ದಾರೆಯೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ? ಸರ್ಕಾರ ಆದೇಶ ಹೊರಡಿಸಿದರು ಸಹ ವರ್ಗಾವಣೆ ಮಾಡದೆ ಸುಮ್ಮನಿರುವುದು ಅನುಮಾನಕ್ಕೆ ಕಾರಣವಾಗಿದೆ. ಇದರಲ್ಲಿ ಯಾರ ಕೈವಾಡ ಇದೆ ಎಂಬುವುದು
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉತ್ತರಿಸ ಬೇಕಿದೆ.!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.