ಹಾಡು ಹಗಲೇ ಸರಗಳ್ಳತನ
ಬೈಕ್ ನಲ್ಲಿ ಬಂದು ಕಳ್ಳತನ.
ಗಂಗಾವತಿ ಜನತೆ ಹುಷಾರ್ ಹುಷಾರ್.!?
ತುಂಗಾವಾಣಿ.
ಗಂಗಾವತಿ: ಎ-12 ನಗರದ HRS ಕಾಲೋನಿ ಬಳಿ ಸಿನಿಮೀಯ ರೀತಿಯಲ್ಲಿ ಸರಗಳ್ಳತನ ನಡೆದ ಘಟನೆ ಇಂದು ಸಂಜೆ ನಡೆದಿದೆ.
ಇತ್ತೀಚಿನ ದಿನಗಳಲ್ಲಿ ಮನೆ ಕಳ್ಳತನ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳು ಹೆಚ್ಚಾಗಿ ವರದಿ ಯಾಗುತ್ತಿದ್ದವು ಈಗ ದೊಡ್ಡ ದೊಡ್ಡ ಸಿಟಿಯಲ್ಲಿನ ಹಾಗೇ ಗಂಗಾವತಿ ನಗರದಲ್ಲೂ ಸರಗಳ್ಳತನ ವಾಗಿದ್ದು ತಿಳಿದು ಬಂದಿದೆ,
ಇಂದು ಜನನಿಬಿಡ ಪ್ರದೇಶವಾದ HRS ಕಾಲೋನಿ ಗುನ್ನಾಳ ಫ್ಯಾಮಿಲಿಯ ಮಹಿಳೆಯ ಮಾಂಗಲ್ಯ ಸರವನ್ನು ಕಳ್ಳರು ಎಗರಿಸಿದ್ದಾರೆ.
ನಂಬರ್ ಪ್ಲೇಟ್ ಇಲ್ಲದ ಬ್ಲಾಕ್ ಪಲ್ಸರ್ ಬೈಕ್‌ನಲ್ಲಿ ಬಂದ ಸರಗಳ್ಳರು ಹೆಲ್ಮೆಟ್ ಧರಿಸಿ ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದರು ಎನ್ನಲಾಗುತ್ತಿದೆ,
ಸಂಜೆ ಹೊತ್ತಿನಲ್ಲಿ ವಾಯುವಿಹಾರಕ್ಕೆ ತಾವು ಸಾಕಿದ ಸ್ವಾನದ ಜೊತೆಗೆ ಹೊರಗಡೆ ಬಂದ ಮಹಿಳೆಯನ್ನು ಗಮನಿಸಿದ ಕಳ್ಳರು ಸುಮಾರು ನಾಲ್ಕು ರೌಂಡ್ ಅತ್ತಿಂದ ಇತ್ತ ಇತ್ತಿಂದತ್ತ ಬೈಕ್‌ನಲ್ಲಿ ತಿರುಗಾಡಿ ನಂತರ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಸುಮಾರು ನಾಲ್ಕು ತೊಲೆ ಬಂಗಾರದ ಮಾಂಗಲ್ಯ ಸರವನ್ನು ಕುತ್ತಿಗೆಯಿಂದ ಎಳೆದುಕೊಂಡು ಓಡಿಹೋಗಿದ್ದಾರೆ. ಮಹಿಳೆ ಕೂಗಿ ಸ್ಥಳಿಯರನ್ನು ಕರೆಯುವಷ್ಟರಲ್ಲೇ ಕಳ್ಳರು ಪರಾರಿಯಾಗಿದ್ದಾರೆ,
ಸಂತ್ರಸ್ತ ಮಹಿಳೆ ನಗರ ಠಾಣೆಗೆ ದೌಡಾಯುಸಿ ಬಂದು ಪೊಲೀಸರಿಗೆ ಸುದ್ದಿ ತಿಳಿಸಿದ್ದಾರೆ,
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.