ಕೊಪ್ಪಳ: ಬರ್ಬರವಾಗಿ ಹತ್ಯೆಗೈದ ನಾಲ್ವರು ಹಂತಕರ ಸೆರೆ
ತುಂಗಾವಾಣಿ.
ಕೊಪ್ಪಳ: ಎ-11 ಜಿಲ್ಲೆಯ ಕಾರಟಗಿ ಪಟ್ಟಣದ ನವಲಿ ರಸ್ತೆಯ ಬಳಿ ಬರುವ ಹೊಸ ಬಸ್ ನಿಲ್ದಾಣದ ಸಮೀಪದಲ್ಲಿ ಎಪ್ರಿಲ್ 3 ರಂದು ಓರ್ವ ವ್ಯಕ್ತಿಯನ್ನು ಬರ್ಬರವಾಗಿ ಕೊಲೆಗೈಯಲಾಗಿತ್ತು,
ಕಾರಟಗಿ ಪಟ್ಟಣದ ಅಬ್ದುಲ್ ನಜೀರಸಾಬ ಕಾಲೋನಿಯ ನಿವಾಸಿ ವಿರೇಶ ಕೊರವರು ಎನ್ನುವವರನ್ನು ಮನ ಬಂದಂತೆ ಮಾರಕಾಸ್ತ್ರಗಳಿಂದ ಐವರ ತಂಡವೊಂದು ಹತ್ಯೆ ಮಾಡಿತ್ತು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕಾರಟಗಿ ಪೊಲೀಸರು ಕೊಲೆಗೈದ ಹಂತಕರ ಜಾಡು ಹಿಡಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಇನ್ನೊಬ್ಬ ಆರೋಪಿ ಸಿಗಬೇಕಿದೆ,
ಬಂಧಿತರು ಗಂಗಾವತಿ ನಗರದ ನಿವಾಸಿ ಫಕೀರಪ್ಪ. ಬಳ್ಳಾರಿ ಜಿಲ್ಲೆಯ ನಾಗಲಿಂಗಪ್ಪ ಮತ್ತು ಹರೀಶ್ ಹಾಗು ಕಾರಟಗಿಯ ಸತ್ಯಪ್ಪ ಎಂದು ತಿಳಿದು ಬಂದಿದೆ.
ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿದೆ ಎನ್ನಲಾಗುತ್ತಿದೆ,
ಬಳ್ಳಾರಿ ಜಿಲ್ಲೆಯ ಕಂಪ್ಲಿ ಬಸ್ ನಿಲ್ದಾಣ ಬಳಿ ಹಂತಕರು ಸಿಕ್ಕಿದ್ದು ವಿಚಾರಣೆ ನಡೆಸಿದ ಪೊಲೀಸರು ನಾಲ್ವರು ಆರೋಪಿತರನ್ನು ಜೈಲಿಗಟ್ಟಿದ್ದಾರೆ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.