ಕರೊನಾ ಗೆದ್ದ ಮಹಿಳೆಯ ಸಂಭ್ರಮಾಚರಣೆ ನೋಡಿದ್ರೆ ಬೆಚ್ಚಿ ಬಿಳ್ತಿರಾ..!
ಇದನ್ನು ನೋಡಿದ್ರೆ ವೈರಸ್ ಹೆದರಿ ಓಡಿ ಹೋಗೋದು ಪಕ್ಕಾ…!
ತುಂಗಾವಾಣಿ.
ವೈರಲ್: ಕೊರೊನಾ ಭಯಕ್ಕಿಂತ ಜನರನ್ನು ಹೆಚ್ಚಾಗಿ ಕಾಡುತ್ತಿರುವ ಭಯ ಅಂದ್ರೆ ಕರೊನಾ ಬಂದ್ರೆ ನಮ್ಮನ್ನು ನಮ್ಮ ಸುತ್ತಮುತ್ತಲಿನ ಜನ ಹೇಗೆ ನೋಡ್ತಾರೆ.? ನಾವು ಮುಖ ತೋರಿಸೋದು ಹೇಗೆ ಅನ್ನೋದುವವರೆ ಹೆಚ್ಚು. ಕೊರೊನಾ ಅನ್ನೋದು ಯಾರಿಗೆ ಬೇಕಾದರೂ ಬರಬಹುದು. ಕೆಲವೊಮ್ಮೆ ನಿರ್ಲಕ್ಷ್ಯದಿಂದ ಬಂದರೆ ಇನ್ನು ಕೆಲವೊಮ್ಮೆ ನಾವು ಮಾಡದ ತಪ್ಪಿಗೆ ಇನ್ಯಾರಿಂದಲೋ ಕರೊನಾ ಬರಬಹುದು. ಆದ್ರೆ ಹೇಗೆ ಬರಲಿ. ಈ ಹೆಮ್ಮಾರಿಯನ್ನು ಎದುರಿಸೋದಕ್ಕೆ ಸದ್ಯಕ್ಕಿರುವ ಔಷಧಿ ಅಂದ್ರೆ ಎಂದರೆ ಅದು ಧೈರ್ಯ.
ಈ ವಿಡಿಯೋ ನೋಡಿದ್ರೆ ಎಂತಹವರಿಗೂ ಕರೊನಾ ವಿರುದ್ಧ ಹೋರಾಡೋದಕ್ಕೆ ಖಂಡಿತವಾಗಿಯೂ ಧೈರ್ಯ ಬರುತ್ತೆ. ಇದು ಎಲ್ಲಿ ನಡೆದ ಘಟನೆ ಎಂಬುವುದರ ಮಾಹಿತಿ ಇಲ್ಲ. ಆದರೆ ಪ್ರತಿಯೊಬ್ಬರು ನೋಡಬೇಕಾದ ವಿಡಿಯೋ ಇದು. ಕೊರೊನಾದಿಂದ ಗುಣಮುಖವಾಗಿ ಬಂದಾಗ ಕೆಲವರು ಅವರನ್ನು ಅಪರಾಧಿಗಳಂತೆ ನೋಡ್ತಾರೆ. ಆದ್ರೆ ಈ ಮಹಿಳೆ ಕರೊನಾ ಗೆದ್ದು ಬಂದಾಗ ಅವರ ಮನೆಯವರ ಸಂಭ್ರಮ ನೋಡಿ..ಆಕೆಗೆ ಅವರು ನೀಡಿದ ಸ್ವಾಗತ ನೋಡಿದ್ರೆ ನಿಜಕ್ಕೂ ಗ್ರೇಟ್ ಅನ್ಸುತ್ತೆ. ಆಕೆಯನ್ನು ಡ್ಯಾನ್ಸ್ ಮಾಡಿ ಸ್ವಾಗತಿಸುತ್ತಾರೆ. ಮನೆಯವರೊಂದಿಗೆ ಆಕೆಯೂ ಎಷ್ಟು ಖುಷಿಯಿಂದ ಹೆಜ್ಜೆ ಹಾಕುತ್ತಾಳೆ. ಸಮಾಜದಲ್ಲಿ ಇಂತಹ ಬದಲಾವಣೆಗಳಾಗಬೇಕು. ಇಂತಹ ಬದಲಾವಣೆಗಳಾದಾಗ ಖಂಡಿತವಾಗಿಯೂ ಕರೊನಾ ಅಲ್ಲಾ ಅದಕ್ಕಿಂತ ದೊಡ್ಡ ವೈರಸ್ ಬಂದರೂ ಎಂತಹವರೂ ಕೂಡ ಎದುರಿಸಬಹುದು. ಹಾಗಾಗಿ ನಾವು ಮೊದಲು ನಮ್ಮಲ್ಲಿರುವ ಕರೊನಾ ಬಗೆಗಿನ ತಪ್ಪು ತಿಳುವಳಿಕೆಗಳನ್ನು ಬದಲಾಯಿಸಿಕೊಳ್ಳಬೇಕು..!
ಏನೇ ಇರಲಿ ಸ್ವಚ್ಛತೆ ಕಾಪಾಡಿಕೊಳ್ಳಿ, ಮಾಸ್ಕ್ ಧರಿಸಿ ಅಂತರ ಕಾಪಾಡಿಕೊಳ್ಳಿ, ಅದಕ್ಕಿಂತ ಹೆಚ್ಚಾಗಿ ಧೈರ್ಯ ತುಂಬಿ. ಧೈರ್ಯದಿಂದಿರಿ..!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.