ACB ರೆಡ್
RI ಅಂದರ್
ಸಾಕ್ಷಿಯಾಯ್ತು KGF.!
ತುಂಗಾವಾಣಿ.
ಗಂಗಾವತಿ: ಎ-13 ನಗರದ ಜುಲೈ ನಗರದ ಬಳಿ ಕಂದಾಯ ನಿರೀಕ್ಷಕನ ಮೇಲೆ ACB ದಾಳಿ ಮಾಡಲಾಗಿದೆ.
ಕನಕಗಿರಿ ತಾಲ್ಲೂಕಿನ ನವಲಿ ಹೋಬಳಿಯ ಕಂದಾಯ ನಿರೀಕ್ಷಕ ಬಸವರಾಜ ಅಂಗಡಿ ಎಂಬುವವರು ಈ ಹಿಂದೆ ವೆಂಕಟಗೀರಿ ಹೋಬಳಿಯ ಕಂದಾಯ ನಿರೀಕ್ಷಕರಾಗಿದ್ದರು. ಬಸವರಾಜ ಅಂಗಡಿ ನವಲಿ ಹೋಬಳಿಗೆ ವರ್ಗಾವಣೆ ಯಾದರೂ ಕೂಡ ವೆಂಕಟಗಿರಿ ಸಂಪರ್ಕ ಕಡಿತಗೊಂಡಿರಲಿಲ್ಲ ಯಾಕೆಂದರೆ ಅದು ಅಂಗಡಿಗೆ ತವರಮನೆ ಎಂತಾಗಿತ್ತು. ನೀವೆನಾದರೂ ಬಸವರಾಜ ಅಂಗಡಿನ ನೋಡಿದರೆ ಎಷ್ಟು ಅಮಾಯಕ ಎನ್ನುವ ರೀತಿಯಲ್ಲಿ ವರ್ತಿಸುವ ಈತ ಅದೆಷ್ಟು ಜನರ ಜೀವ ಹಿಂಡಿದ್ದಾನೆ ಎಂಬುವುದಕ್ಕೆ ಇದೆ ಸಾಕ್ಷಿ.
ಹಂಪಸದುರ್ಗದ ವಿಧವೆ ರೇಣುಕಮ್ಮನ ವಿಧವಾವೇತನ ಮತ್ತು ವಂಶವೃಕ್ಷ ನೀಡಲು 5ಸಾವಿರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಸುಮಾರು ಏಳೆಂಟು ತಿಂಗಳಾದರೂ ಕೆಲಸ ಮಾಡಿದಿಲ್ಲ ಇದರಿಂದ ಮನನೊಂದ ದಿಟ್ಟ ಮಹಿಳೆ ಗ್ರಾಮದ ಯುವಕರ ಸಹಾಯ ಕೇಳಿ ನೇರವಾಗಿ ACB ಕೊಪ್ಪಳ ಇವರಿಗೆ ಸಂಪರ್ಕಿಸಿದ್ದಾರೆ. ಫೀಲ್ಡ್‌ಗಿಳಿದ ACB ಅಧಿಕಾರಿಗಳು ಬಳ್ಳಾರಿ ವಲಯ ACB SP ಹಾಗು ಕೊಪ್ಪಳದ DSP ಯವರ ನೇತೃತ್ವದಲ್ಲಿ ಕಾರ್ಯಚರಣೆ ಕೈಗೊಂಡು ಲಂಚದ ಹೆಂಜಲು ತಿನ್ನುತ್ತಿದ್ದ ಕಂದಾಯ ನಿರೀಕ್ಷಕ ಬಸವರಾಜ ಅಂಗಡಿ ಹೆಡೆಮುರಿ ಕಟ್ಟಿ ಜೈಲಿಗಟ್ಟುವ ಎಲ್ಲಾ ಕಾರ್ಯಗಳು ನಡೆದಿವೆ.
KGF ಸಾಕ್ಷಿ.!
ಐದು ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ RI ಮುಂಗಡವಾಗಿ ₹8ನೂರು ರೂಪಾಯಿ ಪಡೆದು ಕೊಂಡಿದ್ದ ಇನ್ನೂ ಉಳಿದ ಹಣಕ್ಕೆ ಪೀಡಿಸುತ್ತಿದ್ದ. ಅದರಂತೆ ಇಂದು ಹಣ ನೀಡುವುದಾಗಿ ರೇಣುಕಮ್ಮ ಹೇಳಿದ್ದರು. ನಗರದ KGF ಆಟೋ ವರ್ಕ್ಸ್ ದ್ವಿಚಕ್ರ ವಾಹನ ಗ್ಯಾರೇಜ್ ಬಳಿ ಹಣ ತರಲು ಹೇಳಿದ್ದ ಅದರಂತೆ ಕಂದಾಯ ನಿರೀಕ್ಷಕ ಬಸವರಾಜ ಅಂಗಡಿ ಹೇಳಿದ ಸ್ಥಳಕ್ಕೆ ಹೋಗಿ ಉಳಿದ ₹4800 ರೂಪಾಯಿ ಕೊಡಲು ಹೋದಾಗ ಯಾವುದೇ ಅಳಕಿಲ್ಲದೆ ತಗೆದು ಕೊಂಡು ACB ಬಲೆಗೆ ಸಿಕ್ಕಿ ಬಿದ್ದ.!
ಈ ಕಾರ್ಯಾಚರಣೆಯಲ್ಲಿ ಎಸಿಬಿ ಇನ್ಸ್ ಪೆಕ್ಟರ್ ಗಳಾದ ಶಿವರಾಜ್ ಇಂಗಳೆ, ಆಂಜನೇಯ ಡಿಎಸ್. ಸಿಬ್ಬಂದಿಗಳಾದ ರಂಗನಾಥ, ಸಿದ್ದಯ್ಯ, ಜಗದೀಶ್, ಗಣೇಶ್, ಉಮೇಶ್, ಸವಿತಾ, ಆನಂದ್, ಹಾಗು ಬಸಪ್ಪ ಇತರರು ಇದ್ದರು.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.