ಗಂಗಾವತಿ: ಅನ್ಸಾರಿಗೆ ಕೈ ಟಿಕೆಟ್ ಬೇಡ ಎಂದವರಿಗೆ.
ಕೀಳು ಮಟ್ಟದ ರಾಜಕಾರಣ ಬಿಡಿ ಎಂದವರು ಯಾರು.!?
ತುಂಗಾವಾಣಿ.
ಗಂಗಾವತಿ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗಂಗಾವತಿಯಲ್ಲಿ ಕಾಂಗ್ರೇಸ್ ಪಕ್ಷದಿಂದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಸ್ಪರ್ಧಿಸುವುದು ಮತ್ತು ಗೆಲ್ಲುವುದು ಖಚಿತ, ಕೆಲವರು ಬಿಜೆಪಿಯಿಂದ ನಿನ್ನೆ ಮೊನ್ನೆ ಕಾಂಗ್ರೆಸ್ ಪಕ್ಷಕ್ಕೆ ಬಂದವರು ಕೀಳುಮಟ್ಟದ ರಾಜಕಾರಣ ಬಿಡಿ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಾಮಿದ್ ಮನಿಯಾರ್ ತರಾಟೆಗೆ ತೆಗೆದುಕೊಂಡರು
ವಿಧಾನ ಪರೀಷತ್ ವಿರೋಧ ಪಕ್ಷದ ನಾಯಕ ಬಿಕೆ ಹರಿಪ್ರಸಾದ್ ಅವರು ಗಂಗಾವತಿ ನಗರಕ್ಕೆ ಆಗಮಿಸಿದ್ದ ವೇಳೆ ಕೆಲ ಸ್ಥಳೀಯ ಮುಖಂಡರು ಇಕ್ಬಾಲ್ ಅನ್ಸಾರಿಗೆ ಟಿಕೆಟ್ ಕೊಡಬೇಡಿ ಹೆಚ್ ಆರ್ ಶ್ರೀನಾಥಗೆ ಟಿಕೆಟ್ ನೀಡಿ ಎಂದು ಒತ್ತಾಯಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು ಈ ಬಗ್ಗೆ ಪ್ರತಿಕ್ರಿಯಿಸಿ ಪತ್ರಿಕಾ ಗೊಷ್ಟಿ ನಡೆಸಿ ಮಾತನಾಡಿದ ಮನಿಯಾರ್
ಗಂಗಾವತಿ ಕ್ಷೇತ್ರದಲ್ಲಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ವರ್ಚಸ್ಸು ಕಳೆದೆರಡು ವರ್ಷಗಳಲ್ಲಿ ದ್ವಿಗುಣಗೊಂಡಿದ್ದು ಕೆಲ ತಿಂಗಳ ಹಿಂದೆ ಅನ್ಸಾರಿ ಕೈಗೊಂಡ ಕಾಂಗ್ರೆಸ್ ನಡೆಗೆ ಜನರ ಕಡೆಗೆ ಎಂಬ ಕಾರ್ಯಕ್ರಮದಲ್ಲಿ ಸೇರುತ್ತಿದ್ದ ಜನಸ್ಥೋಮವು ವಿರೋಧಿಗಳಿಗೆ ನಡುಕ ಹುಟ್ಟಿಸಿದೆ ಮತ್ತು ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವ ಅಭಿಯಾನದಲ್ಲಿಯೂ ಕೂಡ ಗಂಗಾವತಿಯೂ ರಾಜ್ಯದಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದು ಹಿಂದೂ ಮುಸ್ಲಿಮ್ ದಲಿತರು ಕ್ರಿಶ್ಚಿಯನ್ ಸೇರಿ 90 ಸಾವಿರಕ್ಕೂ ಹೆಚ್ಚು ಸದಸ್ಯರು ಇಕ್ಬಾಲ್ ಅನ್ಸಾರಿ ಯವರ ಜನಪರ ಕಾರ್ಯ ಮೆಚ್ಚಿ ಪಕ್ಷದ ಸದಸ್ಯತ್ವ ಪಡೆದಿದ್ದಾರೆ ಎಂದರು,
ಕಳೆದ ವಾರ ವಿಧಾನ ಪರೀಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಗಂಗಾವತಿ ನಗರಕ್ಕೆ ಆಗಮಿಸಿ ಮಾಜಿ ಸಂಸದ ಹೆಚ್ ಜಿ ರಾಮುಲು ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು,
ಆ ಚರ್ಚೆಯಲ್ಲಿ ಭಾಗವಹಿಸಿದ್ದ ನಗರದ ಕಾಂಗ್ರೆಸ್ ಹಾಗು ಜೆಡಿಎಸ್ ಪಕ್ಷದ ಕೆಲ ಮುಖಂಡರು ಹರಿ ಪ್ರಸಾದರನ್ನು ಸುತ್ತುವರೆದು ಗಂಗಾವತಿ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಪಕ್ಷದ ಟಿಕೆಟ್ ನೀಡಿದರೆ ಗೆಲ್ಲುವುದು ಸಾಧ್ಯವಿಲ್ಲ ಅದಕ್ಕೆ ಹೆಚ್ ಆರ್ ಶ್ರೀನಾಥರನ್ನು ಕಾಂಗ್ರೆಸ್ ಪಕ್ಷದ ಟಿಕೇಟ್ ನೀಡಿದರೆ ಗಂಗಾವತಿ ಅಲ್ಲದೇ ಜಿಲ್ಲೆಯ ನಾಲ್ಕು ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಲಿವೆ ಎಂದು ಒತ್ತಾಯಿದರು, ಈ ನಡುವೆ ಹರಿ ಪ್ರಸಾದ್ ಅವರು ಮಾತನಾಡಿ ಕಾಂಗ್ರೆಸ್ ಪಕ್ಷ ಹಿಂದೂ ಮುಸ್ಲಿಂ ಅಂತ ಬೇದಭಾವ ಮಾಡುವುದಿಲ್ಲ ಆ ಮಾತು ಬಿಟ್ಟು ಮಾತನಾಡಿ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು.!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.