ಚಾಲಾಕಿ ಬೈಕ್ ಕಳ್ಳನ ಬಂಧನ.
ತುಂಗಾವಾಣಿ
ಗಂಗಾವತಿ ಎ 04 ಗಂಗಾವತಿ ನಗರ ಠಾಣೆ ಪೋಲಿಸರು ಕಾರ್ಯಾಚರಣೆ ನಡೆಸಿ ಮಾರ್ಚ್ 31 ರಂದು ಬೈಕ್ ಕಳ್ಳನನ್ನು ಬಂಧಿಸಿದ್ದಾರೆ,
ಚಾಲಾಕಿ ಕಳ್ಳನನ್ನು ಗಂಗಾವತಿ ತಾಲೂಕಿನ ಹಣವಾಳ ಗ್ರಾಮದ ಶರಣಪ್ಪ (24) ತಂದೆ ಚಂದ್ರಶೇಖರ ಮಾಲಿಪಾಟೀಲ್ ಎಂದು ಗುರುತಿಸಲಾಗಿದೆ.
ನಗರ ಹಾಗು ಗ್ರಾಮೀಣ ಭಾಗದಲ್ಲಿ ಸುಮಾರು 33 ಬೈಕ್ ಗಳನ್ನು ಕಳ್ಳತನ ಮಾಡಿ ಬೇರೆ ಬೇರೆ ಊರುಗಳಲ್ಲಿ ಮಾರಾಟ ಮಾಡಿದ್ದನೆನ್ನಲಾಗಿದೆ.
ಡಿವೈಎಸ್‌ಪಿ ಎಸ್ ಆರ್ ಉಜ್ಜಿನಕೊಪ್ಪ ಅವರ ಮಾರ್ಗದರ್ಶನದಲ್ಲಿ ಪಿಐ ವೆಂಕಟಸ್ವಾಮಿ ನೇತೃತ್ವದಲ್ಲಿ ತಂಡ ರಚಿಸಿ ಕಾರ್ಯಚರಣೆ ನಡೆಸಿದ್ದು ಕಳ್ಳನನ್ನು ಸೆದೆಬಡೆದು ಅಂದಾಜು 10.20 ಲಕ್ಷ ರೂಗಳು ಬೆಲೆ ಬಾಳುವ 33 ಬೈಕ್‌ಗಳನ್ನು ವಶಪಡಿಸಿಕೊಂಡು ಕಳ್ಳನನ್ನು ಜೈಲಿಗಟ್ಟಿದ್ದಾರೆ,
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.