ಚಾಣಾಕ್ಷತೆ ಮೆರೆದ ನಗರಸಭೆ ಪೌರಾಯುಕ್ತ.!
ನಾಮಫಲಕ ವಿವಾದ ಸುಖಾಂತ್ಯ.!?
ತುಂಗಾವಾಣಿ
ಗಂಗಾವತಿ ಡಿ-17 ಹಿಂದೂಪರ ಸಂಘಟನೆಯ ಮುಖಂಡರು ಶಾಸಕ ಪರಣ್ಣ ಮುನವಳ್ಳಿಯವರ ಸಮ್ಮುಖದಲ್ಲಿ ತರಾತುರಿಯಲ್ಲಿ ಅಳವಡಿಸಿದ್ದ ನಾಮಫಲಕದಲ್ಲಿ ನಗರಸಭೆ ಪೌರಾಯುಕ್ತ ಸಣ್ಣ ಬದಲಾವಣೆ ಮಾಡಿ ವಿವಾದಕ್ಕೆ ಅಂತ್ಯ ಹಾಡಿ ಚಾಣಾಕ್ಷತನ ಮೆರೆದಿದ್ದಾರೆ.
ನಗರದ ಇಸ್ಲಾಂಪುರ ವೃತ್ತಕ್ಕೆ ಹಿಂದೂಪರ ಸಂಘಟನೆಯ ಮುಖಂಡರುಗಳು ಒಂದು ನಾಮಫಲಕ ನಿರ್ಮಿಸಿಕೊಂಡು ಅದರಲ್ಲಿ ಜನರಲ್ ಬಿಪಿನ್ ರಾವತ್ ವೃತ್ತ ವೆಂದು ಮುದ್ರಿಸಿಕೊಂಡು ಬಂದು ಡಿ 16 ಸಂಜೆ 6 ಗಂಟೆಯ ಸುಮಾರಿಗೆ ತರಾತುರಿಯಲ್ಲಿ ಅಳವಡಿಸಿ ಪೂಜೆಗೈದು ಸ್ಥಳದಿಂದ ತೆರಳಿದ್ದರು,
ಅದೇ ವೇಳೆ ಆ ವೃತ್ತಕ್ಕೆ ಐದಾರು ವರ್ಷದ ಕೆಳಗೆ ನಗರಸಭೆಯಿಂದ ಪುರಸಭೆ ಕಾಯ್ದೆಯ ಪ್ರಕಾರ “ಇಸ್ಲಾಂಪುರ ವೃತ್ತ” ವೆಂದು ಅನುಮೋದನೆ ಪಡೆದುಕೊಂಡ ಮುಸ್ಲಿಂ ಪಂಚ್ ಕಮೀಟಿ ಮುಖಂಡರು ವಿರೋಧ ವ್ಯಕ್ತ ಪಡಿಸಿ ಮೂರು ಸೇನೆಗಳ ಮುಖಂಡರಾಗಿದ್ದ ಜನರಲ್ ಬಿಪಿನ್ ರಾವತ್ ಅವರ ಹೆಸರಿನಲ್ಲಿ ಇನ್ನೊಂದು ಕಡೆ ವೃತ್ತ ಅಥವಾ ಮುಖ್ಯರಸ್ತೆಗೆ ನಗರಸಭೆಯಲ್ಲಿ ಅನುಮತಿ ಪಡೆದು ನಾಮಕರಣ ಮಾಡಲಿ ಆದರೆ ಈಗಾಗಲೆ ಇಸ್ಲಾಂಪುರ ವೃತ್ತವೆಂದು ಹೆಸರಿಟ್ಟಿರುವಲ್ಲಿ ಬೇಡವೆಂದು ಪಟ್ಟು ಹಿಡಿದಿದ್ದರು ಈ ವೇಳೆ ಬಿಗುವಿನ ವಾತಾವರಣ ನಿರ್ಮಾಣವಾಗಿ ಪೋಲಿಸ್ ಬಂದೋಬಸ್ತ್ ನೀಡಿ ಮುಂಜಾಗೃತ ಕ್ರಮವಾಗಿ ಮೂರು ದಿನಗಳ ಕಾಲ ನಿಷೇದಾಜ್ಞೆ ಜಾರಿಗೊಳಿಸಲಾಗಿತ್ತು,
ಸರಕಾರಿ ಕೆಲಸದ ಮೇಲೆ ಧಾರವಾಡಕ್ಕೆ ಹೋಗಿದ್ದ ನಗರಸಭೆ ಪೌರಾಯುಕ್ತ ಅರವಿಂದ ಜಮಖಂಡಿ ತಡರಾತ್ರಿ ಬಂದು ಪರಿಶೀಲಿಸಿ ತರಾತುರಿಯಲ್ಲಿ ಅಳವಡಿಸಿದ್ದ ನಾಮಫಲಕದಲ್ಲಿ ಸಣ್ಣ ಬದಲಾವಣೆ ಮಾಡಿ ವೃತ್ತ ಎಂದು ಬರೆದಿದ್ದ ಪದವನ್ನು ಪ್ಲಾಸ್ಟರ್ ನಿಂದ ಮುಚ್ಚಿ ಚಾಣಾಕ್ಷತೆ ಮೆರೆದು ವಿವಾದಕ್ಕೆ ಸುಖಾಂತ್ಯ ? ಹಾಡಿದ್ದಾರೆ.
ಯಾವುದೇ ವೃತ್ತಗಳು ಅಥವಾ ರಸ್ತೆಗಳಿಗೆ ಹೆಸರಿಡುವ ಮುಂಚೆ ಸಕ್ಷಮ ಪ್ರಾದಿಕಾರದಿಂದ ಅನುಮತಿ ಪಡೆಯಬೇಕಾಗಿದ್ದು ಈಗಾಗಲೆ ಒಂದು ವೃತ್ತಕ್ಕೆ ಕಾನೂನು ಪ್ರಕಾರ ಅನುಮೋದನೆ ಪಡೆದು ನಾಮಫಲಕ ಅಳವಡಿಸಿದ್ದಲ್ಲಿ ಬೇರೆ ಹೆಸರಿನಲ್ಲಿ ತರಾತುರಿಯಲ್ಲಿ ನಾಮಫಲಕ ಉದ್ಘಾಟಿಸಿದ ಶಾಸಕರಿಗೆ ಸಾಮಾನ್ಯ ಜ್ಞಾನ ಇಲ್ವಾ ? ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ.
ನಾಮಫಲಕದಲ್ಲಿ ಹಲವು ಕನ್ನಡ ಪದಗಳು ತಪ್ಪಾಗಿ ಮುದ್ರಣಗೊಂಡಿದ್ದು ಕಂಡು ಬಂದಿವೆ, ಭಾರತ ಮಾತ (ಮಾತಾ) ಕೀ ಜೈ,
ಭಾರತೀ ( ಭಾರತೀಯ) ಸೇನಾ ಪಡೆಗಳ ಮುಖ್ಯಸ್ಥ ವೆಂದು ತಪ್ಪುತಪ್ಪಾಗಿ ಮುದ್ರಿಸಿ ಹುತಾತ್ಮ ಯೋಧ ಜನರಲ್ ಬಿಪಿನ್ ರಾವತ್ ಅವರಿಗೆ ಅಗೌರವ ತೋರಿದಂತೆ ಮೇಲ್ನೋಟಕ್ಕೆ ಕಾಣುತ್ತಿದೆ.
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.