ವೃತ್ತದ ನಾಮಫಲಕ ವಿವಾದ.
ನಗರದಲ್ಲಿ ಮೂರುದಿನ ನಿಷೇದಾಜ್ಞೆ ಜಾರಿ.
ತುಂಗಾವಾಣಿ
ಗಂಗಾವತಿ ಡಿ 16 ನಗರದ ವೃತ್ತವೊಂದರ ನಾಮಫಲಕ ಅಳವಡಿಕೆ ವಿಚಾರವಾಗಿ ವಾಗ್ವಾದ ವಾಗಿ ಸ್ಥಳದಲ್ಲಿ ಅಶಾಂತಿ ವಾತಾವರಣ ಸೃಷ್ಟಿಯಾಗಿರುವುದರಿಂದ ಮುಂಜಾಗೃತ ಕ್ರಮವಾಗಿ ಮೂರು ದಿನಗಳ ಕಾಲ ಕಲಂ 144 ಅನ್ವಯ ನಿಷೇದಾಜ್ಞೆಯನ್ನು ತಹಶಿಲ್ದಾರ ಯು. ನಾಗರಾಜ ಆದೇಶಿಸಿದ್ದಾರೆ.
ಹಿಂದೂ ಪರ ಸಂಘಟನೆಯ ಮುಖಂಡರು ಸಿಬಿಎಸ್ ವೃತ್ತದ ಹತ್ತಿರ ವಿರುವ ಇಸ್ಲಾಂಪುರ ವೃತ್ತದಲ್ಲಿ ಕೆಲದಿನಗಳ ಹಿಂದೆ ಹೆಲಿಕಾಪ್ಟರ್ ಅವಘಡದಲ್ಲಿ ಹುತಾತ್ಮರಾದ ಜನರಲ್ ಬಿಪಿನ್ ರಾವತ್ ವೃತ್ತವೆಂದು ಮರು ನಾಮಕರಣ ಮಾಡಿ ನಾಮಪಲಕ ಅಳವಡಿಸಿದ್ದರು ಈ ಬಗ್ಗೆ ನಗರಸಭೆ ಸದಸ್ಯರು ಹಾಗು ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಜನರಲ್ ಬಿಪಿನ್ ರಾವತ್ ಅವರ ಹೆಸರನಲ್ಲಿ ಬೇರೊಂದು ಕಡೆ ವೃತ್ತ ನಿರ್ಮಿಸಲಿ ಅದಕ್ಕೆ ನಾವೆಲ್ಲ ಗೌರವಯುತವಾಗಿ ಸಹಕರಿಸುತ್ತೇವೆ ಎಂದು ಒತ್ತಾಯಿಸಿದ್ದರು.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.