ತುಂಗಾವಾಣಿ ಬಿಗ್ ಇಂಪ್ಯಾಕ್ಟ್.
ಗಂಗಾವತಿ ತಹಶಿಲ್ದಾರ್ ಅಮಾನತ್ತು.!
ತುಂಗಾವಾಣಿ.
ಕೊಪ್ಪಳ: ಮಾ-23 ಕರ್ತವ್ಯಲೋಪ ಹಾಗು ದುರ್ನಡತೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಗಂಗಾವತಿ ತಹಶಿಲ್ದಾರರ ರಾಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀಮತಿ ಎಮ್ ರೇಣುಕಾರನ್ನು ಅಮಾನತ್ತು ಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಡಿಸೆಂಬರ್ 18 ರಂದು ತುಂಗಾವಾಣಿ ಚುಟುಕು ಕಾರ್ಯಾಚರಣೆ ನಡೆಸಿ ತಹಶಿಲ್ದಾರ ಎಂ ರೇಣುಕಾ ಲಂಚ ಪಡೆಯುತ್ತಿರುವ ದೃಶ್ಯಾವಳಿಗಳನ್ನು ಕ್ಯಾಮರಾ ದಲ್ಲೆ ಸೆರೆ ಹಿಡಿದು ತುಂಗಾವಾಣಿಯಲ್ಲಿ ಸಚಿತ್ರ ವರದಿ ಪ್ರಕಟಿಸಿತ್ತು.
ತುಂಗಾವಾಣಿ ಡಿಸೆಂಬರ್ 18 ರಂದು ವಿಸ್ತೃತ ವರದಿ ಬಿತ್ತರಿಸಿತ್ತು.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗುಂದಿ , ಮಲ್ಲಾಪುರ , ಸಂಗಪುರ ಮತ್ತು ಸಾಣಾಪುರ ಗ್ರಾಮಪಂಚಾಯಿತಿ ವ್ಯಾಪ್ತಿಗಳಲ್ಲಿ ವನ್ಯ ಜೀವಿಗಳಿದ್ದು , ಈ ಪ್ರದೇಶದಲ್ಲಿ ಗಣಿಗಾರಿಕೆ ನಿಷೇದವಿದ್ದರೂ ಸಹ ಆ ಭಾಗದಲ್ಲಿನ ಅನಧಿಕೃತ ಗಣಿಗಾರಿಕೆ ಮತ್ತು ಸಾಗಣಿಕೆಯನ್ನು ತಡೆಗಟ್ಟುವಲ್ಲಿ ಗಂಗಾವತಿ ತಹಶೀಲ್ದಾರರಾದ ಶ್ರೀಮತಿ ಎಂ . ರೇಣುಕಾ ರವರು ವಿಫಲರಾಗಿರುವುದಲ್ಲದೇ ಅನಧಿಕೃತ ಗಣಿಗಾರಿಕೆಯ ಮರಳು ಸಾಗಣಿಕೆ ಮಾಡುವ ಟ್ರಾಕ್ಟರ್ ಮಾಲೀಕರಿಂದ ಪ್ರತಿ ತಿಂಗಳು ರೂ .20,000 / ಗಳನ್ನು ಕೊಡಬೇಕು ಇಲ್ಲದಿದ್ದರೆ ಎಫ್.ಐ.ಆರ್ ದಾಖಲಿಸುದಾಗಿ ತಿಳಿಸಿ , ಪ್ರಸ್ತುತ ರೂ .5,000 / ಮುಂಗಡ ಹಣ ಪಡೆದು ಇನ್ನುಳಿದ ರೂ .10,000 / -ಗಳನ್ನು ಕೊಡಬೇಕೆಂದು ಕೇಳುವುದು ತುಂಗಾವಾಣಿ ಚುಟುಕು ಕಾರ್ಯಚರಣೆಯಲ್ಲಿ ಸೆರೆಹಿಡಿಯಲಾದ ವಿಡಿಯೋ ದೃಶ್ಯಗಳಲ್ಲಿ ಕಂಡುಬಂದಿದೆ. ಎಂದು ಅಮಾನತ್ತು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಈ ಪ್ರಕರಣದಲ್ಲಿ ಶ್ರೀಮತಿ ರೇಣುಕಾ ಎಂ . , ತಹಶೀಲ್ದಾರ್ , ಗಂಗಾವತಿ ತಾಲ್ಲೂಕು ಇವರು ಸರ್ಕಾರದ ನಿಯಮಾವಳಗಳಂತೆ ಕಾರ್ಯನಿರ್ವಹಿಸದೇ ಅಕ್ರಮ ಮರಳು ಸಾಗಣಿಕೆ ಮಾಡುತ್ತಿರುವ ಟ್ರಾಕ್ಟರ್ ಮಾಲೀಕರೊಂದಿಗೆ ಕೈ ಜೋಡಿಸಿ ಅವರಿಂದ ಲಂಚ ಪಡೆದು , ಮರಳು ಸಾಗಣಿಕೆ ಮಾಡಲು ಸಹಕಾರ ನೀಡಿರುತ್ತಾರೆ . ಅಲ್ಲದೇ ಗಣಿಗಾರಿಕೆಯಿಂದ ಸರ್ಕಾರಕ್ಕೆ ಬರಬೇಕಾದ ಆದಾಯವನ್ನು ಕೈ ತಪ್ಪುವಂತೆ ಮಾಡಿ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿರುತ್ತಾರೆ . ಹಿನ್ನೆಲೆಯಲ್ಲಿ , ಸದರಿ ಅಧಿಕಾರಿಯು ಒಬ್ಬ ಸರ್ಕಾರಿ ನೌಕರನಿಗೆ ತರವಲ್ಲದ ರೀತಿಯಲ್ಲಿ ವರ್ತಿಸಿ ಬೇಜವಾಬ್ದಾರಿತನದಿಂದ ದುರ್ನಡತೆ / ಕರ್ತವ್ಯಲೋಪವೆಸಗಿದ್ದು , ಕರ್ನಾಟಕ ನಾಗರೀಕ ಸೇವಾ ( ನಡತೆ ) ನಿಯಮಗಳು 1966 ರ ನಿಯಮ 3 ( iii ) ಉಲ್ಲಂಘಿಸಿರುತ್ತಾರೆ . ಆದಕಾರಣ , ಸದರಿಯವರ ವಿರುದ್ಧ ಕರ್ನಾಟಕ ನಾಗರೀಕ ಸೇವೆ ( ವರ್ಗೀಕರಣ , ನಿಯಂತ್ರಣ ಮತ್ತು ಮೇಲ್ಮನವಿ ) ನಿಯಮಗಳು 1987 ರ ನಿಯಮ 10 ( 1 ) ( ಡಿ ) ರಡಿಯಲ್ಲಿ ಇಲಾಖಾ ವಿಚಾರಣೆ ಕಾಯ್ದಿರಿಸಿ ಕೂಡಲೇ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ . ಸರ್ಕಾರವು ಪ್ರಸ್ತಾವನೆಯನ್ನು ಪರಿಶೀಲಿಸಿ , ಈ ಪ್ರಕರಣದಲ್ಲಿ ಉಲ್ಲೇಖಿಸಿರುವ ಶ್ರೀಮತಿ ಎಂ , ರೇಣುಕಾ , ತಹಶೀಲ್ದಾರ್ , ಗಂಗಾವತಿ ಇವರು ಒಬ್ಬ ಜವಾಬ್ದಾರಿಯುತ ಅಧಿಕಾರಿಯಾಗಿ ಸರ್ಕಾರಿ ನೌಕರನಿಗೆ ತರವಲ್ಲದ ರೀತಿಯಲ್ಲಿ ವರ್ತಿಸಿ ಕರ್ತವ್ಯ ಲೋಪವೆಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಎಂದೂ ಕೂಡ ಉಲ್ಲೇಖಿತವಾಗಿದೆ.
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.