ಕಾರಟಗಿ PSI ಸಸ್ಪೆಂಡ್.!!
ಅವರ ಮೇಲಿನ ಆರೋಪಗಳು ಏನು.!?
ತುಂಗಾವಾಣಿ.
ಕೊಪ್ಪಳ: ಜಿಲ್ಲೆಯ ಕಾರಟಗಿ ಪೊಲೀಸ್ ಠಾಣೆಯ ಪಿಎಸ್‌ಐ ಅವಿನಾಶ್ ಕಾಂಬ್ಳೆ ಅವರನ್ನು ಕರ್ತವ್ಯ ಲೋಪದ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ,ಶ್ರೀಧರ್ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಇವರ ಮೇಲೆ ಯಾವ ಆರೋಪಗಳು ಇದ್ದವು..!?
ಕೆಲ ದಿನಗಳ ಹಿಂದೆ ಪೋಲಿಸ್ ಕಾನ್ಸ್‌ಟೇಬಲ್ ಪರೀಕ್ಷೆ ನಡೆದವು, ಅಲ್ಲಿ ಇವರನ್ನು ಬಂದೊಬಸ್ತ್ ಗೆ ನಿಯೋಜನೆ ಮಾಡಲಾಗಿತ್ತು, ಆಗ PSI ಅವಿನಾಶ್ ಕಾಂಬ್ಳೆ ಎರಡು ಘಂಟೆ ತಡವಾಗಿ ಹಾಜರಾಗಿದ್ದರು ಎಂದು ಅಮಾನತ್ತು ಮಾಡಲಾಗಿದೆ ಎನ್ನಲಾಗುತ್ತಿದೆ,
ಈ ಹಿಂದೆ ಕಾರಟಗಿ ಪಟ್ಟಣದಲ್ಲಿ ಜೋಡಿ ಕೊಲೆ ಮರ್ಯಾದೆ ಹತ್ಯೆ ನಡೆದಿದ್ದವು ಆ ಸಮಯದಲ್ಲಿ ಪ್ರಕರಣಕ್ಕೆ ಸಂಬಂಧ ವಿಲ್ಲದವರನ್ನು ಕರೆದುಕೊಂಡು ಬಂದು ಥಳಿಸಿ ಟಾರ್ಚರ್ ಕೊಟ್ಟಿದ್ದರು ಎನ್ನುವ ಗಂಭೀರ ಆರೋಪವೂ ಕೇಳಿ ಬಂದಿದ್ದವು, ಅಕ್ರಮ ಮರಳು ದಂಧೆಗೆ ಪರೋಕ್ಷವಾಗಿ ಬೆಂಬಲ ಕೊಡುತ್ತಿದ್ದಾರೆ ಎನ್ನುವ ಬಲವಾದ ಆರೋಪವೂ ಇವರ ಮೇಲಿತ್ತು ಎನ್ನಲಾಗುತ್ತಿದೆ..!?
ಹೀಗಾಗಿ ಎಲ್ಲ ಆರೋಪಗಳನ್ನು ಗಣನೆಗೆ ತೆಗೆದುಕೊಂಡು ಜಿಲ್ಲಾ ವರಿಷ್ಠಾಧಿಕಾರಿ ಟಿ, ಶ್ರೀಧರ್ ರವರು ಅಮಾನತ್ತು ಮಾಡಿದ್ದಾರೆ ಎನ್ನಲಾಗುತ್ತಿದೆ.!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.