Breaking News

ಗಂಗಾವತಿ: ಭೀಕರ ರಸ್ತೆ ಅಪಘಾತ. ಬೈಕ ಸವಾರರ ಸ್ಥಿತಿ ಚಿಂತಾಜನಕ.!

ಗಂಗಾವತಿ: ಭೀಕರ ರಸ್ತೆ ಅಪಘಾತ.
ಬೈಕ ಸವಾರರ ಸ್ಥಿತಿ ಚಿಂತಾಜನಕ.!

ತುಂಗಾವಾಣಿ
ಗಂಗಾವತಿ: ನ-27 ಗಂಗಾವತಿಯ ಕನಕಗಿರಿ ರಸ್ತೆಯ ಕೃಷಿ ಇಲಾಖೆಯ ಬಳಿ ಸ್ವಿಫ್ಟ್ ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರರು ಗಂಭೀರ ಗಾಯಗೊಂಡ ಘಟನೆ ಜರುಗಿದೆ.

ಕಾರಟಗಿ ತಾಲೂಕಿನ ಹಗೇದಾಳ ಗ್ರಾಮದವರಾದ ಮೌಲಾಸಾಬ, ಲಿಂಗಪ್ಪ ಹಾಗು ಅರವಿಂದ್ ಎಂಬ ಯುವಕರು ತಮ್ಮ ಬೈಕ್ ನಲ್ಲಿ ತೆರಳುತ್ತಿರುವಾಗ ಕನಕಗಿರಿ ಕಡೆಯಿಂದ ರಭಸವಾಗಿ ರಾಂಗ್ ರೂಟಲ್ಲಿ ಬಂದ ಕಾರು ಬೈಕ್ ಸವಾರರಿಗೆ ಡಿಕ್ಕಿ ಹೊಡೆದು ಸುಮಾರು 20 ಮೀಟರ್ ನಷ್ಟು ಬೈಕ್ ಹಾಗು ಸವಾರರನ್ನು ರಸ್ತೆಗೆ ಘರ್ಷಸಿಕೊಂಡು ಹೋಗಿದೆ, ಪರಿಣಾಮ ಬೈಕ್ ಸವಾರರಲ್ಲಿ ಒಬ್ಬನ ಕಾಲು ಮುರಿದಿದ್ದು ಇನ್ನೊಬ್ಬನಿಗೆ ತೆಲೆಗೆ ಬಲವಾಗಿ ಪೆಟ್ಟುಬಿದ್ದಿದೆ ಮತ್ತೊಬ್ಬನಿಗೆ ದೇಹದಲ್ಲಿ ಗಂಭೀರ ಸ್ವರೂಪದ ಗಾಯವಾಗಿದೆ.
ಗಾಯಾಳುಗಳನ್ನು ಸಾರ್ವಜನಿಕ ಉಪವಿಭಾಗ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ.
ಕಾರು ರಾಂಗ್ ರೂಟಲ್ಲಿ ಬಂದು ಬೈಕ್ ಗೆ ಡಿಕ್ಕಿ ಹೊಡೆದಿರುವುದು ಮತ್ತು ಕಾರು ಬೈಕು ಒಂದೇ ಊರಿನವರಾಗಿರುವ ಕಾರಣ ಈ ಅಪಘಾತ ಆಕಸ್ಮಿಕವಲ್ಲದೇ ಪೂರ್ವನಿಯೋಜಿತ ಸಂಚು ಆಗಿರಬಹುದು ಎಂದು ಸ್ಥಳೀಯರು ಅನುಮಾನಿಸುತ್ತಿದ್ದಾರೆ.!?
ನಗರ ಸಂಚಾರಿ ಠಾಣೆಯಲ್ಲಿ
ಪ್ರಕರಣ ದಾಖಲಾಗಿ ಪೊಲಿಸರು ತನಿಖೆ ನಡೆಸುತ್ತಿದ್ದಾರೆ.

ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.

Check Also

ಗಂಗಾವತಿ ನಗರದ ಸಿ,ಬಿ,ಎಸ್, ವೃತ್ತದ ಬಳಿ ರಸ್ತೆ ಅಪಘಾತ.

ಗಂಗಾವತಿ ನಗರದ ಸಿ,ಬಿ,ಎಸ್, ವೃತ್ತದ ಬಳಿ ರಸ್ತೆ ಅಪಘಾತ. ತುಂಗಾವಾಣಿ ಗಂಗಾವತಿ ನ-18 ಗಂಗಾವತಿ ನಗರದ ಜನನಿಬಿಡ ವೃತ್ತವಾದ ಸಿಬಿಎಸ್ …