ನಗರಸಭೆ ಅಧ್ಯಕ್ಷ – ಉಪಾಧ್ಯಕ್ಷ ಮೀಸಲಾತಿ ರದ್ದು ಮಾಡಿ ಹೈಕೋರ್ಟ್ ಆದೇಶ.
ನೂತನ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳು ಅಮಾನತ್ತು.?
ತುಂಗಾವಾಣಿ
ಕೊಪ್ಪಳ ನ-19 ರಾಜ್ಯ ಸರಕಾರ ಅಕ್ಟೋಬರ್ 8 ರಂದು ಹೊರಡಿಸಿದ್ದ ರಾಜ್ಯದ 277 ನಗರಸಭೆ ಪುರಸಭೆ ಹಾಗು ಪಟ್ಟಣ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಆದೇಶವನ್ನು ರಾಜ್ಯ ಹೈಕೋರ್ಟ್ ನ ನ್ಯಾಯಮೂರ್ತಿ ಆರ್ ದೇವದಾಸ್ ರವರ ಏಕ ಸದಸ್ಯ ಪೀಠ ಇಂದು ರದ್ದು ಮಾಡಿದೆ.
ಮೀಸಲಾತಿಯ ಪಟ್ಟಿಯಂತೆ ರಾಜ್ಯದ ಬಹುತೇಕ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ಆಡಳಿತ ಮಂಡಳಿ ರಚನೆಯಾಗಿದ್ದು ಇಂದಿನ ಆದೇಶದಿಂದ ರಾಜ್ಯದ ಎಲ್ಲ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳು ಅಮಾನತ್ತಾಗಿವೆ.
ನಾಲ್ಕು ವಾರಗಳಲ್ಲಿ ಹೊಸ ಮೀಸಲಾತಿಯನ್ನು ಪ್ರಕಟಿಸಲು ಆದೇಶಿಸಿರುವ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಹತ್ತು ದಿನಗಳಲ್ಲಿ ಮೇಲ್ಮನವಿ ಸಲ್ಲಿಸಲೂ ಅವಕಾಶ ನೀಡಿದೆ.
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.