ಗಂಗಾವತಿ ನಗರದ ಸಿ,ಬಿ,ಎಸ್, ವೃತ್ತದ ಬಳಿ
ರಸ್ತೆ ಅಪಘಾತ.
ತುಂಗಾವಾಣಿ
ಗಂಗಾವತಿ ನ-18 ಗಂಗಾವತಿ ನಗರದ ಜನನಿಬಿಡ ವೃತ್ತವಾದ ಸಿಬಿಎಸ್ ವೃತ್ತ ದ ಬಳಿ ರಸ್ತೆ ಅಪಘಾತವಾಗಿ ಯುವಕ ತೀರ್ವ ಗಾಯಗೊಂಡ ಘಟನೆ ನಡೆದಿದೆ.
ನಗರದ ಪ್ರಶಾಂತನಗರ ನಿವಾಸಿ ವಿನಾಯಕ (28) ಸೈಕಲ್ ನಲ್ಲಿ ಟ್ರಾಫಿಕ್ ಸಿಗ್ನಲ್ ದಾಟಿ ತೆರಳುತ್ತಿರುವವಾಗ ಏಕಾಏಕಿ ಹಿಂದಿನ ಚಕ್ರ ಮೇಲೆದ್ದು ನಿಯಂತ್ರಣ ತಪ್ಪಿ ರಸ್ತೆ ಮೇಲೆ ಬೀಳುತ್ತಾನೆ ಹಿಂದಿನಿಂದ ಬರುವ ಲಾರಿಯ ಮುಂದಿನ ಚಕ್ರಗಳು ಯುವಕ ಕಾಲಿನ ಮೇಲೆ ಹರಿದು ತೀರ್ವ ಗಾಯವಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಗೆ ಕರೆದೌಯ್ಯಲಾಗಿದೆ.
ಅಪಘಾತದ ನೇರ ದೃಶ್ಯಾವಳಿ ಗಳು ತುಂಗಾವಾಣಿಗೆ ದೊರೆತಿವೆ.
ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಟ್ರಾಪಿಕ್ ಪಿಎಸ್ಐ ಪುಂಡಲೀಕಪ್ಪ ಜಾವದ ತನಿಖೆ ನಡೆಸುತ್ತಿದ್ದಾರೆ.
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.