Breaking News

ಸ್ಥಳೀಯ ಸಂಸ್ಥೆ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ರದ್ದತಿಗೆ ತಡೆಯಾಜ್ಞೆ.

ಸ್ಥಳೀಯ ಸಂಸ್ಥೆ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ರದ್ದತಿಗೆ ತಡೆಯಾಜ್ಞೆ.

ತುಂಗಾವಾಣಿ
ಕೊಪ್ಪಳ. ನ 25 ನಗರಸಭೆ ಪುರಸಭೆ ಹಾಗು ಪಟ್ಟಣ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ನಿಗದಿಯಾಗಿದ್ದ ಮೀಸಲಾತಿಯನ್ನು ನವೆಂಬರ್ 19 ರಾಜ್ಯ ಹೈಕೋರ್ಟ್ ನ ಏಕ ಸದಸ್ಯ ಪೀಠ ಮಾಡಿದ್ದ ರದ್ದತಿ ಆದೇಶಕ್ಕೆ ಇಂದು ದ್ವಿ ಸದಸ್ಯ ಪೀಠವು ತಡೆಯಾಜ್ಞೆ ನೀಡಿದೆ.


ರಾಜ್ಯದ 277 ಸ್ಥಳೀಯ ಸಂಸ್ಥೆಗಳಿಗೆ ದಿ 08-10-2020 ರಂದು ರಾಜ್ಯ ಸರ್ಕಾರವು ಮೀಸಲಾತಿ ನಿಗದಿ ಪಡಿಸಿ ಆದೇಶ ಹೊರಡಿಸಿತ್ತು ಅದರಂತೆ ಬಹುತೇಕ ಸ್ಥಳಿಯ ಸಂಸ್ಥೆಗಳಿಗೆ ಚುನಾವಣೆ ನಡೆದು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಮಾಡಿಯಾಗಿತ್ತು. ಮೀಸಲಾತಿಯನ್ನು ರೂಸ್ಟರ್ ಪದ್ದತಿಯಂತೆ ನಿಗದಿ ಪಡಿಸಿಲ್ಲವೆಂದು ಕೆಲ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು ವಿಚಾರಣೆ ಬಳಿಕ ಹೈಕೋರ್ಟ್ ನ ಏಕ ಸದಸ್ಯ ಪೀಠವು ಮೀಸಲಾತಿಯನ್ನು ರದ್ದುಗೊಳಿಸಿ ಮುಂದಿನ ನಾಲ್ಕು ವಾರಗಳಲ್ಲಿ ಹೊಸ ಮೀಸಲಾತಿಯನ್ನು ಹೊರಡಿಸಲು ಸೂಚಿಸಿ ಮೇಲ್ಮನವಿ ಸಲ್ಲಿಸಲು ಹತ್ತು ದಿನಗಳ ಕಾಲಾವಕಾಶ ನೀಡಿ ಆದೇಶಿಸಿತ್ತು. ಅದರಂತೆ ರಾಜ್ಯ ಸರಕಾರದ ಪ್ರತಿನಿದಿ ರಾಜ್ಯ ಹೈಕೋರ್ಟ್ ನ ದ್ವಿಸದಸ್ಯ ಪೀಠದಲ್ಲಿ ಮೀಸಲಾತಿ ರದ್ದು ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು ಸರ್ಕಾರದ ಮನವಿಯನ್ನು ಪುರಸ್ಕಿಸಿದ ಹೈಕೋರ್ಟ್ ನ ದ್ವೀಸದಸ್ಯ ಪೀಠ ಸದರಿ ಆದೇಶಕ್ಕೆ ತಡೆಯಾಜ್ಞೆ ನೀಡಿ ವಿಚಾರಣೆ ಮುಂದೂಡಿದೆ.
ನೂತನವಾಗಿ ಆಯ್ಕೆಯಾಗಿದ್ದ ಅಧ್ಯಕ್ಷ ಉಪಾಧ್ಯಕ್ಷ ರಿಗೆ ಈ ತಡೆಯಾಜ್ಞೆ ಆದೇಶದಿಂದಾಗಿ ಸ್ವಲ್ಪ ನಿಟ್ಟುಸಿರು ಬಿಟ್ಟಂತಾಗಿದೆ ಆದರೂ ವಿಚಾರಣೆ ಬಳಿಕ ಅಂತಿಮ ಆದೇಶ ಬರುವವರೆಗೂ ಅಧ್ಯಕ್ಷ ಉಪಾಧ್ಯಕ್ಷರಿಗೆ ಸ್ವಲ್ಪ ಆತಂಕ ವಿರುವುದಂತೂ ಸತ್ಯ.

ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.

Check Also

ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಲು ಅರ್ಹತೆಗಳೇನು.!?

ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಲು ಅರ್ಹತೆಗಳೇನು.? ತುಂಗಾವಾಣಿ ಗಂಗಾವತಿ ನ-13 ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಲು ಯಾವುದೇ ಹೊಸ ಮಾನದಂಡಗಳು …