ರೈತ ನಾಯಕನಿಗೆ ಒಲಿದ ತುಂಗಭದ್ರಾ ಕಾಡಾ ಅಧ್ಯಕ್ಷ ಸ್ಥಾನ.!
ತುಂಗಾವಾಣಿ
ಕೊಪ್ಪಳ ನ 24 ಬಸನಗೌಡ ತುರವಿಹಾಳ ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ಕಾಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಕಾಡಾ ಅಧ್ಯಕ್ಷ ಸ್ಥಾನಕ್ಕೆ ಗಂಗಾವತಿ ಹಿರಿಯ ವಕೀಲರು ರೈತ ನಾಯಕ ಬಿಜೆಪಿ ಮುಖಂಡ ತಿಪ್ಪೆರುದ್ರಸ್ವಾಮಿ ಯವರನ್ನು ತುಂಗಭದ್ರಾ ಕಾಡಾ ಅಧ್ಯಕ್ಷರನ್ನಾಗಿ ನೇಮಿಸಿ ಮುಖ್ಯಮಂತ್ರಿ ಯಡೆಯೂರಪ್ಪ ಆದೇಶ ಹೊರಡಿಸಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ..👇
ನವಂಬರ್-8 ರಂದು ತುಂಗಾವಾಣಿ ನ್ಯೂಸ್ ನಲ್ಲಿ “ತಿಪ್ಪೇರುದ್ರಸ್ವಾಮಿ ಗೆ ಒಲೆಯುತ್ತಾ ಕಾಡಾ ಅಧ್ಯಕ್ಷ ಸ್ಥಾನ” ಎಂದು ವಿಶೇಷ ವರದಿ ಪ್ರಕಟಿಸಿತ್ತು, ತುಂಗಾವಾಣಿ ಸುದ್ದಿ ಇಂದು ನಿಜವಾಗಿದೆ, ತುಂಗಾವಾಣಿ ನ್ಯೂಸ್ ವರದಿಯಿಂದ ಎಚ್ಚೆತ್ತ ಕೊಪ್ಪಳ ರಾಯಚೂರು ಬಳ್ಳಾರಿ ಜಿಲ್ಲೆಯ ರಾಜಕೀಯ ನಾಯಕರು ಮುಖ್ಯಮಂತ್ರಿ ಯವರಲ್ಲಿ ತಿಪ್ಪೆರುದ್ರಸ್ವಾಮಿ ಯವರನ್ನು ಶಿಫಾರಸ್ಸು ಮಾಡಿದ್ದಾರೆ ಎನ್ನಲಾಗುತ್ತಿದೆ.
ಕೊಪ್ಪಳ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಬೆಳೆಸುವಲ್ಲಿ ಪ್ರಮುಖರಾದ ತಿಪ್ಪೆರುದ್ರಸ್ವಾಮಿ ಯವರಿಗೆ ಕಾಡಾ ಅಧ್ಯಕ್ಷ ಸ್ಥಾನ ಸಿಕ್ಕಿರುವುದು ಅವರ ಅಭಿಮಾನಿಗಳ ಆನಂದಕ್ಕೆ ಪಾರವಿಲ್ಲದಂತಾಗಿದೆ.
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.