ಸೀಲ್ ಡೌನ್ ಪ್ರದೇಶದಲ್ಲಿ ಗ್ರಾಹಕರಿಗಾಗಿ ಕಾದು ಕುಳಿತ ಮಣ್ಣೆತ್ತುಗಳು.
ತುಂಗಾವಾಣಿ
ಗಂಗಾವತಿ ಜೂ 20 ಉತ್ತರ ಕರ್ನಾಟಕ ಭಾಗದ ವಿಶೇಷ ಹಬ್ಬಗಳಲ್ಲಿ ಮಣ್ಣೆತ್ತಿನ ಅಮಾವಾಸ್ಯೆಂದು ಆಚರಿಸಲ್ಪಡುವ ಮಣ್ಣೆತ್ತುಗಳ ಹಬ್ಬವೂ ಒಂದು.
ರೈತರು ತಮ್ಮ ತಮ್ಮ ಎತ್ತುಗಳನ್ನು ಕಾರಹುಣ್ಣಿಮೆಯದಿನ ಸಿಂಗರಿಸಿಕೊಂಡು ಊರಲ್ಲಿ ಮೆರವಣಿಗೆ ಮಾಡಿ ನಮ್ಮ ಎತ್ತುಗಳು ಮುಂಬರುವ ಮುಂಗಾರಿಗೆ ಉಳುಮೆ ಮಾಡಲು ಶಕ್ತವಾಗಿವೆ ಎಂದು ತೋರಿಸಿದ ತರುವಾಯ ಹದಿನೈದು ದಿನಗಳ ನಂತರ ಮಳೆ ಬಂದು ಬಂದು ಹೊಲಗದ್ದೆಗಳು ತೇವವಾಗಿರುವ ಬಗ್ಗೆ ತೋರಿಸಲು ಆ ಮಣ್ಣಿನಿಂದ ಎತ್ತುಗಳನ್ನು ಮಾಡಿ ಪೂಜಿಸಿ ಕೃಷಿ ಚಟುವಟಿಕೆ ಪ್ರಾರಂಭಿಸುತ್ತಾರೆ.
ನಗರ ಪ್ರದೇಶದಲ್ಲಿ ವಾಸಿಸುವ ರೈತ ಕುಟುಂಬಗಳು ಸ್ಥಳಿಯ ಕುಂಬಾರರು ತಯಾರಿಸಿರುವ ಮಣ್ಣೆತ್ತುಗಳನ್ನು ಖರೀದಿಸಿ ಹೂಹಣ್ಣುಗಳಿಂದ ಸಿಂಗರಿಸಿ ಪೂಜೆ ಮಾಡುತ್ತಾರೆ ಅದರಂತೆ ಗಂಗಾವತಿ ನಗರದ ಸೀಲ್ ಡೌನ್ ಪ್ರದೇಶವಾದ ಗಾಂಧಿ ವೃತ್ತದಲ್ಲಿ ಸ್ಥಳೀಯ ಕುಂಬಾರರ ಮಣ್ಣೆತ್ತುಗಳು ಗ್ರಾಹಕರಿಗಾಗಿ ಕಾದು ಕುಳಿತಿರುವ ಚಿತ್ರ ಕಂಡುಬಂತು.
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.