Breaking News

ಬೀದಿಬದಿ ವ್ಯಾಪಾರಿಗಳ ಸಭೆ. QR ಕೋಡ್ ಹೊಂದಿರುವ ಯುನಿಕ್ ಕಾರ್ಡ್ ವಿತರಿಸಲು ಕ್ರಮ.

ಬೀದಿಬದಿ ವ್ಯಾಪಾರಿಗಳ ಸಭೆ.
QR ಕೋಡ್ ಹೊಂದಿರುವ ಯುನಿಕ್ ಕಾರ್ಡ್ ವಿತರಿಸಲು ಕ್ರಮ.

ತುಂಗಾವಾಣಿ
ಗಂಗಾವತಿ ಜೂ-11 ಗಂಗಾವತಿ ನಗರಸಭೆ ಕಾರ್ಯಾಲಯದಲ್ಲಿ ಇಂದು ಬೀದಿಬದಿ ವ್ಯಾಪಾರಸ್ಥರ ಸಭೆಯನ್ನು ಏರ್ಪಡಿಸಲಾಗಿತ್ತು.
ಸಭೆಯಲ್ಲಿ 2020-21 ಸಾಲಿನ ಬೀದಿಬದಿ ವ್ಯಾಪಾರಸ್ಥರ 137 ಫಲಾನುಭವಿಗಳ ಗುರುತಿಸಿ ಐಡಿಕಾರ್ಡ್ ವಿತರಿಸುವುದು, ವ್ಯವಹಾರ ಸಮಯದಲ್ಲಿ ಶುಚಿತ್ವ ಕಾಪಾಡುವುದು, ಸಂಚಾರಿ ನಿಯಮಗಳನ್ನು ಪಾಲಿಸುವುದು ಸೇರಿದಂತೆ ನಗರದಾದ್ಯಂತ ವ್ಯಾಪಾರಿ ವಲಯಗಳನ್ನು ಮೂಲಭೂತ ಸೌಕರ್ಯಗಳೊಂದಿಗೆ ಸ್ಥಾಪಿಸುವುದರ ಕುರಿತು ಚರ್ಚಿಸಲಾಯಿತು.
ಸಮುದಾಯ ಸಂಘಟನಾ ಅಧಿಕಾರಿಗಳಾದ ಶ್ರೀಮತಿ ಸರಸ್ವತಿ ರವರು ಸಭೆಯಲ್ಲಿ ಮಾಹಿತಿ ನೀಡುತ್ತಾ 2014-15 ನೆ ಸಾಲಿನಿಂದ 2019-20 ಸಾಲಿನವರೆಗೆ 1383 ಬೀದಿಬದಿ ವ್ಯಾಪಾರಸ್ಥರನ್ನು ಗುರುತಿಸಿ ಐಡಿಕಾರ್ಡಗಳನ್ನು ವಿತರಿಸಲಾಗಿದೆ, ಮುಂದುವರೆದು 2020-21 ಸಾಲಿನಲ್ಲಿ ನಗರದಲ್ಲಿ ಉಳಿದಿರುವ ಬೀದಿಬದಿ ವ್ಯಾಪಾರಸ್ಥರಿಗೆ ಸರ್ವೆ ಮಾಡಿ ಗುರುತಿನ ಚೀಟಿ ವಿತರಿಸಬೇಕಾಗಿದೆ ಎಂದರು


ಪೌರಾಯುಕ್ತರು ಹಾಗು ಪಟ್ಟಣ ವ್ಯಾಪಾರಿ ಸಮಿತಿ ಅಧ್ಯಕ್ಷರಾದ ಕೆ ಸಿ ಗಂಗಾಧರ್ ರವರು ಮಾತನಾಡಿ 2014-15 ನೇ ಸಾಲಿನಿಂದ ಇಲ್ಲಿಯವರೆಗೆ ನೀಡಿರುವ ಗುರುತಿನ ಚೀಟಿ ನೀಡಿರುವ ಬಿದಿಬದಿ ವ್ಯಾಪಾರಿಗಳನ್ನು ಪುನರ್ ಪರಿಶೀಲಿಸಿ ಯುನಿಕ್ ಕೋಡ್ ಹೊಂದಿರುವ ಗುಣಮಟ್ಟದ ಐಡಿಕಾರ್ಡಗಳನ್ನು ನೀಡಲು ಮತ್ತು ಸುರಕ್ಷಿತ ಅಂತರದೊಂದಿಗೆ ವ್ಯಾಪಾರ ಮಾಡಲು ನಗರದ ಆಯಕಟ್ಟುಗಳಲ್ಲಿ ವಲಯಗಳನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು ಐಡಿಕಾರ್ಡ ಪಡೆದ ವ್ಯಾಪಾರಿಗಳು ಸರಕಾರದಿಂದ ಕೊಡ ಮಾಡುವ ಸೌಲಭ್ಯಗಳನ್ನು ಪಡೆದು ಸ್ವಾವಲಂಬಿ ಜೀವನ ನಡೆಸಲು ಹಾಗು ಕರೋನ ವೈರಸ್ ಹರಡುತ್ತಿರುವ ಈ ಸಂದರ್ಭದಲ್ಲಿ ಸುರಕ್ಷಿತ ಅಂತರದೊಂದಿಗೆ ವ್ಯವಹಾರ ನಡೆಸಲು ತಿಳಿಸಲಾಯಿತು.


ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡರಾದ ಭಾರದ್ವಾಜ್ ಬೀದಿಬದಿ ವ್ಯಾಪಾರಿಗಳಾದ ಪ್ರೂಟ್ ಬಾಬಾ, ರೋಷನ್, ಖಾಸಿಮ್, ಅಕ್ಬರ್ ಬಾಗವಾನ,ಟಿ.ಬಸವರಾಜ,ಇಡ್ಲಿ ಪಂಪಣ್ಣ, ಇನ್ನಿತರರು ಇದ್ದರು.

ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.

Get Your Own News Portal Website 
Call or WhatsApp - +91 84482 65129