ಕಾಂಗ್ರೆಸ್ ಡಿಜಟಲ್ ಸದಸ್ಯತ್ವ ಅಭಿಯಾನದಲ್ಲಿ ಇಕ್ಬಾಲ್ ಅನ್ಸಾರಿ ನಂ 1.
ಡಿಕೆ ಶಿವಕುಮಾರ್ ಶ್ಲಾಘನೆ.
ತುಂಗಾವಾಣಿ
ಗಂಗಾವತಿ ಮಾ 23 ರಾಜ್ಯ ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವ ಅಭಿಯಾನದಲ್ಲಿ ಗಂಗಾವತಿ ಕ್ಷೇತ್ರವೂ ನಂ 1 ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಂತಸ ವ್ಯಕ್ತ ಪಡಿಸಿದ್ದಾರೆ,
ಬೀದರ್ ಜಿಲ್ಲೆ ಕಾಂಗ್ರೆಸ್ ಡಿಜಿಟಲ್ ಅಭಿಯಾನದ ಕಾರ್ಯಕ್ರಮದಲ್ಲಿ ಮಾತನಾಡುತ್ತ ರಾಜ್ಯದಲ್ಲಿ ಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು ಗಂಗಾವತಿ ಕ್ಷೇತ್ರದ ಇಕ್ಬಾಲ್ ಅನ್ಸಾರಿ ನೇತೃತ್ವದಲ್ಲಿ ಅತಿ ಹೆಚ್ಚು ಅಂದರೆ 60 ಸಾವಿರ ಸದಸ್ಯರು ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆದಿದ್ದಾರೆ ಇನ್ನೆರಡು ಮೂರು ದಿನಗಳಲ್ಲಿ ಒಂದು ಲಕ್ಷ ಸದಸ್ಯ ಗುರಿ ಮುಟ್ಟಲಿದ್ದಾರೆ ಎಂದರು ನಂತರ ವಿಡಿಯೋ ಕಾಲ್ ಮುಖಾಂತರ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯವರಿಗೆ ಅಭಿನಂದನೆ ತಿಳಿಸಿದ ಡಿಕೆಸಿ ಎರಡು ಮೂರು ದಿನಗಳಲ್ಲಿ ರಾಹುಲ್ ಗಾಂಧಿಯವರು ನಿಮ್ಮ ಜೊತೆ ಮಾತನಾಡಲಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಸದಸ್ಯತ್ವ ಅಭಿಯಾನದ ಪ್ರಾರಂಭದಲ್ಲಿ ಸದಸ್ಯರ ನೊಂದಣಿಯಲ್ಲಿ ಕಾರ್ಯಕರ್ತರ ನಿರಾಸಕ್ತಿಯ ಬಗ್ಗೆ ತುಂಗಾವಾಣಿಯು ‘ ಕಾಂಗ್ರೆಸ್ ಸದಸ್ಯತ್ವ ನೊಂದಣಿ ಅನ್ಸಾರಿ ಬೇಸರ ‘ ಎಂಬ ಶೀರ್ಷಿಕೆ ಯಲ್ಲಿ ವರದಿ ಪ್ರಕಟಿಸಿತ್ತು.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.