ಕೊಪ್ಪಳ : ಕೊಟ್ಟಿ ದಾಖಲೆ ಸೃಷ್ಟಿಕರ್ತ ಅಮಾನತ್ತು.
ತುಂಗಾವಾಣಿ
ಕೊಪ್ಪಳ ಡಿ 07 ಖಾಸಗಿ ಜಮೀನನ್ನು ಕೊಟ್ಟಿ ದಾಖಲೆ ಸೃಷ್ಟಿಸಿ ಅನ್ಯರ ಹೆಸರಿಗೆ ವರ್ಗಾವಣೆ ಕರ್ತವ್ಯಲೋಪ ವೆಸಗಿದ ಕನಕಗಿರಿ ತಾಲೂಕಿನ ನವಲಿ ಹೋಬಳಿಯ ಕಂದಾಯ ನಿರೀಕ್ಷಕ ಗುರುರಾಜ ನೂಲ್ವಿ ರನ್ನು ಕೊಪ್ಪಳ ಜಿಲ್ಲಾಧಿಕಾರಿಗಳು ಕರ್ತವ್ಯ ಲೋಪದಡಿಯಲ್ಲಿ ಅಮಾನತ್ತು ಮಾಡಿ ಆದೇಶ ನೀಡಿದ್ದಾರೆ.
ಕನಕಗಿರಿ ತಾಲೂಕಿನ ನವಲಿ ಹೋಬಳಿಯ ಸರ್ವೆ ನಂ 279/????? ರ 5 ಎ 24 ಗುಂಟೆ ಜಮೀನು ವರ್ಗಾವಣೆಗೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಡೆದಿರುವ ಬಗ್ಗೆ ಕೊಪ್ಪಳದ ಮಹಮ್ಮದ್ ಪೀರಸಾಬ ಬೆಳಗಟ್ಟಿ ಕೊಪ್ಪಳ ಎಂಬುವವರು ಜಿಲ್ಲಾಧಿಕಾರಿಗಳಿಗೆ ಕನಕಗಿರಿ ತಾಲೂಕಿನ ನವಲಿ ಹೋಬಳಿಯ ಕಂ ನೀ ಗುರುರಾಜ ನೂಲ್ವಿ ವಿರುದ್ದ ದೂರನ್ನು ನೀಡಿದ್ದರು
ದೂರಿನನ್ವಯ ಪರೀಶಿಲಿಸಲಾಗಿ
ಸ ನಂ 279/????? ವಿಸ್ತೀರ್ಣ 5.24 ಎ ಗುಂಟೆ ಜಮೀನನ್ನು ಕೊಟ್ಟಿ ದಾಖಲೆಗಳ ಆಧಾರದ ಮೇಲೆ ನಾಯಕ ಸಮುದಾಯದ ಸರೋಜ ಗಂಡ ಲಕ್ಷ್ಮೀಪತಿ ಯವರ ಹೆಸರಿಗೆ ವರ್ಗಾವಣೆ ಮಾಡಿರುವುದು ಹಾಗು ಕರ್ತವ್ಯ ಲೋಪ ವೆಸಗಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಕಂದಾಯ ನಿರೀಕ್ಷಕ ಗುರುರಾಜ ನೂಲ್ವಿಯನ್ನು ಅಮಾನತ್ತು ಮಾಡಿದ್ದಾರೆ.
ಘಟನೆ ವಿವರ.
ನವಲಿ ಹೋಬಳಿಯ ಸ ನಂ 279/????? ವಿಸ್ತೀರ್ಣ 5 ಎ 24 ಗುಂಟೆ ಜಮೀನು ಕುರುಬ ಸಮುದಾಯದ ಲಿಂಗವ್ವ ಗಂ ಬಾಲಪ್ಪ ಎಂಬುವವರಿಗೆ ಸೇರಿದ ಜಮೀನಾಗಿದ್ದು ಅದನ್ನು 20 ರೂ ಬೆಲೆಯ ಸ್ಟಾಂಪ್ ಪೇಪರನಲ್ಲಿ ಕೊಟ್ಟಿ ವಂಶಾವಳಿ ಸೃಷ್ಟಿಸಿ ನಾಯಕ ಸಮುದಾಯದ ಅದೇ ಗ್ರಾಮದ ಗ್ರಾಮ ಸಹಾಯಕ ಲಕ್ಷ್ಮೀಪತಿಯ ಹೆಂಡತಿ ಸರೋಜಾ ಹೆಸರಿಗೆ ವರ್ಗಾವಣೆ ಮಾಡಲಾಗಿತ್ತು ಆದರೆ ಸರೋಜ ಗಂಡ ಲಕ್ಷೀಪತಿ ಇನ್ನೊಂದು ದೂರು ನೀಡಿ ನವಲಿ ಗ್ರಾಮದ ಕುರುಬ ಸಮುದಾಯದ ಲಿಂಗವ್ವ ಗಂ ಬಾಲಪ್ಪ ಎಂಬುವವರ ಭೂಮಿಯನ್ನು ನನ್ನ ಹೆಸರಿಗೆ ಕೊಟ್ಟಿ ವಂಶಾವಳಿ ಸೃಷ್ಟಿಸಿ ವರ್ಗಾವಣೆ ಮಾಡಿರುತ್ತಾರೆ ಆದರೆ ನವಲಿಯಲ್ಲಿ ನಮ್ಮ ಯಾವುದೇ ಜಮೀನು ಇರುವುದಿಲ್ಲ ವೆಂದು ವಿನಂತಿಸಿಕೊಂಡಿದ್ದರು,
ಆಯುಕ್ತರ ಎದುರೆ ದುಂಡಾ ವರ್ತನೆ.!
ವಿಚಾರಣೆ ಸಂದರ್ಭದಲ್ಲಿ ಕೊಪ್ಪಳದ ಸಹಾಯಕ ಆಯುಕ್ತರ ಕಛೇರಿಯಲ್ಲೇ ಕಂ ನೀ ಗುರುರಾಜ ನೂಲ್ವಿ ದೂರುದಾರನಿಗೆ ದಾಖಲೆಗಳು ಬೇಕಾದರೆ ನವಲಿ ಗ್ರಾಮಕ್ಕೆ ಬಾ ನನ್ನ ತಾಕತ್ತು ತೋರಿಸುತ್ತೇನೆ ಎಂದು ಗುಂಡಾ ಪಡೆ ಕಟ್ಟಿಕೊಂಡು ಧಮ್ಕಿ ಹಾಕುತ್ತಿರುವ ಬಗ್ಗೆಯೂ ಮತ್ತೊಂದು ದೂರನ್ನು ದೂರುದಾರ ಜಿಲ್ಲಾಧಿಕಾರಿಗೆ ನೀಡಿದ್ದ.
ಆದಾಪುರ ಗ್ರಾಮದಲ್ಲಿಯೂ ಸಹ ಜಮೀನುಗಳ ಅಕ್ರಮ ವರ್ಗಾವಣೆ ಆಗುತ್ತಿರುವ ಬಗ್ಗೆ ಅನೇಕ ದೂರುಗಳು ಈತನ ಮೇಲೆ ವಿಚಾರಣೆ ಹಂತದಲ್ಲಿವೆ ಈ ಬಗ್ಗೆ ತುಂಗಾವಾಣಿಯಲ್ಲಿ ಈ ಹಿಂದೆ ಸುದ್ದಿ ಪ್ರಕಟಿಸಿತ್ತು.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.